ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದ ಈ ಸುಂದರಿಯರಿಗೆ ಕೊನೆಗೆ ಅವರೇ ಸೌಂದರ್ಯವೇ ಮುಳುವಾಯ್ತೆ?? ಅಷ್ಟಕ್ಕೂ ನಡೆದ್ದದೇನು ಗೊತ್ತೇ??

531

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ವರ್ಷವಷ್ಟೇ ಮಿಸ್ ಕೇರಳ ವಿನ್ನರ್ ಹಾಗೂ ರನ್ನರ್-ಅಪ್ ಆಗಿರುವ ಅನ್ಸಿ ಕಬೀರ್ ಹಾಗೂ ಅಂಜನ ಶಾಜನ್ ರವರ ಅಪಘಾ’ತದಲ್ಲಿ ಸಂಭವಿಸಿದ ಅಂತಹ ಮರಣದ ಕುರಿತಂತೆ ನಿಮಗೆಲ್ಲಾ ಗೊತ್ತಿದೆ. ಎಲ್ಲರೂ ಇದನ್ನು ಸಾಮಾನ್ಯ ಅಪಘಾತದ ಮರಣ ಎಂಬುದಾಗಿ ಭಾವಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಒಂದೊಂದಾಗಿ ಗುಟ್ಟುಗಳು ಬಿಡುಗಡೆಯಾಗುತ್ತಾ ಬಂದಿವೆ. ಹಾಗಿದ್ದರೆ ಇದರ ಹಿಂದೆ ಇರುವ ರಹಸ್ಯವಾದರೂ ಏನು ಹಾಗೂ ಇವರಿಬ್ಬರ ಹಿನ್ನೆಲೆಯೇನು ಎಂಬ ಕುರಿತಂತೆ ನಿಮಗೆ ತಿಳಿಸುತ್ತೇವೆ ಬನ್ನಿ.

ಅನ್ಸಿ ಕಬೀರ್ ಅಲ್ಲಿನ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಇನ್ನೂ ಅಂಜನಾ ಶಾಜನ್ ಆಯುರ್ವೇದಿಕ್ ವೈದ್ಯರಾಗಿದ್ದರು. ಇನ್ನು ಇವರಿಬ್ಬರು ಪರಮ ಸುಂದರಿಯರು ಕೂಡ ಆಗಿದ್ದರು. ಇದೇ ಕಾರಣಕ್ಕಾಗಿ 2019 ರಲ್ಲಿ ಮಿಸ್ ಕೇರಳ ಸ್ಪರ್ಧೆಯಲ್ಲಿ ಭಾಗವಹಿಸಿ ಅನ್ಸಿ ಕಬೀರ್ ವಿನ್ನರ್ ಆದರೆ, ಅಂಜನ ಶಾಜನ್ ರನ್ನರ್-ಅಪ್ ಆಗುತ್ತಾರೆ. ಇದರಿಂದ ಅವರ ಪರಿಚಯವಾಗಿ ಸ್ನೇಹ ಗಾಢವಾಗಿ ಮುಂದುವರೆಯುತ್ತದೆ. ಅನ್ಸಿ ಕಬೀರ್ ಮುಸ್ಲಿಂ ಫ್ಯಾಮಿಲಿಯವಳಾಗಿದ್ದರೂ ಕೂಡ ಅವಳ ಆಸೆಗೆ ಮನೆಯವರ ಅಡ್ಡಗೋಡೆ ಇರಲಿಲ್ಲ. ಹಲವಾರು ಜಾಹೀರಾತುಗಳಲ್ಲಿ ಕೂಡ ಮಲಯಾಳಂ ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡಿದ್ದಳು. ಅಂಜನಾ ಸಂಪ್ರದಾಯಸ್ಥ ಕುಟುಂಬದ ವಳಾಗಿದ್ದರು ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಅವಕಾಶಗಳು ಸಿಗಲು ಪ್ರಾರಂಭವಾದಾಗ ತನ್ನ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಸಂಪೂರ್ಣವಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಳು.

ಇವರಿಬ್ಬರ ಫ್ಯೂಚರ್ ಇನ್ನೇನು ಸೆಟಲ್ ಆಗುವುದರಲ್ಲಿತ್ತು. ಅಷ್ಟರಲ್ಲಾಗಲೇ ಇಬ್ಬರೂ ಕೂಡ ಕಾರಿನ ಅಪಘಾ’ತದಲ್ಲಿ ಮರಣವನ್ನು ಹೊಂದಿದರು‌‌. ಅಂದು ನುಜ್ಜುಗುಜ್ಜಾದ ಕಾರಲ್ಲಿ ಇವರಿಬ್ಬರ ಜೊತೆಗೆ ಮೊಹಮ್ಮದ್ ಎನ್ನುವ ಇನ್ನೊಬ್ಬ ಯುವಕ ಕೂಡ ಮರಣವನ್ನು ಹೊಂದಿದ. ಆದರೆ ಅಬ್ದುಲ್ ಎನ್ನುವಾತ ಮಾತ್ರ ಅಂದರೆ ಅವರ ಡ್ರೈವರ್ ಬಚಾವಾಗಿದ್ದ. ತನಿಖೆ ನಡೆಸಿದಾಗ ಆತನ ದೇಹದಲ್ಲಿ ಆಲ್ಕೋಹಾಲ್ ಅಂಶ ಇದ್ದುದು ಕಂಡುಬರುತ್ತದೆ. ಹೀಗಾಗಿ ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದ ಸಂದರ್ಭದಲ್ಲಿ ಆತನನ್ನು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಜೈಲಿಗೆ ತಳ್ಳಲಾಗುತ್ತಿದೆ. ಮೊದಮೊದಲಿಗೆ ನೋಡಿದವರಿಗೆ ಇದು ಕೇವಲ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಎಂಬ ಹಾಗೆ ಕಾಣುತ್ತಿತ್ತು.

ಘಟನೆ ನಡೆದ ರಾತ್ರಿ ಡೇನಿಯಲ್ ಡೇವಿಸ್ ಎಂಬಾತ ಅದೇ ರಸ್ತೆಯಲ್ಲಿ ದಿನಾಲು ತನ್ನ ಮನೆಗೆ ಹೋಗುತ್ತಿದ್ದ. ಅಂದು ಆತನ ಬೈಕಿಗೆ ಗುದ್ದುವದನ್ನು ತಪ್ಪಿಸಲು ಈ ಇಬ್ಬರು ಇದ್ದಂತಹ ಕಾರು ಮರಕ್ಕೆ ಬಡಿದು ಎಂಬುದಾಗಿ ಪೊಲೀಸರು ಕೆಲವು ಹೇಳಿಕೆಗಳ ಅನ್ವಯ ಅಂದುಕೊಳ್ಳುತ್ತಾರೆ. ಒಂದು ತಡರಾತ್ರಿವರೆಗೂ ಕೂಡ ಇಬ್ಬರು ಪಾರ್ಟಿಯ ಮೋಜಿನಲ್ಲಿದ್ದರು ಎಂಬುದಾಗಿ ಕೂಡ ಕೇಳಿಬಂದಿದೆ. ಇನ್ನು ಅಂದು ಅವರು ಪಾರ್ಟಿ ಮಾಡುತ್ತಿದ್ದ ಹೋಟೆಲಿನಲ್ಲಿ ನೀವು ಅಂದುಕೊಳ್ಳಲು ಕೂಡ ಸಾಧ್ಯವಾಗದಂತಹ ಘಟನೆಯೊಂದು ನಡೆದಿತ್ತು.

ಅನ್ಸಿ ಹಾಗೂ ಶಾಜನ್ ಇಬ್ಬರೂ ಕೂಡ ಬಟ್ಟೆ ಮಾಡುತ್ತಿದ್ದ ಸಂದರ್ಭದಲ್ಲಿ ಆ ಹೋಟೆಲಿನ ಓನರ್ ಆಗಿರುವ ರಾಯ್ ಹಾಗೂ ಮಾದಕದ್ರವ್ಯಗಳ ಡೀಲರ್ ಆಗಿರುವ ಶೈಜೂ ಜೊತೆಗೆ ಮಾತಿನ ಚಕಮಕಿ ನಡೆದಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ರಾಯ್ ಹಾಗೂ ಶೈಜೂ ಇಬ್ಬರೂ ಕೂಡ ಅನ್ಸಿ ಮತ್ತು ಶಾಜನ್ ಇಬ್ಬರ ಮೈಮಾಟವನ್ನು ನೋಡಿ ಇಬ್ಬರು ಕೂಡ ಇಂದು ನಮ್ಮೊಂದಿಗೆ ಒಂದು ರಾತ್ರಿ ಕಳೆಯಬೇಕು ಬೇಕಾದಷ್ಟು ಹಣವನ್ನು ನೀಡುತ್ತೇವೆ ಹಾಗೂ ಹೋಟೆಲ್ನಲ್ಲಿ ನಿಮಗೆ ಬೇಕಾಗುವಂತಹ ಸೌಲಭ್ಯಗಳನ್ನು ನೀಡಲು ಸಿದ್ಧ ಎಂಬುದಾಗಿ ಹೇಳುತ್ತಾರೆ. ಇವರಿಬ್ಬರೂ ಕೂಡ ಒಳ್ಳೆಯ ಫ್ಯಾಮಿಲಿ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಇದರ ಕುರಿತಂತೆ ವಿರೋಧವನ್ನು ವ್ಯಕ್ತಪಡಿಸಿ ಕೋಪದಿಂದಲೇ ಹೋಟೆಲ್ನಿಂದ ಹೊರಗೆ ಬಂದು ಕುಡಿದ ಮತ್ತಿನಲ್ಲಿ ಕಾರನ್ನು ಏರುತ್ತಾರೆ.

ಆದರೂ ಕೂಡ ಬೆಂಬಿಡದ ಶೈಜು ಇವರಿಬ್ಬರನ್ನು ತಮ್ಮ ಸ್ನೇಹಿತರೊಂದಿಗೆ ಆಡಿ ಕಾರ್ ನಲ್ಲಿ ಚೇಸ್ ಮಾಡುತ್ತಾನೆ. ಸ್ವಲ್ಪ ಮುಂದೆ ಹೋದ ನಂತರ ರೆಸ್ಟೋರೆಂಟ್ ಒಂದರ ಬಳಿ ನಿಂತು ಅನ್ಸಿ ಮತ್ತೆ ಶೈಜು ಜೊತೆಗೆ ಜಗಳಕ್ಕೆ ನಿಲ್ಲುತ್ತಾಳೆ. ಅಲ್ಲಿ ಕೂಡ ಆತ ಅವಳ ಬಳಿ ಮತ್ತೆ ಅದೇ ಕೆಟ್ಟ ಚಾಳಿಯನ್ನು ಮುಂದುವರಿಸುತ್ತಾನೆ. ಇದಾದ ನಂತರ ಮತ್ತೆ ಕಾರಿನಲ್ಲಿ ಮುಂದೆ ಹೋದಾಗ ಅವರನ್ನು ಮತ್ತೆ ಚೇಜ್ ಮಾಡುತ್ತಾನೆ. ಈ ಸಂದರ್ಭದಲ್ಲಿ ಡೇನಿಯಲ್ ಡೇವಿಸ್ ಎನ್ನುವ ಆತನ ಬೈಕ್ ಅನ್ನು ತಪ್ಪಿಸುವುದಕ್ಕೆ ಹೋಗಿ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿರುವುದು‌. ಆದರೆ ಶೈಜು ಮಾತ್ರ ಕೊನೆಯವರೆಗೂ ಚೇಸ್ ಮಾಡಿಕೊಂಡೆ ಬಂದಿದ್ದ. ಪೋಲಿಸ್ ಪ್ರಕರಣದಲ್ಲಿ ತಾನು ಕೇವಲ ಸಾಕ್ಷಿ ಎಂಬುದಾಗಿ ಸುಳ್ಳು ಹೇಳಿದ್ದಾನೆ.

ಮೊದಮೊದಲಿಗೆ ತನಿಖೆ ನಡೆದಾಗಲೂ ಕೂಡ ಇದರ ಕುರಿತಂತೆ ಬಾಯಿಬಿಟ್ಟಿರಲಿಲ್ಲ. ನಂತರ ಅಬ್ದುಲ್ ನ ಹೇಳಿಕೆಯ ಮೇರೆಗೆ ಹಾಗೂ ಪೊಲೀಸರ ಕಟ್ಟುನಿಟ್ಟಿನ ವಿಚಾರಣೆ ಕ್ರಮದಿಂದ ಶೈಜು ಅಂದು ಹೋಟೆಲ್ ನಲ್ಲಿ ನಡೆದಿರುವಂತಹ ಘಟನೆ ಹಾಗೂ ರಾಯ್ ಹಾಗೂ ತಾನು ಮಾಡಿರುವಂತಹ ಕೆಲಸದ ಕುರಿತಂತೆ ಒಪ್ಪಿಕೊಂಡಿದ್ದಾನೆ. ಇದರ ಅನ್ವಯ ಇಬ್ಬರನ್ನು ಕೂಡ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಮೇಲ್ಮೈಗೆ ಅವರಿಬ್ಬರಿಂದ ತಪ್ಪಿಸಿಕೊಳ್ಳಲು ಅನ್ಸಿ ಹಾಗೂ ಶಾಜನ್ ಇಬ್ಬರು ಕೂಡ ಮನೆಗೆ ಹೋಗುವ ಭರದಲ್ಲಿ ಈ ಅಪಘಾ’ತ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಸತ್ಯಾಸತ್ಯತೆಗಳು ಏನೇ ಇರಲಿ ಇಬ್ಬರು ಅಮಾಯಕ ಸುಂದರಿಯರು ವಿನಾಕಾರಣ ತಮ್ಮ ಜೀವವನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಬೇಸರವನ್ನು ತರಿಸುತ್ತದೆ.

Get real time updates directly on you device, subscribe now.