ಬಡಕುಟುಂಬ ಯುವಕ ರಷ್ಯಾ ಅಧ್ಯಕ್ಷನಾಗಿ ಬಲಾಢ್ಯ ರಾಷ್ಟ್ರವನ್ನು ಮಾಡಿದ್ದು ಹೇಗೆ ಗೊತ್ತೇ?? ಪುಟಿನ್ ಕುರಿತು ಯಾರಿಗೂ ತಿಳಿಯದ ಮಾಹಿತಿಗಳೇನು ಗೊತ್ತೇ?
ಬಡಕುಟುಂಬ ಯುವಕ ರಷ್ಯಾ ಅಧ್ಯಕ್ಷನಾಗಿ ಬಲಾಢ್ಯ ರಾಷ್ಟ್ರವನ್ನು ಮಾಡಿದ್ದು ಹೇಗೆ ಗೊತ್ತೇ?? ಪುಟಿನ್ ಕುರಿತು ಯಾರಿಗೂ ತಿಳಿಯದ ಮಾಹಿತಿಗಳೇನು ಗೊತ್ತೇ?
ನಮಸ್ಕಾರ ಸ್ನೇಹಿತರೇ 1989 ರಲ್ಲಿ ಜರ್ಮನ್ ನಲ್ಲಿ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಜನ ಎಂದು ಕಂಡಿರದಂತಹ ದೊಡ್ಡಮಟ್ಟದಲ್ಲಿ ದಂಗೆಯೆದ್ದರು. ಅವರನ್ನು ನಿಯಂತ್ರಿಸಲು ಸರ್ಕಾರಕ್ಕೆ ಕೂಡ ಸಾಧ್ಯವಾಗಲಿಲ್ಲ. ಪೂರ್ವ ಹಾಗೂ ಪಶ್ಚಿಮ ಜರ್ಮನಿಯನ್ನು ಬೇರ್ಪಡಿಸಿದ್ದ ಬರ್ಲಿನ್ ಗೋಡೆ ಕೂಡ ದಂಗೆಯ ತೀವ್ರತೆಗೆ ಪತನವಾಗುತ್ತದೆ. ನಿಮ್ಮ ಜರ್ಮನಿಯಲ್ಲಿದ್ದ ರಷ್ಯಾದ ಕೆಜಿಬಿ ಕಚೇರಿಗೆ ಉದ್ರಿಕ್ತರ ಗುಂಪು ದಾಳಿ ಮಾಡಲು ಬರುತ್ತದೆ. ಆ ಸಂದರ್ಭದಲ್ಲಿ ಆ ಕಟ್ಟಡದ ಒಳಗಡೆ ಇಡೀ ಜಗತ್ತನ್ನೇ ಸಂಚಲನಕ್ಕೆ ಒಳಗಾಗಿ ಸುವಂತಹ ರಹಸ್ಯಕರ ದಾಖಲೆಗಳಿದ್ದವು.
ಆದರೆ ಅವುಗಳನ್ನು ರಕ್ಷಿಸಲು ಇದ್ದಿದ್ದು ಕೇವಲ ನಾಲ್ಕು ಜನ ಮಾತ್ರ. ಉದ್ರಿಕ್ತ ಗುಂಪು ಕಟ್ಟಡವನ್ನ ನೆಲಸಮಮಾಡಲು ಗುಂಪುಗುಂಪಾಗಿ ಜನಸಾಗರದ ಮಾದರಿಯಲ್ಲಿ ಬರುತ್ತಾರೆ. ಆದರೆ ಆ ಕಟ್ಟಡದಿಂದ ಒಬ್ಬ ವ್ಯಕ್ತಿ ಹೊರಬಂದು ನೀವು ಕಟ್ಟಡದ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಒಂದಡಿ ಮುಂದಿಟ್ಟರು ಕೂಡ ನಿಮ್ಮನ್ನು ನಮ್ಮ ಕಟ್ಟಡದ ಒಳಗೆ ಇರುವಂತಹ ದೊಡ್ಡ ಸೇನೆ ಮುಗಿಸಿಬಿಡುತ್ತದೆ ಎಂಬುದಾಗಿ ವಾರ್ನಿಂಗ್ ಹೇಳುತ್ತಾನೆ. ಆದರೆ ಕಟ್ಟಡದಲ್ಲಿದ್ದ ಕೇವಲ ನಾಲ್ಕು ಜನ ಕೇವಲ ವಾರ್ನಿಂಗ್ ಮೂಲಕ ಅಂದು ಎಲ್ಲರನ್ನೂ ಹಿಮ್ಮೆಟ್ಟುವಂತೆ ಮಾಡುತ್ತಾನೆ. ಹವಾ ಇನ್ಯಾರು ಅಲ್ಲ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
ವ್ಲಾದಿಮಿರ್ ಪುಟಿನ್ ರವರು ಜನಿಸಿದ್ದು 1952 ರಂದು ರಷ್ಯಾದ ಸೆಂಟ್ ಪೀಟರ್ ಬರ್ಗ್ ನಲ್ಲಿ. ತಮ್ಮ ಪೋಷಕರ ಮೂರನೇ ಮಗನಾಗಿ ಜನಿಸುತ್ತಾನೆ. ಪುಟಿನ್ ರವರ ಸಹೋದರರು ಹುಟ್ಟುವುದಕ್ಕಿಂತ ಮುಂಚೆ ಮರಣವನ್ನು ಹೊಂದಿದರು. ಇನ್ನು ತಾಯಿ ಕಾರ್ಖಾನೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ ಸೋವಿಯತ್ ಒಕ್ಕೂಟದ ಮಹಾ ನಾಯಕರಾಗಿರುವ ಸ್ಟಾಲಿನ್ ಹಾಗೂ ಲೆನಿನ್ ರವರಿಗೆ ಪುಟಿನ್ ರವರ ತಾತ ಅಡುಗೆಭಟ್ಟನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಲ್ ಮಾರ್ಕ್ಸ್ ಹಾಗೂ ಲೆನಿನ್ರವರ ಕ್ರಾಂತಿಕಾರಿ ಪುಸ್ತಕಗಳು ಅವರಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತು.
ಪುಟಿನ್ ರವರ ವಿದ್ಯಾಭ್ಯಾಸದಲ್ಲಿ ಕೂಡ ಸಾಕಷ್ಟು ಮುಂದಿದ್ದರು ಇಷ್ಟು ಮಾತ್ರವಲ್ಲದೆ ಜೂಡೋದಲ್ಲಿ ಬ್ಲಾಕ್ಗಳನ್ನು ಕೂಡ ಪಡೆದುಕೊಂಡಿದ್ದರು. ಶಾಲೆಯಲ್ಲಿರುವಾಗಲೇ ಜರ್ಮನ್ ಭಾಷೆಯನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ರಷ್ಯಾದ ಗುಪ್ತಚರ ಇಲಾಖೆ ಯಾಗಿರುವ ಕೆಜಿಬಿ ನಲ್ಲಿ ಗೂಢಚಾರ ನಾಗಿ ಆಯ್ಕೆಯಾಗುತ್ತಾರೆ. ಅದು ಕೂಡ ಜರ್ಮನ್ ದೇಶದಲ್ಲಿ ಇರಲು. ಆದರೆ ಕಮ್ಯುನಿಸ್ಟ್ ಸರ್ಕಾರ ಬಿದ್ದ ನಂತರ ಅಲ್ಲಿಂದ ವಾಪಸ್ ರಷ್ಯಾದ ಪೀಟರ್ ಬರ್ಗ್ ಗೇ ಬರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದ ಪುಟಿನ್ ರವರಿಗೆ ಲೆನಿನ್ ನಗರದ ನಗರಪಾಲಿಕೆಯ ಅಧ್ಯಕ್ಷನ ಸಲಹೆಗಾರನಾಗಿ ಕೆಲಸ ಸಿಗುತ್ತದೆ.
ಇದು ಅವರ ರಾಜಕೀಯ ಎಂಟ್ರಿಗೆ ಪೂರಕವಾಗುತ್ತದೆ. 1994 ರಲ್ಲಿ ಇವರು ಸೈಂಟ್ ಪೀಟರ್ ಬರ್ಗ್ ನ ಉಪಮೇಯರ್ ಆಗಿ ಆಯ್ಕೆಯಾಗಿ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ. ನಂತರ ಇವರು ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಾರೆ. ಎಷ್ಟರಮಟ್ಟಿಗೆ ಎಂದರೆ ರಷ್ಯಾದ ಹಿಂದಿನ ಅಧ್ಯಕ್ಷರಾಗಿ ಇದ್ದಂತಹ ಬೋರಿಸ್ ಅವರು ಪುಟಿನ್ ರವರನ್ನು ನನ್ನ ಮುಂದಿನ ಉತ್ತರಾಧಿಕಾರಿ ಎಂಬುದಾಗಿ ಹೇಳುತ್ತಾರೆ. ಅದಕ್ಕಿಂತ ಮುಂಚೆ ಹೊರಜಗತ್ತಿಗೆ ಪುಟಿನ್ ರವರ ಪರಿಚಯ ಇರಲಿಲ್ಲ. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಪ್ರೆಸಿಡೆಂಟ್ ಕೂಡ ಆಗಿದ್ದಾರೆ. ನಿಯಮವನ್ನು ಬದಲಾಯಿಸಿ 2036 ರವರೆಗೆ ನಾನೇ ಪ್ರಧಾನಿ ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಸೋವಿಯತ್ ಒಕ್ಕೂಟದ ಚೆಚಾನ್ಯ ಎನ್ನುವ ಪ್ರಾಂತ್ಯದಲ್ಲಿ ಬಂಡುಕೋರರು ರಷ್ಯಾದ ವಿರುದ್ಧ ಕದನವನ್ನು ಸಾರುತ್ತಾರೆ. ರಷ್ಯಾದ ರಾಜಧಾನಿ ಮಾಸ್ಕೋದ ಕೂಡ ಲಗ್ಗೆಯಿಟ್ಟು ಅಲ್ಲಿನ ಹಲವಾರು ಜನರ ಪ್ರಾಣ ಹರಣಕ್ಕೆ ಕಾರಣವಾಗುತ್ತಾರೆ. ಈ ಸಂದರ್ಭದಲ್ಲಿ ರಷ್ಯಾದ ನಾಗರಿಕರ ಪಾಲಿಗೆ ಪುಟಿನ್ ರವರು ಹೀರೋ ಆಗುತ್ತಾರೆ. ಮಾಧ್ಯಮಗಳ ಮುಂದೆ ಬಂದು ಪುಟಿನ್ ರವರು ಚೇಚಾನ್ಯ ಬಂಡುಕೋರರ ಕೆಲಸಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂಬುದಾಗಿ ಹೇಳಿ ಕೆಲವೇ ಗಂಟೆಗಳಲ್ಲಿ ರಷ್ಯಾ ಸೇನೆಯ ಮೂಲಕ ನಾಮಾವಶೇಷ ಮಾಡಿದ್ದರು. ಅದಾಗಲೇ ಪುಟಿನ್ ರವರಿಗೆ ಪ್ರಧಾನಿ ಪಟ್ಟ ಕನ್ಫರ್ಮ್ ಆಗಿತ್ತು. ಈ ಸಂದರ್ಭದಲ್ಲಿ ಇಂತಹ ಕೆಲಸ ಮಾಡಿದ್ದು ಅವರ ಜನಪ್ರಿಯತೆ ಹೆಚ್ಚಾಗುವಂತೆ ಮಾಡಿತ್ತು.
ಆದರೆ ಇಲ್ಲೊಂದು ಟ್ವಿಸ್ಟ್ ಏನೆಂದರೆ ಆ ಬಂಡುಕೋರರನ್ನು ಪುಟಿನ್ ರವರೆ ಎತ್ತಿಕಟ್ಟಿ ಅವರನ್ನು ತಾವೇ ಮುಗಿಸಿ ನಾಟಕವನ್ನು ಮಾಡಿದ್ದಾರೆ ಎನ್ನುವ ಅನುಮಾನಗಳು ಕೂಡ ಇಂದಿಗೂ ಜೀವಂತವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ ಪುಟಿನ್ ರವರು ಪ್ರಚಾರಪ್ರಿಯರು. ಇದಕ್ಕಾಗಿ ಅವರು ವಿಮಾನವನ್ನು ಚಲಾಯಿಸುವ ಶರ್ಟ್ ಲೆಸ್ ಆಗಿ ಕುದುರೆಯನ್ನು ರೈಡ್ ಮಾಡುವ ಸಬ್ ಮರಿನ್ ಚಲಾಯಿಸುವ ಪ್ರಾಣಿಗಳೊಂದಿಗೆ ಕಾಲಕಳೆಯುವ ಸಮುದ್ರದಲ್ಲಿ ಈಜಾಡುವ ಅಂತಹ ಹಲವಾರು ಫೋಟೋಗಳನ್ನು ಆಗಾಗ ಎಲ್ಲಾ ಕಡೆ ಹರಡುವಂತೆ ಮಾಡುತ್ತಲೇ ಇರುತ್ತಾರೆ. ಪ್ರಚಾರ ಎಂದರೆ ಎಲ್ಲಿಲ್ಲದ ಪ್ರೀತಿಯನ್ನಬಹುದಾಗಿದೆ.
ರಷ್ಯಾದಲ್ಲಿ ತನಗೆ ಎದುರಾಗಿ ನಿಲ್ಲುವಂತಹ ನಾಯಕರನ್ನು ಈಗಾಗಲೇ ಮುಗಿಸಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿಬರುತ್ತದೆ. ಎಲ್ಲರಿಗಿಂತ ಹೆಚ್ಚಾಗಿ ಪುಟಿನ್ ರವರ ಶ್ರೀಮಂತಿಕೆ ನಿಮ್ಮನ್ನು ಬೆರಗುಗೊಳಿಸುತ್ತದೆ. ಇವರ ಬಳಿ 43 ವಿಮಾನ 14 ಹೆಲಿಕಾಪ್ಟರ್ ಸಾಕಷ್ಟು ಹಡಗುಗಳು ಇಪ್ಪತ್ತಕ್ಕೂ ಹೆಚ್ಚಿನ ಅರಮನೆಗಳಿವೆ. ಇವರ ಬಳಿ 200 ಬಿಲಿಯನ್ ಡಾಲರ್ ಆಸ್ತಿ ಕೂಡ ಇದೆ ಎಂಬುದಾಗಿ ಕೇಳಿಬರುತ್ತದೆ. ಆದರೆ ಪುಟಿನ್ ರವರು ಇದನ್ನೆಲ್ಲ ಗೌಪ್ಯವಾಗಿ ಮುಚ್ಚಿಟ್ಟಿದ್ದಾರೆ. ಇಡೀ ವಿಶ್ವದಲ್ಲಿ ಅಮೆರಿಕವನ್ನು ಎದುರಿಸಬಲ್ಲ ಅಂತಹ ಯಾವುದಾದರೂ ದೇಶ ಇದೆ ಎಂದರೆ ಅದು ಪುಟಿನ್ ಸರ್ವಾಧಿಕಾರದ ರಷ್ಯಾ ದೇಶದ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಡುಗೆ ಭಟ್ಟನ ಮೊಮ್ಮಗ ರಷ್ಯಾ ದೇಶದ ಅಧ್ಯಕ್ಷ ಆಗಿರುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕ ವಿಚಾರ. ಆದರೆ ಅವರು ಸಮರ ನೀತಿಯನ್ನು ಬಿಟ್ಟು ಶಾಂತಿಯನ್ನು ಕಾಪಾಡುವುದರಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸುವುದು ನಿಜಕ್ಕೂ ಎಲ್ಲರೂ ಆಸೆಪಡುವುದು ಎಂದು ಹೇಳಬಹುದಾಗಿದೆ.