ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ಬಿಟ್ಟ ಮೇಲೆ ಇದೇ ಮೊದಲ ಬಾರಿಗೆ ಕೊಹ್ಲಿ, ಧೋನಿಯ ನಾಯಕತ್ವದಲ್ಲಿ ಇರುವ ವ್ಯತ್ಯಾಸ ವಿವರಿಸಿದ ವ್ಯಾಟ್ಸನ್, ಏನಂತೆ ಗೊತ್ತೇ??

1,028

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರಸ್ತುತ ಭಾರತ ತಂಡದ ದಶಕಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಶ್ರೇಷ್ಠ ಕ್ರಿಕೇಟಿಗರು. ಇಬ್ಬರೂ ಸಹ ಭಾರತ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಇನ್ನು ಐಪಿಎಲ್ ನಲ್ಲಿಯೂ ಸಹ ಇವರ ಯಶಸ್ಸು ಮುಂದುವರೆದಿತ್ತು. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ಹಲವಾರು ಬಾರಿ ಕಪ್ ಗೆಲ್ಲಿಸಿದ್ದಾರೆ.

ಇನ್ನು ನಾಯಕ ವಿರಾಟ್ ಕೊಹ್ಲಿ ಸಹ ಆರ್ಸಿಬಿ ತಂಡದ ನಾಯಕತ್ವವನ್ನು ವಹಿಸಿ, ಎರಡು ಬಾರಿ ಫೈನಲ್ ತನಕ ಮುನ್ನಡೆಸಿದ್ದಾರೆ. ಈ ಇಬ್ಬರೂ ದಿಗ್ಗಜ ಆಟಗಾರರ ನಾಯಕತ್ವದಡಿಯಲ್ಲಿ ಆಡಿದ ಆಸ್ಟ್ರೇಲಿಯಾದ ಖ್ಯಾತ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಈ ಇಬ್ಬರೂ ನಾಯಕರುಗಳ ನಡುವಿನ ವ್ಯತ್ಯಾಸವನ್ನು ತಿಳಿಸಿದ್ದಾರೆ. ಬನ್ನಿ ಆ ವ್ಯತ್ಯಾಸ ತಿಳಿಯೋಣ.

ಶೇನ್ ವಾಟ್ಸನ್ ಪ್ರಕಾರ ಇಬ್ಬರೂ ಶ್ರೇಷ್ಠ ನಾಯಕರೇ. ಆದರೇ ತಂಡವನ್ನು ಮುನ್ನಡೆಸುವಲ್ಲಿ ಹಲವಾರು ರೀತಿಯ ವೈವಿಧ್ಯತೆಯನ್ನು ಹೊಂದಿದ್ದಾರಂತೆ. ವಿರಾಟ್ ಒಬ್ಬ ಅದ್ಭುತ ನಾಯಕ. ಅಗ್ರೇಸ್ಸೀವ್ ಕೂಡ.ತಾನೂ ಉತ್ತಮ ಪ್ರದರ್ಶನ ನೀಡುವುದಲ್ಲದೇ, ಇತರ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡಲು ಪ್ರೇರೆಪಿಸುತ್ತಾರೆ. ಪ್ರತಿಯೊಬ್ಬ ಆಟಗಾರರನ್ನು ಸಹ ಉತ್ತೇಜಿಸುತ್ತಾರೆ. ಆನ್ ಫೀಲ್ಡ್ ಮಾತ್ರವಲ್ಲದೇ, ಆಫ್ ಫೀಲ್ಡ್ ನಲ್ಲಿಯೂ ಸಹ ಉತ್ತಮವಾಗಿ ಆಡುತ್ತಾರೆ ಎಂದು ಹೇಳಿದರು.

ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಸೂಪರ್ ಮ್ಯಾನ್. ಜೊತೆಗೆ ಕೂಲ್ ಕ್ಯಾಪ್ಟನ್ ಸಹ. ಅವರ ರಕ್ತದಲ್ಲಿ ಐಸ್ ಹರಿಯುತ್ತಿದೆ ಎಂದು ಅನಿಸುತ್ತದೆ. ತಾವು ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ತಂಡದ ಇತರ ಆಟಗಾರರಿಗೂ ಒತ್ತಡವನ್ನು ಹೇರಿಕೊಳ್ಳಲು ಬಿಡುವುದಿಲ್ಲ. ಸಹಜ ಕ್ರಿಕೇಟ್ ಆಡಿ ಎಂದೇ ಹೇಳುತ್ತಾರೆ. ಚೆನ್ನೈ ತಂಡ ಯಶಸ್ವಿಯಾಗಲು ಧೋನಿಯ ಕೂಲ್ ಕೂಲ್ ಕ್ಯಾಪ್ಟನ್ಸಿಯೇ ಕಾರಣ ಎಂದು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.