ಡಿಕೆಶಿಗೆ ಠಕ್ಕರ್ ನೀಡಲು ಪ್ರಜ್ವಲ್ ರವರಿಂದ ಮತ್ತೊಂದು ಪ್ಲಾನ್, ಆದರೆ ಇದರಲ್ಲಿ ಬಿಜೆಪಿಗೆ ಹೆಚ್ಚು ಲಾಭ ಅದೇಗೆ ಗೊತ್ತೇ?? ಅಷ್ಟಕ್ಕೂ ನಡೆಯುತ್ತಿರುವುದು ಏನು ಗೊತ್ತೇ??

ಡಿಕೆಶಿಗೆ ಠಕ್ಕರ್ ನೀಡಲು ಪ್ರಜ್ವಲ್ ರವರಿಂದ ಮತ್ತೊಂದು ಪ್ಲಾನ್, ಆದರೆ ಇದರಲ್ಲಿ ಬಿಜೆಪಿಗೆ ಹೆಚ್ಚು ಲಾಭ ಅದೇಗೆ ಗೊತ್ತೇ?? ಅಷ್ಟಕ್ಕೂ ನಡೆಯುತ್ತಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಜಕಾರಣದಲ್ಲಿ ಯಾರು ಯಾವಾಗ ಶತ್ರುಗಳಾಗುತ್ತಾರೋ ಯಾರು ಯಾವಾಗ ಮಿತ್ರರಾಗುತ್ತಾರೋ ಎಂದು ಹೇಳಲು ಆಗುವುದಿಲ್ಲ. ಸದ್ಯ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಮೇಕೆದಾಟು ಯೋಜನೆ ಸಂಬಂಧಿತ ಪಾದಯಾತ್ರೆ ನಡೆಸುತ್ತಿದೆ.ಈ ಹಿಂದೆಯೇ ಶುರುವಾದ ಪಾದಯಾತ್ರೆ ಕೋವಿಡ್ ಕಾರಣಕ್ಕೆ ಅರ್ಧದಲ್ಲಿಯೇ ನಿಂತಿತ್ತು

ಆದರೇ ಇದೀಗ ರಾಮನಗರದಿಂದ ಪುನಃ ಪಾದಯಾತ್ರೆ ಆರಂಭವಾಗಿದೆ. ಆದರೇ ರಾಜ್ಯದ ಮತ್ತೊಂದು ವಿರೋಧ ಪಕ್ಷವಾಗಿರುವ ಜೆಡಿಎಸ್ ಗೂ ಕಾಂಗ್ರೆಸ್ ಗೂ ಸಂಭಂದ ಅಷ್ಟಕಷ್ಟೆ. ಈಗ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ಸಹ ಪಾದಯಾತ್ರೆ ಪ್ಲಾನ್ ಮಾಡಿದೆ. ಜೆಡಿಎಸ್ ಪಕ್ಷದ ಏಕಮಾತ್ರ ಸಂಸದ ಪ್ರಜ್ವಲ್ ರೇವಣ್ಣ ಈ ಪಾದಯಾತ್ರೆಯ ಸೂತ್ರಧಾರ. ಮಹಾಶಿವರಾತ್ರಿ ಪ್ರಯುಕ್ತ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಪ್ಲಾನ್ ಮಾಡಿದ್ದಾರೆ. ಪ್ರತಿ ದಿನ ೪೦ ಕೀ.ಮಿ ಪಾದಯಾತ್ರೆ ಗುರಿ ಹೊಂದಿದ್ದು, ಐದು ದಿನಗಳೊಳಗೆ ಗಮ್ಯ ಸ್ಥಾನ ತಲುಪುವ ನೀರಿಕ್ಷೆ ಇದೆ. ಇನ್ನು ಈ ಪಾದಯಾತ್ರೆಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದ್ದಾರೆ.

ಇದು ಕೇವಲ ಲೋಕಕಲ್ಯಾಣಾರ್ಥವಾಗಿ, ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಬರುವ ಹಿನ್ನೆಲೆಯಲ್ಲಿ ಜೆಡಿಎಸ್ ಜಲಧಾರಾ ಎಂಬ ಪಾದಯಾತ್ರೆ ಯನ್ನು ಹಮ್ಮಿಕೊಂಡಿದೆ. ಅದರ ತಯಾರಿಯ ಸಲುವಾಗಿ ಪ್ರಜ್ವಲ್ ರೇವಣ್ಣ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಹೀಗೆ ಪ್ರತಿ ಪಕ್ಷಗಳು ಸುಖ ಸುಮ್ಮನೆ ಪಾದಯಾತ್ರೆ ಮಾಡುತ್ತಿವೆ ಎಂಬಂತೆ ಕಾಣುತ್ತಿದೆ ಎಂದು ಹಲವಾರು ಜನರ ಅಭಿಪ್ರಾಯವಾಗಿದೆ. ಈ ಮೂಲಕ ಇವುಗಳಿಂದ ಬಿಜೆಪಿ ಪಕ್ಷಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚು, ಅಷ್ಟೇ ಅಲ್ಲದೆ, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರ ಮತಗಳು ವಿಭಜನೆಯಾದರೆ ಬಿಜೆಪಿ ಪಕ್ಷಕ್ಕೆ ಹೆಚ್ಚೆಚ್ಚು ಲಾಭ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ