ರಾಹುವಿನ ಸ್ಥಾನ ಪಲ್ಲಟ, ಜ್ಯೋತಿಷ್ಯಾಸ್ತ್ರದ ಪ್ರಕಾರ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ ಭಾರತದ ಮೇಲೆ ಹೇಗಿರಲಿದೆ ಗೊತ್ತೇ??

ರಾಹುವಿನ ಸ್ಥಾನ ಪಲ್ಲಟ, ಜ್ಯೋತಿಷ್ಯಾಸ್ತ್ರದ ಪ್ರಕಾರ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ ಭಾರತದ ಮೇಲೆ ಹೇಗಿರಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಮಾನ್ಯವಾಗಿ ರಾಹುವನ್ನು ಕೆಟ್ಟ ಗ್ರಹವೆಂದು ಪರಿಗಣಿಸಲಾಗಿದೆ. ಮಾರ್ಚ್ 17, 2022 ರಂದು, ರಾಹು, ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. 18 ತಿಂಗಳ ನಂತರ ರಾಹುವಿನ ರಾಶಿ ಬದಲಾವಣೆಯು ಇಡೀ ಜಗತ್ತಿನ ಮೇಲೆ ಅಪಾರ ಪರಿಣಾಮ ಬೀರಲಿದೆ ಎನ್ನಲಾಗುತ್ತದೆ. ನಮ್ಮ ದೇಶವೂ ಕೂಡ ಇದರ ಹೊರತಾಗಿಲ್ಲ. ಹಾಗಾದರೆ ರಾಹುವಿನ ನಡೆ ಯಾವೆಲ್ಲಾ ಪರಿಣಾಮ ಬೀರಲಿದೆ ನೋಡೋಣ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತು ಗ್ರಹಗಳು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಮಾರ್ಚ್ 17 ರಂದು, ರಾಹು ವೃಷಭ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದು ಮುಂದಿನ ಒಂದುವರೆ ವರ್ಷಗಳ ಕಾಲ ಹಲವು ಬದಲಾವಣೆಗಳಿಗೆ ಕಾರಣವಾಗಬಹುದು. ಈ ಬದಲಾವಣೆ ಆಹಾರ ಪಾನೀಯಗಳ ಮೇಲೆ ಪರಿಣಾಮ ಬೀರಬಹುದು. ರಾಹುವು ಮೇಷರಾಶಿಗೆ ಪ್ರವೇಶಿಸಿದ ಕೂಡಲೇ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಭಾರತದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನಬಳಕೆಯ ವಸ್ತುಗಳ ಬೆಲೆ ಕೂಡ ದುಪ್ಪಟ್ಟಾಗಲಿದೆ.

ಇನ್ನು ರಾಹುವಿನ ಈ ಸಂಕ್ರಮಣ ಭಾರತದ ರಾಜಕೀಯದಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಗಳಿವೆ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ರಾಜಕೀಯದಲ್ಲಿ ಅಪಾರ ಬದಲಾವಣೆಗಳಾಗಬಹುದು. ಅಲ್ಲದೇ ದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಂತಹ ನೈಸರ್ಗಿಕ ವಿಕೋಪಗಳು ಸಂಭವಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತದೆ. ಉಕ್ರೇನ್ ಮತ್ತು ರಷ್ಯಾ ವಿಶ್ವದ ಅತಿದೊಡ್ಡ ಗೋಧಿ ಉತ್ಪಾದಿಸುವ ದೇಶಗಳು.ಈ ಯುದ್ದದಿಂದಾಗಿ ಧಾನ್ಯಗಳ ಬೆಲೆ ಕೂಡ ಹೆಚ್ಚಾಗಲಿದೆ. ರಾಹುವಿನ ಸಂಕ್ರಮಣವು ಭಾರತದಲ್ಲಿ ಅಕಾಲಿಕ ಮಳೆಯನ್ನು ಉಂಟುಮಾಡುತ್ತದೆ, ಇದು ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಅಪಾರ ಹಾನಿಯನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯಲ್ಲಿಯೂ ಅಪಾರ ಏರಿಳಿತಗಳಿಗೆ ಕಾರಣವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ತುಂಬಾ ಯೋಚಿಸಿ ಹಣ ಹೂಡಿಕೆ ಮಾಡಬೇಕು.