ಪೆಟ್ರೋಲ್ ಬೆಲೆ ಏರುತ್ತಿರುವ ಸಮಯದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 ಬೈಕ್ ಗಳು ಯಾವ್ಯಾವು ಗೊತ್ತೇ??

ಪೆಟ್ರೋಲ್ ಬೆಲೆ ಏರುತ್ತಿರುವ ಸಮಯದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 ಬೈಕ್ ಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಮಧ್ಯಮ ವರ್ಗದ ಜನರು ಅಥವಾ ಕೆಳ ಮಧ್ಯಮ ವರ್ಗದ ಜನರು ತಮ್ಮ ಕೆಲಸಕ್ಕಾಗಿ ಅವಲಂಬಿಸಿರುವುದು ಬೈಕ್ ಗಳನ್ನೇ. ಹಾಗಾಗಿ ಕಡಿಮೆ ದರದಲ್ಲಿ ಹೆಚ್ಚು ಮೈಲೇಜ್ ಕೊಡುವಂಥ ಬೈಕ್ ಗಳನ್ನೇ ಕೊಳ್ಳಲು ಬಯಸುತ್ತಾರೆ. ಅದರಲ್ಲೂ ಪೆಟ್ರೋಲ್ ಬೆಲೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ಪೆಟ್ರೋಲ್ ಕುಡಿಯುವ ಹೆಚ್ಚು ಕಿಲೋಮೀಟರ್ ಮೈಲೇಜ್ ಕೊಡುವ ಗಾಡಿಯನ್ನೇ ಜನ ಬಯಸುತ್ತಾರೆ.

ಜನರ ಈ ಬೇಡಿಕೆಯನ್ನು ಅಂದಿನಿಂದ ಈಡೇರಿಸಿಕೊಂಡು ಬಂದಿರುವುದರಲ್ಲಿ ಹಿರೋ ಕಂಪನಿಗೆ ಮೊದಲ ಸ್ಥಾನ. ಹಾಗಾದರೆ ಬನ್ನಿ ಹಿರೋ ದ ಟಾಪ್ 5 ದ್ವಿಚಕ್ರ ವಾಹನಗಳು ಯಾವವು ನೋಡೋಣ. ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಇಂಧನ ದಕ್ಷತೆಯನ್ನು ಒದಗಿಸುವ ಬೈಕ್ ನಮ್ಮ ಭಾರತದಲ್ಲಿಯೂ ಲಭ್ಯವಿದೆ ಎಂದರೆ ಅದು ನಮ್ಮ ಹಿರೋ ಕಂಪನಿಯ ಬೈಕ್ ಗಳು ಮಾತ್ರ. ಹೆಚ್ ಎಫ್ ಡಿಲಕ್ಸ್ 83 ಕಿಮಿ ಮೈಲೇಜ್ ನೀಡುತ್ತದೆ. ಪ್ರಯಾಣಿಕರರಿದ ಉತ್ತಮ ಬೈಕ್ ಎನ್ನುವ ಫುಲ್ ಮಾರ್ಕ್ ಪಡೆದುಕೊಡ ಹೆಚ್ ಎಫ್, ಡಿಲಕ್ಸ್ನ ಆರಂಭಿಕ ಬೆಲೆ 52, 037 ರೂ.

ಇನ್ನು 110 ಸಿಸಿಯ ಹೀರೋ ಪ್ಯಾಶನ್ ಪ್ರೊ ಬಿಎಸ್ 6 ಬೈಕ್ 70 ಕಿಮೀ ಮೈಲೇಜ್ ನೀಡುತ್ತದೆ. ಬಿಎಸ್ 6 ಎಂಜಿನ್ ಹೊಂದಿರುವ ಈ ಬೈಕ್ ನ ಆರಂಭಿಕ ಬೆಲೆ 69,698 ರೂ. ಆಗಿದೆ. ಹೀರೋ ಪ್ಯಾಶನ್ ಪ್ರೊ ಬೈಕ್ ಕೂಡ ರೈಡರ್ಸ್ ನ ಫೇವರೇಟ್ ಬೈಕ್ ಎನಿಸಿದೆ. ಹಾಗೆಯೇ ಹೀರೋ ಸ್ಪ್ಲೆಂಡರ್ ಪ್ಲಸ್ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್ ಎನ್ನೋದು ಹಲವರಿಗೆ ಗೊತ್ತು. ಈ ಬೈಕ್ 97.2 ಸಿಸಿ ಎಂಜಿನ್ ನಿಂದ ಚಾಲಿತವಾಗಿ 80.6 ಕಿಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ 63,864 ರಿಂದ ಪ್ರಾರಂಭವಾಗುತ್ತದೆ.