ಆರ್ಸಿಬಿ ಈ ತಂಡ ಕಟ್ಟಿದರೆ ಕಪ್ ಗೆಲ್ಲುವುದು ಫಿಕ್ಸ್ ಅಂತೇ, ಕ್ರಿಕೆಟ್ ಪಂಡಿತರ ಲೆಕ್ಕಾಚಾರ ತಂಡ ಹೇಗಿದೆ ಗೊತ್ತೇ??

ಆರ್ಸಿಬಿ ಈ ತಂಡ ಕಟ್ಟಿದರೆ ಕಪ್ ಗೆಲ್ಲುವುದು ಫಿಕ್ಸ್ ಅಂತೇ, ಕ್ರಿಕೆಟ್ ಪಂಡಿತರ ಲೆಕ್ಕಾಚಾರ ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಶುರುವಾಗಿ ಹನ್ನೆರೆಡು ವರ್ಷವಾದರೂ, ಇದುವರೆಗೂ ಆರ್ಸಿಬಿ ತಂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ.ಈ ಭಾರಿಯ ಹರಾಜಿನಲ್ಲಿ ಆರ್ಸಿಬಿ ಅಂತಹ ಉತ್ತಮ ಆಟಗಾರರನ್ನು ಖರೀದಿಸದ ಕಾರಣ, ಈ ಭಾರಿಯೂ ಸಹ ಕಪ್ ಗೆಲ್ಲುವುದು ಕಷ್ಟ ಎಂಬುದು ಅಭಿಮಾನಿಗಳ ಅಭಿಪ್ರಾಯ. ಆದರೇ ತಜ್ಞರು ಲಭ್ಯವಿರುವ ಇಪ್ಪತ್ತೆರೆಡು ಆಟಗಾರರಲ್ಲಿ ಅತ್ಯುತ್ತಮ ಹನ್ನೊಂದರ ಇಲೆವೆನ್ ಪ್ರಕಟಿಸಿದ್ದು, ಈ ಇಲೆವೆನ್ ನಿಂದ ಆಡಿದರೇ, ಖಂಡಿತ ಕಪ್ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬನ್ನಿ ಆ ಇಲೆವೆನ್ ಹೇಗಿದೆ ಎಂದು ನೋಡೋಣ.

ಆರ್ಸಿಬಿ ತಂಡದ ಆರಂಭಿಕರಾಗಿ ನಾಯಕ ಫಾಪ್ ಡು ಪ್ಲೇಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸಮನ್ ಮಹಿಪಾಲ್ ಲೋಮ್ರೋರ್ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಆಡಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಯುವ ಬ್ಯಾಟ್ಸಮನ್ ಸುಯೇಶ್ ಪ್ರಭುದೇಸಾಯಿ ಆಡಲಿದ್ದಾರೆ. ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಆಡಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಆಡಲಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಬಂಗಾಳದ ಆಲ್ ರೌಂಡರ್ ಶಹಬಾಜ್ ಅಹಮದ್ ಆಡಲಿದ್ದಾರೆ.

ಒಂಬತ್ತನೇ ಕ್ರಮಾಂಕದಲ್ಲಿ ವೇಗಿ ಹರ್ಷಲ್ ಪಟೇಲ್ ಆಡಲಿದ್ದಾರೆ. ಹತ್ತನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಆಡಲಿದ್ದಾರೆ. ಹನ್ನೊಂದನೇ ಕ್ರಮಾಂಕದಲ್ಲಿ ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್ ಆಡಲಿದ್ದಾರೆ. ಈ ತಂಡ ಬಹಳಷ್ಟು ಬಲಿಷ್ಠವಾಗಿದ್ದು, ಕಪ್ ಗೆಲ್ಲಲಿದೆ ಎಂದು ಹೇಳುತ್ತಾರೆ. ಈ ಇಲೆವೆನ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ಫಾಪ್ ಡು ಪ್ಲೇಸಿಸ್, ವಿರಾಟ್ ಕೋಹ್ಲಿ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್ವೆಲ್, ಸುಯೇಶ್ ಪ್ರಭು ದೇಸಾಯಿ, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜೋಶ್ ಹೇಜಲ್ವುಡ್, ಮಹಮದ್ ಸಿರಾಜ್.