ಎಲ್ಲರೂ ನಾಯಕನನ್ನು ಘೋಷಣೆ ಮಾಡಿದರೂ ಕೂಡ ಆರ್ಸಿಬಿ ಯಾಕೆ ಘೋಷಣೆ ಮಾಡಿಲ್ಲ ಗೊತ್ತೇ?? ಮ್ಯಾನೇಜ್ಮೆಂಟ್ ಹೇಳಿದ್ದೇನು ಗೊತ್ತೇ??

ಎಲ್ಲರೂ ನಾಯಕನನ್ನು ಘೋಷಣೆ ಮಾಡಿದರೂ ಕೂಡ ಆರ್ಸಿಬಿ ಯಾಕೆ ಘೋಷಣೆ ಮಾಡಿಲ್ಲ ಗೊತ್ತೇ?? ಮ್ಯಾನೇಜ್ಮೆಂಟ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ೨೦೨೨ ಈ ಭಾರಿ ಮತ್ತಷ್ಟು ರೋಚಕವಾಗಿರಲಿದೆ ಎಂಬುದನ್ನು ನಾವು ಓದಿದ್ದೇವೆ. ಕಳೆದ ಬಾರಿಗಿಂತ ಎರಡು ಹೊಸ ತಂಡಗಳು ಹಾಗೂ ಹೊಸ ರೀತಿಯ ಪಂದ್ಯಗಳು ನಡೆಯುವುದರಿಂದ ರೋಚಕವಾಗಿರಲಿದೆ. ಈಗಾಗಲೇ ಎಲ್ಲಾ ತಂಡಗಳು ನಾಯಕನನ್ನು ಘೋಷಿಸಿವೆ. ಇಂದು ಪಂಜಾಬ್ ಕಿಂಗ್ಸ್ ತಂಡ ಸಹ ಕನ್ನಡಿಗ ಮಾಯಾಂಕ್ ಅಗರವಾಲ್ ರವರನ್ನು ನೂತನ ನಾಯಕ ಎಂದು ಘೋಷಿಸಿದೆ. ಆದರೇ ಕನ್ನಡಿಗರ ತಂಡ ಎಂದು ಕರೆಸಿಕೊಳ್ಳುವ ಆರ್ಸಿಬಿ ಮಾತ್ರ ಇದುವರೆಗೂ ನಾಯಕನನ್ನು ಘೋಷಿಸಿಲ್ಲ.

ಆರ್ಸಿಬಿ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ ಮುಂದಿನ ನಾಯಕ ಯಾರು ಎಂಬುದನ್ನು ಆರ್ಸಿಬಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೇ ನಾಯಕತ್ವದ ಘೋಷಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಆರ್ಸಿಬಿ ಮ್ಯಾನೇಜ್ ಮೆಂಟ್ ಸತ್ಯ ತಿಳಿಸಿದೆ. ಆರ್ಸಿಬಿಯಲ್ಲಿ ನಾಯಕತ್ವಕ್ಕೆ ಅರ್ಹರಾಗಿರುವ ಮೂವರು ಆಟಗಾರರಿದ್ದಾರೆ. ಅವರೆಂದರೇ ದಕ್ಷಿಣ ಆಫ್ರಿಕಾದ ಫಾಪ್ ಡು ಪ್ಲೇಸಿಸ್ , ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್, ಹಾಗೂ ಭಾರತದ ದಿನೇಶ್ ಕಾರ್ತಿಕ್.

ಈ ಮೂವರು ಸಹ ಹಲವಾರು ವರ್ಷಗಳಿಂದ ಐಪಿಎಲ್ ಆಡಿದ ಅನುಭವ ಹೊಂದಿದ್ದಾರೆ. ಇದಲ್ಲದೇ ಮ್ಯಾಕ್ಸ್ವೆಲ್ ಹಾಗೂ ದಿನೇಶ್ ಕಾರ್ತಿಕ್ ಐಪಿಎಲ್ ತಂಡದ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ. ಪಾಪ್ ಡು ಪ್ಲೇಸಿಸ್ ದಕ್ಷಿಣ ಆಫ್ರಿಕಾ ತಂಡದ ನಾಯಕರಾದ ಅನುಭವ ಹೊಂದಿದ್ದಾರೆ. ಹೀಗಾಗಿ ಯಾರು ಹಿತವರು ನಮಗೆ ಈ ಮೂವರೊಳಗೆ ಎಂಬ ಚಿಂತೆಯಲ್ಲಿ ತೊಡಗಿದ್ದೇವೆ. ಒಮ್ಮೆ ಈ ಜಿಜ್ಞಾಸೆ ಅಂತ್ಯಗೊಂಡ ನಂತರ ಖಂಡಿತವಾಗಿ ಆರ್ಸಿಬಿ ತಂಡದ ನೂತನ ನಾಯಕನನ್ನು ಘೋಷಿಸುತ್ತೇವೆ ಎಂದು ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಹೇಳಿದೆ. ಈ ಭಾರಿಯ ಐಪಿಎಲ್ ಮಾರ್ಚ್ ೨೬ ರಿಂದ ಮೇ ೨೯ ರವರೆಗೆ ನಡೆಯಲಿದೆ. ಈ ಭಾರಿ ಆರ್ಸಿಬಿ ಕಪ್ ಗೆಲ್ಲಬೇಕೆಂಬ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.