ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗೆಲುವಿನ ಅಲೆಯಲ್ಲಿ ತೇಲುತ್ತಿರುವಾಗ ಅಸಲಿ ಕಥೆಯನ್ನು ಮರೆಯಬೇಡಿ ಎಂದು ರೋಹಿತ್ ವಿರುದ್ಧ ಹೇಳಿಕೆ ಕೊಟ್ಟು ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ??

63

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ರವರು ಸಂಪೂರ್ಣವಾಗಿ ನಾಯಕತ್ವವನ್ನು ವಹಿಸಿಕೊಂಡ ಮೇಲೆ ಭಾರತೀಯ ಕ್ರಿಕೆಟ್ ತಂಡ ಹಲವಾರು ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲ್ಯಾಂಡ್ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಸರಣಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಅಭೂತಪೂರ್ವ ಪ್ರದರ್ಶನವನ್ನು ರೋಹಿತ್ ಶರ್ಮಾ ರವರ ನಾಯಕತ್ವದಲ್ಲಿ ನೀಡಿದೆ ಎಂದು ಹೇಳಬಹುದಾಗಿದೆ.

ಇಷ್ಟೆಲ್ಲಾ ಯಶಸ್ಸಿನ ನಡುವೆ ಕೂಡ ರೋಹಿತ್ ಶರ್ಮಾ ರವರ ಬ್ಯಾಟಿಂಗ್ ಎನ್ನುವುದು ಕಳಪೆ ಫಾರಂನಿಂದ ಕೂಡಿದೆ ಎಂದು ಹೇಳಬಹುದಾಗಿದೆ. ನಾಯಕತ್ವದ ಜವಾಬ್ದಾರಿ ಅವರ ಬ್ಯಾಟಿಂಗ್ ನಲ್ಲಿ ಕೊಂಚ ಡೌನ್ ಫಾಲ್ ತಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಹಲವಾರು ಕಡೆಗಳಿಂದ ಟೀಕೆಗಳ ಸಾಲು ಕೂಡಾ ಹರಿದುಬರುತ್ತಿವೆ. ಇಡೀ 3 ಪಂದ್ಯಗಳ ಟಿ-20 ಸರಣಿಗಳಲ್ಲಿ ರೋಹಿತ್ ಶರ್ಮಾ ರವರು ಗಳಿಸಿದ್ದು ಕೇವಲ 50 ರನ್ ಗಳು ಮಾತ್ರ. ಹೀಗಾಗಿ ಹಲವಾರು ಮಾಜಿ ಕ್ರಿಕೆಟಿಗರು ಕೂಡ ಈ ಕುರಿತಂತೆ ರೋಹಿತ್ ಶರ್ಮಾ ರವರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಮಾಜಿ ಕ್ರಿಕೆಟಿಗ ಆಗಿರುವ ಸಾಬಾ ಕರೀಮ್ ಹೇಳಿರುವ ಹೇಳಿಕೆ ಕುರಿತಂತೆ ನಿಮಗೆ ವಿವರಿಸಲು.

ಹೌದು ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ರವರ ಬ್ಯಾಟಿನಿಂದ ಹೇಳಿಕೊಳ್ಳುವಷ್ಟು ಒಳ್ಳೆಯ ಮಟ್ಟಿಗೆ ಪ್ರದರ್ಶನ ಕಾಣ ಸಿಗುತ್ತಿಲ್ಲ. ಇದೇ ಕಾರಣದಿಂದಾಗಿ ಸಾಬಾ ಕರೀಂ ರವರು ರೋಹಿತ್ ಶರ್ಮಾ ರವರು ನಾಯಕನಿಗಿಂತ ಹೆಚ್ಚಾಗಿ ಮೊದಲು ಆರಂಭಿಕ ಬ್ಯಾಟ್ಸ್ಮನ್ ಎನ್ನುವುದನ್ನು ಅವರು ನೆನಪಿಗೆ ಇಟ್ಟುಕೊಳ್ಳಬೇಕು. ನಾಯಕತ್ವ ಎನ್ನುವುದು ಒಂದು ಹೆಚ್ಚಿನ ಜವಾಬ್ದಾರಿ ಅಷ್ಟೇ ಆದರೆ ಅವರು ತಮ್ಮ ಪ್ರಾಥಮಿಕ ಹುದ್ದೆ ಆಗಿರುವ ಆರಂಭಿಕ ಆಟಗಾರನ ಜವಾಬ್ದಾರಿಯನ್ನು ಚೆನ್ನಾಗಿ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂಬುದಾಗಿ ಹೇಳಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನ ಸಾಕಷ್ಟು ಕಳಪೆಯಾಗಿದೆ ಹೀಗಾಗಿ ಬ್ಯಾಟಿಂಗ್ನಲ್ಲಿ ಸುಧಾರಣೆ ತರುವತ್ತ ಪರಿಶ್ರಮ ಪಡಬೇಕು ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.