ಆರ್ಸಿಬಿಗೆ ಬಂದು ತಮ್ಮ ಕ್ರಿಕೇಟ್ ಬದುಕನ್ನೇ ಬದಲಿಸಿಕೊಂಡ ಟಾಪ್ -5 ಆಟಗಾರರು ಯಾರ್ಯಾರು ಗೊತ್ತೇ?? ಇವರ ಜೀವನ ಬದಲಾದದ್ದೇ ಆರ್ಸಿಬಿಯಿಂದ.
ಆರ್ಸಿಬಿಗೆ ಬಂದು ತಮ್ಮ ಕ್ರಿಕೇಟ್ ಬದುಕನ್ನೇ ಬದಲಿಸಿಕೊಂಡ ಟಾಪ್ -5 ಆಟಗಾರರು ಯಾರ್ಯಾರು ಗೊತ್ತೇ?? ಇವರ ಜೀವನ ಬದಲಾದದ್ದೇ ಆರ್ಸಿಬಿಯಿಂದ.
ನಮಸ್ಕಾರ ಸ್ನೇಹಿತರೇ ಆರ್ಸಿಬಿ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಈವರೆಗೂ ಕಪ್ ಗೆಲ್ಲದಿದ್ದರೂ ಅಭಿಮಾನಿಗಳ ಕ್ರೇಜ್ ನ್ನು ಹಾಗೆ ಉಳಿಸಿಕೊಂಡಿದೆ. ಆದರೇ ಆರ್ಸಿಬಿ ಪರ ಆಡಿ ತಮ್ಮ ಕ್ರಿಕೇಟ್ ವೃತ್ತಿ ಬದುಕನ್ನೇ ಬದಲಿಸಿಕೊಂಡ ಹಲವಾರು ಆಟಗಾರರಿದ್ದಾರೆ. ಬನ್ನಿ ಅಂತಹ ಟಾಪ್ -5 ಆಟಗಾರರು ಯಾರು ಎಂಬುದನ್ನು ತಿಳಿಯೋಣ.
ಟಾಪ್ 5 – ರಾಸ್ ಟೇಲರ್ : ನ್ಯೂಜಿಲೆಂಡ್ ನ ಈ ಟಾಪ್ ಆರ್ಡರ್ ಬ್ಯಾಟ್ಸ್ಮನ್ ೨೦೦೮ ರಿಂದ ೨೦೧೦ ರ ತನಕ ಆರ್ಸಿಬಿ ತಂಡದಲ್ಲಿದ್ದರು. ಆ ಅವಧಿಯಲ್ಲಿ ಅವರ ಲೆಗ್ ಸೈಡ್ ಬಿಗ್ ಹಿಟ್ ಗಳು ಆರ್ಸಿಬಿ ತಂಡಕ್ಕೆ ರನ್ ಮಳೆ ಸುರಿಸಿದ್ದವು. ಅದಲ್ಲದೇ ಬಹು ಜನಪ್ರಿಯತೆಯನ್ನು ಸಹ ತಂದುಕೊಟ್ಟಿತು. ನ್ಯೂಜಿಲೆಂಡ್ ತಂಡದಲ್ಲಿ ಅವರಿಗೆ ಖಾಯಂ ಸ್ಥಾನವನ್ನು ಸಹ ನೀಡಿತು.
ಟಾಪ್ ೪ : ಯುಜವೇಂದ್ರ ಚಾಹಲ್ – ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯುಜವೇಂದ್ರ ಚಾಹಲ್ ೩೦೧೫ರಲ್ಲಿ ಆರ್ಸಿಬಿಯನ್ನು ಸೇರಿಕೊಂಡರು. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿದ್ದು ಕಡಿಮೆ. ಆದರೇ ಆರ್ಸಿಬಿ ತಂಡಕ್ಕೆ ಬಂದ ನಂತರ ಆಡುವ ಅವಕಾಶ ಸಿಕ್ಕಿ ತಮ್ಮೊಳಗಿನ ಪ್ರತಿಭೆ ತೋರಿದರು. ನಂತರ ಟೀಮ್ ಇಂಡಿಯಾದಲ್ಲಿ ಸಹ ಆಡುವ ಅವಕಾಶ ದೊರೆಯಿತು.
ಟಾಪ್ ೩ :ಕ್ರಿಸ್ ಗೇಲ್ – ೨೦೧೦ ರ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಗೇಲ್ ಅನಸೋಲ್ಡ್ ಆಟಗಾರರಾಗಿ ಉಳಿದಿದ್ದರು. ಆದರೇ ಮಧ್ಯಂತರದಲ್ಲಿ ಬದಲೀ ಆಟಗಾರನಾಗಿ ಆರ್ಸಿಬಿ ಪಾಳಯ ಸೇರಿ, ಭರ್ಜರಿ ರನ್ ಬಾರಿಸಿದರು. ನಂತರ ಯೂನಿವರ್ಸಲ್ ಬಾಸ್ ಎಂಬ ಬಿರುದಿಗೂ ಸಹ ಪಾತ್ರರಾದರು.
ಟಾಪ್ ೨: ಕೆ.ಎಲ್.ರಾಹುಲ್ – ಸದ್ಯ ಭಾರತ ತಂಡದ ಭವಿಷ್ಯದ ನಾಯಕ ಎಂದು ಗುರುತಿಸಿಕೊಂಡಿರುವ ಕನ್ನಡಿಗ ಕೆ.ಎಲ್.ರಾಹುಲ್ ಸಹ ಆರ್ಸಿಬಿ ಪಾಳಯದಿಂದಲೇ ತಮ್ಮ ಐಪಿಎಲ್ ಕೆರಿಯರ್ ಆರಂಭಿಸಿದವರು. ಇಲ್ಲಿ ನೀಡಿದ ಅದ್ಭುತ ಪ್ರದರ್ಶನವೇ ಅವರಿಗೆ ಭಾರತ ತಂಡದ ಬಾಗಿಲು ತೆರೆಯಲು ಸಾಧ್ಯವಾಯಿತು.
ಟಾಪ್ ೧ : ವಿರಾಟ್ ಕೊಹ್ಲಿ – ಭಾರತ ತಂಡದ ಮಾಜಿ ನಾಯಕ ವಿರಾಟ್ ಆಗಷ್ಟೇ ಅಂಡರ್ 19 ವಿಶ್ವಕಪ್ ಗೆದ್ದಿದ್ದರು. ಕೇವಲ ೨೦ ಲಕ್ಷಕ್ಕೆ ಆರ್ಸಿಬಿ ತಂಡ ಸೇರಿಕೊಂಡು ಇಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದರು. ಮುಂದೆ ನಡೆದದ್ದು ಇತಿಹಾಸ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.