ತಿಂಗಳಿಗೆ 50 ಸಾವಿರಕ್ಕೂ ಅಧಿಕ ಹಣ ಗಳಿಸಬಲ್ಲ ಸ್ವಂತ ಉದ್ಯಮ ಯಾವುದು ಗೊತ್ತೇ?? ಕೇವಲ 5 ಸಾವಿರ ಹೂಡಿಕೆ ಮಾಡಿ ಸಾಕು.

ತಿಂಗಳಿಗೆ 50 ಸಾವಿರಕ್ಕೂ ಅಧಿಕ ಹಣ ಗಳಿಸಬಲ್ಲ ಸ್ವಂತ ಉದ್ಯಮ ಯಾವುದು ಗೊತ್ತೇ?? ಕೇವಲ 5 ಸಾವಿರ ಹೂಡಿಕೆ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಇರುವ ಉದ್ಯೋಗವನ್ನೂ ಬಿಟ್ಟು ಸ್ವ ಉದ್ದಿಮೆ ಮಾಡಲು ಹೊರಟಿರುವ ಜನರೇ ಹೆಚ್ಚು. ಕರೋನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡರು. ಇದರಿಂದಾಗಿಯೂ ಕೂಡ ಹಲವರು ಸ್ವ ಉದ್ಯೋಗ ಆರಂಭಿಸುವತ್ತ ಒಲವು ತೋರಿದರು. ಆದರೆ ಒಂದೇ ಸಮನೆ ಹೆಚ್ಚು ಹೂಡಿಕೆಯನ್ನು ಮಾಡಿ ಉದ್ದಿಮೆ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭಗಳಿಸುವಂಥ ಉದ್ಯೋಗ ಮಾಹಿತಿಯನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಸ್ವ ಉದ್ದಿಮೆ ಮಾಡಲು ಮನಸ್ಸಿರುವವರಿಗೆ ಇದು ಸಹಾಯವಾಗಬಹುದು.

ಸ್ನೇಹಿತರೆ, ನಿಮಗೆಲ್ಲಾ ಗೊತ್ತಿದೆ, ಇತ್ತೀಚಿನ ದಿನಗಳಲ್ಲಿ ಜನರು ಆನ್ ಲೈನ್ ವ್ಯವಹಾರವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಯಾವುದೇ ವಸ್ತು ಖರೀದಿ ಕುಡ ಆನ್ ಲೈನ್ ನಲ್ಲಿಯೇ ಮಾಡುತ್ತಾರೆ. ಅದರಲ್ಲೂ ಹೆಚ್ಚಾಗಿ ಹಣ್ಣು, ತರಕಾರಿಗಳು ಸೇರಿದಂತೆ ಇನ್ನಿತರ ಆಹಾರ ವಸ್ತುಗಳನ್ನು ಆನ್ ಲೈನ್ ನಲ್ಲಿಯೇ ಕೊಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಜೊಮೆಟೋ, ಸ್ವಿಗ್ಗಿಯಂಥ ಕಂಪನಿಗಳು ಆನ್ ಲೈನ್ ಮೂಲಕ ಆಹಾರ ಪದಾರ್ಥಗಳನ್ನೂ ಮಾರಾಟ ಮಾಡುತ್ತಾರೆ. ಆದರೆ ಇದರಲ್ಲಿ ಒಟ್ಟೂ ಖರ್ಚು ತುಸು ಚಾಸ್ತಿಯೇ ಬರುತ್ತೆ ಅಂತ ಹೇಳಬಹುದು. ಹಾಗಾಗಿ ಇದೂವರೆಗೆ ಹೆಚ್ಚು ಬಳಕೆಯಲ್ಲಿಲ್ಲದ, ಹಾಗೂ ಜನರಿಗೆ ಅಗತ್ಯವಾಗಿ ಬೇಕಾಗಿರುವ ಆನ್ ಲೈನ್ ಟಿಫಿನ್ ಸರ್ವೀಸ್ ನ್ನು ನೀವು ಉದ್ಯಮವಾಗಿ ಆರಂಭ ಮಾಡಬಹುದು.

ಈ ವ್ಯವಹಾರವನ್ನು ಮನೆಯಿಂದಲೇ ಕೇವಲ ರೂ. 5 ರಿಂದ ರೂ. 10 ಸಾವಿರ ಹೂಡಿಕೆ ಮಾಡಿ ಆರಂಭ ಮಾಡಬಹುದು. ಸ್ಥಳೀಯ ಪ್ರಚಾರದ ಮೂಲಕ ಹೆಚ್ಚು ಮಾರಾಟ ಮಾಡಬಹುದು. ವಾಟ್ಸಾಪ್ ಅಥವಾ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಆರ್ಡರ್ ತೆಗೆದುಕೊಳ್ಳಬಹುದು. ಯುಪಿಐ ಮೂಲಕ ಸುಲಭವಾಗಿ ಬಿಲ್ ಪಾವತಿಸಿಕೊಳ್ಳಬಹುದು. ಉತ್ತಮ ಅಡುಗೆಯವರನ್ನು ನೇಮಿಸಿಕೊಂಡು ಆರೋಗ್ಯಕರ ಅಡುಗೆ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮಲ್ಲಿ ದ್ವಿಚಕ್ರ ವಾಹನವಿದ್ದರೆ ಕೆಲವು ಹುಡುಗರನ್ನು ನೇಮಿಸಿ ಆರ್ಡರ್ ಡೆಲಿವರಿ ಮಾಡಬಹುದು. ಈ ವ್ಯಾಪಾರವು ಒಮ್ಮೆ ಕ್ಲಿಕ್ ಆದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚು ಹಣ ಗಳಿಸಬಹುದಾಗಿದೆ. ಈಗಿನ ಜಮಾನದಲ್ಲಿ ಹಾರ್ಡ್ ವರ್ಕ್ ಗಳಿಗಿಂತ ಸ್ಮಾರ್ಟ್ ವರ್ಕ್ ಹೆಚ್ಚು ಉಪಯೋಗಕ್ಕೆ ಬರೋದು. ಹಾಗಾಗಿ ನೀವು ತುಸು ಮುತುವರ್ಜಿಯಿಂದ ಆಹಾರ ನೀಡುವ ಉದ್ದಿಮೆ ಮಾಡಿದ್ರೆ ಖಂಡಿತ ಉತ್ತಮ ಯಶಸ್ಸನ್ನು ಗಳಿಸಬಹುದು.