ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೀವನದ ಕಹಿ ಘಟನೆಯನ್ನು ತೆರೆದಿಟ್ಟ ಸೂರ್ಯವಂಶ ಖ್ಯಾತಿಯ ನಟಿ, ನಾಯಕ ನಟನ ಮುಖವಾಡವನ್ನು ಬಿಚ್ಚಿಟ್ಟ ಇಶಾ ಕೊಪ್ಪಿಕರ್.

4,582

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟಿಯರು ಬಂದು ನಟಿಸಿ ಹೋಗಿದ್ದಾರೆ. ಅವರಲ್ಲಿ ಇಂದು ನಾವು ಕನ್ನಡಿಗರು ಸದಾಕಾಲ ನೆನಪಿಟ್ಟುಕೊಳ್ಳುವಂತಹ ಚಿತ್ರದಲ್ಲಿ ನಟಿಸಿರುವಂತಹ ನಟಿಯೊಬ್ಬರ ಕುರಿತಂತೆ ಹೇಳಲಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಇಶಾ ಕೊಪ್ಪಿಕರ್ ರವರ ಬಗ್ಗೆ. ನಟಿ ಇಶಾ ಕೊಪ್ಪಿಕರ್ ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಚಿತ್ರ ಸೂರ್ಯವಂಶ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಪಾತ್ರ ಅಂದಿನ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡಿದ್ದು ಹಾಗೂ ಚಿತ್ರದ ಗೆಲುವಿಗೆ ಕಾರಣವಾದ ಪಾತ್ರಗಳಲ್ಲಿ ಇದು ಕೂಡ ಒಂದಾಗಿದೆ. ಕೇವಲ ಕನ್ನಡ ದಲ್ಲಿ ಮಾತ್ರವಲ್ಲದೆ ಭಾಷಾ ತಾರೆಯಾಗಿ ಕೂಡ ಮಿಂಚಿದ್ದಾರೆ ನಟಿ ಇಶಾ ಕೊಪ್ಪಿಕರ್ ಅವರು. ಇಶಾ ಕೊಪ್ಪಿಕರ್ ರವರು ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. 2009 ರಲ್ಲಿ ಮದುವೆಯಾದ ನಂತರ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡಿದ್ದಾರೆ. ಆದರೆ ಇತ್ತೀಚಿಗಷ್ಟೇ ಅವರು ಚಿತ್ರರಂಗಕ್ಕೆ ಹೊಸಬರು ಆಗಿದ್ದ ಸಂದರ್ಭದಲ್ಲಿ ನಡೆದಂತಹ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ನಿಮಗೆ ಗೊತ್ತಿರುವ ಹಾಗೆ ಭಾರತದ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಆಗಾಗ ಕಾಸ್ಟಿಂಗ್ ಕೌಚ್ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಇಶಾ ಕೊಪ್ಪಿಕರ್ ರವರ ಜೀವನದಲ್ಲಿ ಕೂಡ ಇಂತಹದೇ ಘಟನೆ ನಡೆಯುವ ಸಾಧ್ಯತೆ ಇತ್ತು. ಚಿತ್ರದ ನಾಯಕ ನಟ ಅಂದಿನ ಕಾಲದಲ್ಲಿ ಇವರನ್ನು ಏಕಾಂತವಾಗಿ ತನ್ನ ಜೊತೆಗೆ ಬರುವಂತೆ ಹೇಳುತ್ತಾರೆ. ಅಲ್ಲಿಗೆ ಹೋದ ನಂತರ ಇಶಾ ಕೊಪ್ಪಿಕರ್ ಅವರಿಗೆ ಆತನ ಒಳಗುಟ್ಟು ತಿಳಿಯುತ್ತದೆ. ಆಗ ತಾನು ಪ್ರತಿಭೆ ಆಧಾರವಾಗಿ ಇಲ್ಲಿ ಬಂದಿದ್ದೇನೆ ಹೊರತು ಇಂತಹ ಕಾರ್ಯಕ್ರಮ ಎಂಬುದನ್ನು ಖಾರವಾಗಿ ತಿಳಿಸುತ್ತಾರೆ. ಈ ಕಾರಣದಿಂದ ಕೋಪಗೊಂಡ ನಾಯಕ ಅವನ ಚಿತ್ರದಿಂದ ನಾಯಕಿಯ ಸ್ಥಾನದಿಂದ ಇಶಾ ಕೊಪ್ಪಿಕರ್ ಅವರನ್ನು ಹೊರಹಾಕುತ್ತಾನೆ. ಆದರೆ ಅದಾದ ನಂತರ ಅವರ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಬಂದಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಸ್ಟಾರ್ ನಟಿಯಾಗಿ ಬೆಳೆದುಬಂದಿದ್ದಾರೆ. ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಖಂಡಿತವಾಗಿ ಆ ದೇವರು ಫಲವನ್ನು ನೀಡುತ್ತಾನೆ ಎಂಬುದಕ್ಕೆ ಇದೇ ಸಾಕ್ಷಿ.

Get real time updates directly on you device, subscribe now.