ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರಥಮ್ ತೆರೆದಿಟ್ಟರು ಮತ್ತೊಂದು ರಹಸ್ಯ, ಹರ್ಷ ರವರ ಕುಟುಂಬಕ್ಕೆ ಧ್ರುವ ಸರ್ಜಾ ನೀಡಿದ ಹಣವೆಷ್ಟು ಗೊತ್ತಾ??

78

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವಿಚಾರ ಏನೆಂಬುದು ತಿಳಿದಿದೆ. ಹೌದು ಬಜರಂಗದಳದ ಕಾರ್ಯಕರ್ತ ನಾಗಿರುವ ಶಿವಮೊಗ್ಗದ ಹರ್ಷರವರ ಪ್ರಕರಣ. ಹೌದು ಇದೀಗ ಇದು ಅಕ್ಷರಸಹ ಸಮರ ವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಲವಾರು ಪ್ರತಿ ಭಟನೆಗಳು ಕೂಡ ರಾಜ್ಯದಾದ್ಯಂತ ವಿವಿಧ ಸಂಘಟನೆಗಳಿಂದ ನಡೆಯುತ್ತಿದೆ.

ಇನ್ನು ಈ ಹಿನ್ನೆಲೆಯಲ್ಲಿ ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಲು ರಾಜ್ಯದ ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಬಂದು ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ ಕೂಡ ಈಗ ಹೋಗಿದ್ದಾರೆ. ಹರ್ಷನ ತಾಯಿಯಾಗಿರುವ ಪದ್ಮ ರವರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಕೂಡ ಮಾಡಿದ್ದಾರೆ. ಈ ವಿಚಾರ ನನಗೆ ತಡವಾಗಿ ಬೆಳಕಿಗೆ ಬಂದಿದೆ ನಾನು ಅಷ್ಟೊಂದು ಸೋಶಿಯಲ್ ಮೀಡಿಯಾ ವನ್ನು ಯೂಸ್ ಮಾಡುವುದಿಲ್ಲ ಎನ್ನುವುದಾಗಿ ಹೇಳಿದ್ದಾರೆ. ಇಲ್ಲಿಗೆ ನಾನು ಬಂದಿರುವುದು ಹರ್ಷನ ತಾಯಿಯಾಗಿರುವ ಪದ್ಮಾ ರವರ ಜೊತೆಗೆ ನಾವೆಲ್ಲ ಇದ್ದೇವೆ ಎನ್ನುವ ಧೈರ್ಯ ವನ್ನು ನೀಡುವುದಕ್ಕಾಗಿ ಎಂಬುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ವಿಚಾರವೂ ಕೂಡ ಹೊರ ಬಂದಿದೆ. ಹೌದು ಕನ್ನಡ ಚಿತ್ರರಂಗದ ಸ್ಟಾರ್ ನಟನೊಬ್ಬ ಹರ್ಷನ ಫ್ಯಾಮಿಲಿಗೆ ಮಾಡಿರುವಂತಹ ಸಹಾಯವನ್ನು ಈ ಸಮಯದಲ್ಲಿ ಒಳ್ಳೆ ಹುಡುಗ ಪ್ರಥಮ್ ರವರು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ಸಂದರ್ಭದಲ್ಲಿ ಪ್ರಥಮ್ ರವರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಸಂಪರ್ಕಿಸಿ ನನ್ನಿಂದ ಏನಾದರೂ ಸಹಾಯ ಆಗಬಹುದೇ ಎಂಬುದಾಗಿ ಕೇಳುತ್ತಾರೆ. ಆಗ ಪ್ರಥಮ್ ರವರು ಹೌದು ಎಂದು ಹೇಳುತ್ತಾರೆ. ಹಾಗಿದ್ದರೆ ನಾನು ನಾಲ್ಕರಿಂದ ಐದು ಲಕ್ಷ ರೂಪಾಯಿ ಕ್ಯಾಶ್ ನೀಡುತ್ತೇನೆ ನೀವು ಹೋದಾಗ ಅಲ್ಲಿ ಕೊಟ್ಟುಬಿಡಿ, ನನ್ನ ಹೆಸರು ಹೇಳಬೇಡಿ ಎಂಬುದಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಪ್ರಥಮ್ ರವರ ಬಳಿ ಹೇಳಿದ್ದರಂತೆ. ಇಂತಹ ಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಕನ್ನಡ ಚಿತ್ರರಂಗದ ನಟರು ಬರುತ್ತಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ ನಡೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.