ಮೊದಲ ಬಾರಿಗೆ ಜೊತೆಯಾದ ರಾಜಮೌಳಿ ಹಾಗೂ ಶಿವಣ್ಣ, ಹೊಸ ಸಿನಿಮಾ ಅಲ್ಲಾ. ಮತ್ತೇನು ಪ್ಲಾನ್ ಗೊತ್ತೇ??

ಮೊದಲ ಬಾರಿಗೆ ಜೊತೆಯಾದ ರಾಜಮೌಳಿ ಹಾಗೂ ಶಿವಣ್ಣ, ಹೊಸ ಸಿನಿಮಾ ಅಲ್ಲಾ. ಮತ್ತೇನು ಪ್ಲಾನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಲೀಡರ್ ಎಂದು ಅನಿಸಿಕೊಂಡಿರುವ ಕರುನಾಡ ಚಕ್ರವರ್ತಿ ಶಿವಣ್ಣನವರು ಈಗಾಗಲೇ ಚಿತ್ರರಂಗದಲ್ಲಿ 36 ವರ್ಷಗಳಿಗೂ ಅಧಿಕ ಕಾಲ ಕಲಾದೇವಿಯ ಸೇವೆಯನ್ನು ಮಾಡಿದ್ದಾರೆ. ಈಗಾಗಲೇ ಹಲವಾರು ಬಗೆಯ ವಿವಿಧ ಪಾತ್ರಗಳಲ್ಲಿ ಹಾಗೂ ಬೇರೆ ಬೇರೆ ಮಾದರಿಯ ಸಿನಿಮಾಗಳಲ್ಲಿ ಶಿವಣ್ಣ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

120ಕ್ಕೂ ಅಧಿಕ ಸಿನಿಮಾಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಯಾರೇ ಹೊಸಬರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಕೂಡ ಅವರನ್ನು ಮೊದಲು ಹುರಿದುಂಬಿಸುವುದು ನಮ್ಮ ಶಿವಣ್ಣನೇ. ನಿಜಕ್ಕೂ ಕೂಡ ಸ್ಯಾಂಡಲ್ವುಡ್ ನ ಲೀಡರಾಗಿ ಜವಾಬ್ದಾರಿಯುತವಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಸ್ಟಾರ್ ನಟರಲ್ಲಿ ಶಿವಣ್ಣನವರೇ ಅಗ್ರಪಂಕ್ತಿಯಲ್ಲಿ ಕಾಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಿವಣ್ಣ ಹಾಗೂ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಹಾಗಿದ್ರೆ ಅವರಿಬ್ಬರು ಹೊಸ ಸಿನಿಮಾ ಮಾಡುತ್ತಿದ್ದಾರಾ ಎಂಬ ಗೊಂದಲಗಳು ನಿಮ್ಮಲ್ಲಿ ಕಾಣಬಹುದು. ನಿಮ್ಮ ಗೊಂದಲವನ್ನು ನಾವು ಪರಿಹರಿಸುತ್ತೇವೆ ಬನ್ನಿ.

ರಾಜಮೌಳಿ ಹಾಗೂ ಶಿವಣ್ಣ ಇಬ್ಬರು ಕೂಡ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಿಜ. ಆದರೆ ನಿರ್ದೇಶಕ ಹಾಗೂ ನಟರಾಗಿ ಅಲ್ಲ ಬದಲಾಗಿ ಡಾರ್ಲಿಂಗ್ ಪ್ರಭಾಸ್ ಅವರ ಮುಂದಿನ ಸಿನಿಮಾ ರಾಧೇಶ್ಯಾಮ್ ನಲ್ಲಿ. ಹೌದು ಇದೇ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ರಾಧೇಶ್ಯಾಮ್ ನಲ್ಲಿ ತೆಲುಗು ಭಾಷೆಯಲ್ಲಿ ರಾಜಮೌಳಿ ಅವರು ವಾಯ್ಸ್ಓವರ್ ನೀಡಿದರೆ ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಧ್ವನಿಯಾಗಲಿದ್ದಾರೆ. ಈಗಾಗಲೇ ಈ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಖಂಡಿತವಾಗಿ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಬಾಚೋದ್ರಲ್ಲಿ ಯಾವುದೇ ಅನುಮಾನವಿಲ್ಲ.