ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಟ ಚೇತನ್ ಗೆ ಬಿಗ್ ಶಾಕ್ ಕೊಡಲು ತಯಾರಿ ನಡೆಸಿದರೇ ಪೊಲೀಸರು, ಅಷ್ಟಕ್ಕೂ ನಿಜಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತೇ??

279

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಹಲವಾರು ವಿಚಾರಗಳು ಸುದ್ದಿಯಾಗುತ್ತಲೇ ಇದೆ. ಇದು ಕೇವಲ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಕೂಡ ವರದಿಯಾಗುತ್ತಿದೆ. ಅವುಗಳಲ್ಲಿ ನಟ ಚೇತನ್ ರವರು ಕೂಡ ಒಬ್ಬರು. ನಟ ಚೇತನ ರವರನ್ನು ಕನ್ನಡಿಗರು ಗುರುತಿಸುವುದು ಅವರ ಆ ದಿನಗಳು ಸಿನಿಮಾದ ಮೂಲಕ ಅಲ್ಲವೇ ಅಲ್ಲಾ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ಚೇತನ್ ರವರು ಕನ್ನಡ ಚಿತ್ರರಂಗದ ನಟರಾಗಿ ಗುರುತಿಸಿಕೊಂಡಿದ್ದು ಕೆಲವು ದಿನಗಳ ವರೆಗೆ ಮಾತ್ರ ಆದರೆ ಅವರು ಹೆಸರು ಮಾಡಿರುವುದೇ ಬೇರೆ ವಿಚಾರಗಳಿಗಾಗಿ.

ಹೌದು ಆಗಾಗ ಹಲವಾರು ವಿಚಾರಗಳ ಕುರಿತು ವಿವಿಧ ರೀತಿಯಲ್ಲಿ ಪ್ರತಿಕಿರಿಯೇ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ, ಸದಾ ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿರುತ್ತದೆ. ಈ ಹಿಂದೆ ಬ್ರಾಹ್ಮಣರ ವಿರುದ್ಧವಾಗಿ ಮಾತನಾಡಿ ಇವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿತ್ತು. ವಿವಿಧ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ ಎನ್ನುವ ಕುರಿತಂತೆ ದೂರುಗಳು ದಾಖಲಾಗಿದ್ದವು. ಇತ್ತೀಚೆಗೆ ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿರುವ ಚೇತನ್ ರವರನ್ನು ಕಂಬಿ ಎನಿಸುವಂತೆ ಮಾಡಲಾಗಿತ್ತು. ಇವೆಲ್ಲ ವಿಚಾರಗಳ ನಡುವೆ ಪೊಲೀಸರು ನಟ ಚೇತನ್ ಕುಮಾರ್ ರವರಿಗೆ ತಿಳಿಯದಂತೆ ಮತ್ತೊಂದು ಶಾಕ್ ನೀಡಲು ಸಜ್ಜಾಗಿದ್ದಾರೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಟ ಚೇತನ್ ರವರು ಈ ತರಹದ ಹೇಳಿಕೆಗಳಿಂದ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವ ಯೋಚನೆಯನ್ನು ಮಾಡಲಾಗಿದೆ. ಯಾಕೆಂದರೆ ಅವರು ಭಾರತೀಯ ಪೌರತ್ವವನ್ನು ಹೊಂದಿಲ್ಲ ಅವರ ಪೋಷಕರ ಸಮೇತ ಅವರು ಅಮೆರಿಕದ ಪೌರತ್ವವನ್ನು ಹೊಂದಿದ್ದಾರೆ. ಈ ಕುರಿತಂತೆ ಗೃಹಸಚಿವ ಕಾರ್ಯಾಲಯಕ್ಕೆ ಪೊಲೀಸ್ ಇಲಾಖೆಯಿಂದ ಪತ್ರವನ್ನು ಕೂಡ ರವಾನಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಚೇತನ ರವರನ್ನು ಕೇಳಿದಾಗ ಈ ಕುರಿತಂತೆ ನನಗೆ ಯಾವುದೇ ವಿಚಾರ ತಿಳಿದು ಬಂದಿಲ್ಲ ಎಂಬುದಾಗಿ ಹೇಳಿದ್ದು ನಾನು ನನ್ನ ವಕೀಲರ ಜೊತೆಗೆ ಇಲ್ಲೇ ಇದ್ದು ಹೋರಾಟವನ್ನು ಮುಂದುವರಿಸುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ.

Get real time updates directly on you device, subscribe now.