ರಹಾನೆ ಪೂಜಾರ ಇಲ್ಲದೇ ರೋಹಿತ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂದೆ ಹೇಗಿದೆ ಗೊತ್ತೇ??

ರಹಾನೆ ಪೂಜಾರ ಇಲ್ಲದೇ ರೋಹಿತ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂದೆ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಗೆ ಮೊಹಾಲಿ ಟೆಸ್ಟ್ ನೂರನೇ ಟೆಸ್ಟ್ ಪಂದ್ಯವಾಗಿರಲಿದೆ. ಈಗಾಗಲೇ ಟೀಮ್ ಇಂಡಿಯಾ ಎಲ್ಲಾ ಸಿದ್ಧತೆ ನಡೆಸಿದ್ದು ಗುರುವಾರದಿಂದ ಟೆಸ್ಟ್ ಆರಂಭವಾಗಲಿದೆ. ಈ ಮಹತ್ವದ ಸರಣಿಗೆ ಭಾರತ ತಂಡ ಹಿರಿಯ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ರವರನ್ನು ಬಹಳ ವರ್ಷಗಳ ನಂತರ ಕೈ ಬಿಟ್ಟಿದೆ. ಈಗ ಅವರಿಬ್ಬರ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ತಯಾರು ಮಾಡುವ ಗುರುತರ ಜವಾಬ್ದಾರಿ ತಂಡದ ಮ್ಯಾನೇಜ್ ಮೆಂಟ್ ಮೇಲೆ ಇದೆ. ಬನ್ನಿ ಮೊಹಾಲಿಯಲ್ಲಿ ಲಂಕಾ ವಿರುದ್ಧ ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ನಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ತಂಡದ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಮಾಯಾಂಕ್ ಅಗರವಾಲ್ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಪೂಜಾರ ಬದಲು ಮತ್ತೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ ಕಣಕ್ಕಿಳಿಯಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಎಂದಿನಂತೆ ಕಿಂಗ್ ಕೊಹ್ಲಿ ತನ್ನ ವಿರಾಟ್ ರೂಪ ಪ್ರದರ್ಶಿಸಬೇಕಿದೆ. ಐದನೇ ಕ್ರಮಾಂಕದಲ್ಲಿ ಲಕ್ನೋ ಟೆಸ್ಟ್ ಹೀರೋ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ. ಆರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ರಿಷಭ್ ಪಂತ್ ಆಡಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಆಡಲಿದ್ದಾರೆ.

ಎಂಟನೇ ಕ್ರಮಾಂಕದಲ್ಲಿ ಸ್ಪಿನ್ನರ್ ಆರ್.ಅಶ್ವಿನ್ ಆಡಲಿದ್ದಾರೆ. ಒಂಬತ್ತನೇ ಕ್ರಮಾಂಕದಲ್ಲಿ ವೇಗಿ ಮಹಮದ್ ಶಮಿ ಆಡಲಿದ್ದಾರೆ. ಹತ್ತನೇ ಕ್ರಮಾಂಕದಲ್ಲಿ ಮತ್ತೋಬ್ಬ ವೇಗಿ ಜಸಪ್ರಿತ್ ಬುಮ್ರಾ ಆಡಲಿದ್ದಾರೆ. ಹನ್ನೊಂದನೇ ಕ್ರಮಾಂಕದಲ್ಲಿ ಪಿಚ್ ವೇಗದ ಬೌಲರ್ ಗೆ ಸಹಕರಿಸುತ್ತಿದ್ದರೇ ಮಹಮದ್ ಸಿರಾಜ್, ಸ್ಪಿನ್ನರ್ ಗಳಿಗೆ ಸಹಕರಿಸಿದರೇ ಕುಲದೀಪ್ ಯಾದವ್ ಆಡುವ ಸಾಧ್ಯತೆ ಇದೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ರೋಹಿತ್ ಶರ್ಮಾ, ಮಾಯಾಂಕ್ ಅಗರವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ, ಮಹಮದ್ ಸಿರಾಜ್ / ಕುಲದೀಪ್ ಯಾದವ್.