ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ, ಈ ಭಾರತೀಯ ಆಟಗಾರನಿಂದ ಹುಷಾರಾಗಿರಿ ಎಂದ ಕೈಫ್, ಯಾರ ಬಗ್ಗೆ ಗೊತ್ತೇ??

728

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮನುಷ್ಯನಿಗೆ ಯಶಸ್ಸು ದೊರೆತಾಗ ಅದನ್ನು ನೋಡಿ ಸಂಭ್ರಮಿಸುವವರಿಗಿಂತ ಕುಹಕವಾಡುವವರೇ ಜಾಸ್ತಿ. ಈಗ ಟೀಮ್ ಇಂಡಿಯಾ ಸಹ ಯಶಸ್ಸಿನ ಅಲೆಯ ಉತ್ತುಂಗದಲ್ಲಿ ತೇಲುತ್ತಿದೆ. ಅದರಲ್ಲೂ ರೋಹಿತ್ ಶರ್ಮಾ ಪೂರ್ಣಾವಧಿ ನಾಯಕರಾದ ನಂತರ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ ೨೦ ಸರಣಿ ಮತ್ತು ಶ್ರೀಲಂಕಾ ವಿರುದ್ಧ ಟಿ೨೦ ಸರಣಿಯನ್ನು ವೈಟ್ ವಾಶ್ ಮಾಡಿತು.

ಇದು ಸಹಜವಾಗಿಯೇ ಎಲ್ಲರಿಗೂ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಹೆಮ್ಮೆ ತರಿಸಿದೆ. ಘಟಾನುಘಟಿ ಆಟಗಾರರು ಇಲ್ಲದಿದ್ದರೂ ಭಾರತ ತಂಡದ ಬೆಂಚ್ ಆಟಗಾರರು ಸರಣಿಯನ್ನು ಏಕಪಕ್ಷೀಯವಾಗಿ ವಶಪಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಮಾತನಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಹಮದ್ ಕೈಫ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶಂಸೆಯ ಮಳೆ ಸುರಿಸಿದ್ದಾರೆ.

ರೋಹಿತ್ ಶರ್ಮಾ ಗೆ ಶೇಕ್ ಹ್ಯಾಂಡ್ ನೀಡುವಾಗ ಒಮ್ಮೆ ಯೋಚಿಸಿ, ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತೆಗೆದುಕೊಂಡ ನಿರ್ಧಾರಗಳು, ಆಡುವ ಹನ್ನೊಂದರ ಬಳಗದ ಆಯ್ಕೆ, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ, ಸೂಕ್ತ ಸಂದರ್ಭದಲ್ಲಿ ಸೂಕ್ತ ಬೌಲಿಂಗ್ ಬದಲಾವಣೆ ಎಲ್ಲವೂ ಪರಿಪಕ್ವವಾಗಿವೆ. ಹಾಗಾಗಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಬಲ್ಲರು‌. ಮುಂಬರುವ ಟಿ೨೦ ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಮಹಮದ್ ಕೈಫ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.