ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಟಿಯಾಗಿ ಮೆರೆದದ್ದು ಅಷ್ಟೇ ಅಲ್ಲಾ, ನಿಜ ಜೀವನದಲ್ಲಿ ನೂರಾರು ಮಕ್ಕಳ ಪ್ರಾಣ ಉಳಿಸಿದ ಸಮಂತಾ ರವರಿಗೆ ಸಿಹಿ ಸುದ್ದಿ. ಏನು ಗೊತ್ತೇ??

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕೆಲವು ತಿಂಗಳುಗಳಿಂದ ನಟಿ ಸಮಂತಾ ರವರು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಮೊದಲಿಗೆ ಅವರು ಹಲವಾರು ವರ್ಷಗಳ ದಾಂಪತ್ಯ ಜೀವನದ ನಂತರ ನಾಗಚೈತನ್ಯ ರವರಿಗೆ ವಿವಾಹ ವಿಚ್ಛೇದನ ನೀಡಿದ್ದಕ್ಕಾಗಿ ಸುದ್ದಿಯಾಗಿದ್ದರು. ಇದಾದ ನಂತರ ಒಂಟಿಯಾಗಿದ್ದ ಸಮಂತಾ ರವರನ್ನು ಚಿತ್ರರಂಗ ದೂರವಿಟ್ಟಿದೆ ಎಂಬ ಕಾರಣಕ್ಕಾಗಿ ಸುದ್ದಿಯಾಗಿದ್ದರು. ನಂತರ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಈ ಕಾರಣಕ್ಕಾಗಿ ಕೂಡ ಸುದ್ದಿಯಾಗಿದ್ದರು.

ನಂತರ ಸುದ್ದಿಯಾಗಿದ್ದೆ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ತುಂಡುಡುಗೆಯನ್ನು ಉಟ್ಟುಕೊಂಡು ಸ್ಟೆಪ್ ಹಾಕಿದ್ದಕ್ಕಾಗಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು. ಈ ಕೆಲವು ಸಮಯಗಳು ಎನ್ನುವುದು ಸಮಂತ ಅವರಿಗೆ ಸಾಕಷ್ಟು ಏಳುಬೀಳುಗಳ ಜೀವನದ ಪಯಣ ವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗ ಮತ್ತೊಂದು ಕಾರಣಕ್ಕಾಗಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ ನಮ್ಮೆಲ್ಲರ ನೆಚ್ಚಿನ ನಟಿ ಸಮಂತಾ. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ನಟಿ ಸಮಂತಾ ರವರು ಸಾಮಾಜಿಕ ಕಾರ್ಯಗಳಲ್ಲಿ ಕೂಡ ಸದಾ ಮುಂದೆ ಇದ್ದವರು.

ಹಲವಾರು ಸಾಮಾನ್ಯ ಜನರಿಗೆ ಅದರಲ್ಲಿಯೂ ಮಕ್ಕಳಿಗೆ ಹಲವಾರು ಆಪರೇಷನ್ ಗಳಿಗೆ ಸ್ವಂತ ಹಣದಿಂದ ಹಾಗೂ ಆಸ್ಪತ್ರೆಗಳ ಮಾತನಾಡಿ ಒಪ್ಪಂದ ಮಾಡಿಕೊಂಡು ಅರ್ಧ ಹಣ ಸಮಂತಾ ಹಾಗೂ ಅರ್ಧ ಹಣ ಆಸ್ಪತ್ರೆ ನೀಡುವಂತೆಯೂ ಕೆಲವೊಮ್ಮೆ ಮಾತನಾಡಿ ಕಷ್ಟದ ಸಂದರ್ಭದಲ್ಲಿ ತಮ್ಮ ಪ್ರತ್ಯುಷ ಎನ್ನುವ NGO ಸಂಸ್ಥೆಯ ಮೂಲಕ ನೆರವನ್ನು ನೀಡಿರುವುದು ನಾವು ಹಲವಾರು ಬಾರಿ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇದೇ ಹಿನ್ನೆಲೆಯಲ್ಲಿ ಈ ಬಾರಿ ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021 ರ ಪ್ರಶಸ್ತಿಯನ್ನು ಸಮಂತ ರವರು ಗೆದ್ದುಕೊಂಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳಿಗಾಗಿ ಅವರು ಅರ್ಹರು ಕೂಡ ಆಗಿದ್ದಾರೆ. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಕೂಡ ಹಂಚಿಕೊಂಡಿದ್ದು ಈಗಾಗಲೇ ಲಕ್ಷಾಂತರ ಮೆಚ್ಚುಗೆಗಳನ್ನು ಕೆಲವೇ ಗಂಟೆಗಳಲ್ಲಿ ಪಡೆದುಕೊಂಡಿದೆ. ಈ ಮೂಲಕ ಸಮಾಜದಲ್ಲಿ ಒಬ್ಬ ಸೆಲೆಬ್ರಿಟಿ ಗಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ಸಾಬೀತಾಗಿದೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.