ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ ಬೆಸ್ಟ್ ಮೊಬೈಲ್ ರಿಚಾರ್ಜ್ ಪ್ಲಾನ್ ಗಳು ಯಾವ್ಯಾವು ಗೊತ್ತೇ? ಪ್ರತಿ ಸಿಮ್ ನಲ್ಲಿ ಸಿಗುವ ಬೆಸ್ಟ್ ಪ್ಲಾನ್ ಯಾವುದು ಗೊತ್ತೇ??

ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ ಬೆಸ್ಟ್ ಮೊಬೈಲ್ ರಿಚಾರ್ಜ್ ಪ್ಲಾನ್ ಗಳು ಯಾವ್ಯಾವು ಗೊತ್ತೇ? ಪ್ರತಿ ಸಿಮ್ ನಲ್ಲಿ ಸಿಗುವ ಬೆಸ್ಟ್ ಪ್ಲಾನ್ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ದೇಶದ ಎಲ್ಲಾ ಟೆಲಿಕಾಂ ಕಂಪನಿಗಳೂ ಗ್ರಾಹಕಸ್ನೇಹಿ ಪ್ರೆಪೇಯ್ಡ್ ಪ್ಲ್ಯಾನ್ ಗಳನ್ನು ಒದಗಿಸುತ್ತಿವೆ. ಬೇರೆ ಬೇರೆ ಬೆಲೆಯಲ್ಲಿ ಹೆಚ್ಚು ಡಾಟಾಗಳನ್ನು ಪಡೆಯುವಂತೆ ಯೋಜನೆಗಳನ್ನು ರೂಪಿಸಿವೆ. ನಿಮಗೆ ಒಂದು ಜಿಬಿ ಡೇಟಾ ಪ್ಲ್ಯಾನ್ ಸಾಕಾಗುತ್ತಿಲ್ಲ ಎಂದಾದರೆ, ಇನ್ನೂ ಹೆಚ್ಚಿನ ದೈನಂದಿನ ಡೇಟಾ ಹೊಂದಿರುವ ಯೋಜನೆಗಳನ್ನು ಪಡೆಯಬಹುದು. ಬನ್ನಿ ಜಿಯೋ ಏರ್ಟೆಲ್ ಹಾಗೂ ವಿಐ ಕಂಪನಿಗಳು ಯಾವೆಲ್ಲಾ 3ಜಿಬಿ ಡೆಟಾ ಪ್ಲ್ಯಾನ್ ಗಳನ್ನು ಪರಿಚಯಿಸಿವೆ ನೋಡೋಣ.

ಮೊದಲನೆಯದಾಗಿ ಜಿಯೋ ಪ್ಲ್ಯಾನ್ ಬಗ್ಗೆ ನೋಡುವುದಾದರೆ 419ರೂ ಗಳ ಯೋಜನೆಯಲ್ಲಿ 3ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎ ಎಸ್ ಗಳನ್ನು ಪ್ರತಿದಿನ ನೀಡಲಾಗುತ್ತದೆ ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಜಿಯೋದ ಮತ್ತೊಂದು ಪ್ರಿಪೇಯ್ಡ್ ಯೋಜನೆಯು 601 ರೂ.ಗಳದ್ದು ಇದೂ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎಂ ಎಸ್ ಹಾಗೂ ದೈನಂದಿನ 3ಜಿಬಿ ಡೇಟಾಗಳನ್ನು ಒಳಗೊಂಡಿದೆ. ಇದರ ಜೊತೆಗೆ ಯೋಜನೆಯು ಡಿಸ್ನಿ ಹಾಟ್ ಸ್ಟಾರ್, ಮೊಬೈಲ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆಗೆಯನ್ನೂ ನೀಡುತ್ತದೆ.

ಇನ್ನು ರೂ 1,199ದ ಜಿಯೋ ಪ್ರಿಪೇಯ್ಡ್ ಯೋಜನೆ 84 ದಿನಗಳ ಅವಧಿಯದ್ದು. ಇದರಲ್ಲಿ ದೈನಂದಿನ ಡೇಟಾ 3ಜಿಬಿ ಸಿಗುತ್ತದೆ. ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ ಎಂ ಎಸ್ ಸೌಲಭ್ಯ ಗಳನ್ನು ಹೊಂದಿರುತ್ತದೆ. ಇದೆಲ್ಲದಕ್ಕಿಂತ ಜಿಯೋದ ವಾರ್ಷಿಕ 4,119 ರೂ. ಪ್ಲ್ಯಾನ್ ಹೆಚ್ಚು ಪ್ರಚಲಿತದಲ್ಲಿದೆ. ಒಂದು ವರ್ಷದವರೆಗೆ ಚಿಂತೆಯಿಲ್ಲದೇ ದಿನಕ್ಕೆ 3 ಜಿಬಿ ಡೇಟಾ, 100 ಎಸ್ ಎಂ ಎಸ್ ಗಳು, ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಡಿಸ್ನಿ ಹಾಟ್ ಸ್ಟಾರ್, ಮೊಬೈಲ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆಗೆಯನ್ನೂ ಪಡೆಯಬಹುದು.

ಇನು ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್ ಗಳ ಬಗ್ಗೆ ನೋಡೋಣ. ದಿನಕ್ಕೆ 3ಜಿಬಿ ಡೇಟಾ ನೀದುವ ದೀರ್ಘಾವಧಿಯ ಯೋಜನೆಯಲ್ಲಿ ಏರ್ಟೆಲ್ ಹೊಂದಿಲ್ಲ. ಇದರ ಪ್ಲ್ಯಾನ್ ಗಳು ಹೀಗಿವೆ. ರೂ 599 ಗಳ ಪ್ಲ್ಯಾನ್. ಇದು 28 ದಿನಗಳ ಮಾನ್ಯತೆಯ ಅವಧಿ ಹೊಂದಿದ್ದು ದಿನಕ್ಕೆ 3ಜಿಬಿ ಡೇಟಾ, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆ, ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎಂ ಎಸ್ ನ್ನು ಒಳಗೊಂಡಿದೆ. ಇನ್ನು ಏರ್‌ಟೆಲ್‌ನಿಂದ ಮತ್ತೊಂದು ಹೆಚ್ಚು ಡೇಟಾ ಪ್ರಿಪೇಯ್ಡ್ ಪ್ಲಾನ್ ಅಂದ್ರೆ ರೂ 699 ಬೆಲೆಯದ್ದು. ಈ ಯೋಜನೆಯು ಪ್ರತಿ ದಿನ 3ಜಿಬಿ ಡೇಟಾವನ್ನು ನೀಡುತ್ತದೆ. ವ್ಯಾಲಿಡಿಟಿ 56 ದಿನಗಳದ್ದು. ಜೊತೆಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ ಎಂ ಎಸ್, ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿಗೆ ಉಚಿತ ಪ್ರಯೋಗ ಮತ್ತು ವಿಂಕ್ ಪ್ರೀಮಿಯಂ ಗೆ ಪ್ರವೇಶದೊಂದಿಗೆ ಬರುತ್ತವೆ.

ಈಗ ವೊಡಾಫೋನ್ ಐಡಿಯಾ ಕಂಪನಿಯ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ನೋಡೋಣ. 475ರೂ ಗಳಿಂದ ಪ್ರಿಪೇಯ್ಡ್ ಪ್ಲ್ಯಾನ್ ಆರಂಭವಾಗುತ್ತದೆ. ಇದರಲ್ಲಿ ದಿನಕ್ಕೆ 3ಜಿಬಿ ಇಂಟರ್ನೆಟ್, ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎಂ ಎಸ್ ದಿನಕ್ಕೆ ಲಭ್ಯ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದೆ. ಇನ್ನು ವಿಐ ನ 699ರೂ. ಗಳ ಯೋಜನೆಯೂ ಏರ್‌ಟೆಲ್ ನೀಡುವ ಪ್ಲಾನ್‌ ನ ಸೌಲಭ್ಯಗಳನ್ನೇ ಒಳಗೊಂಡಿದೆ. ಇದು 56 ದಿನಗಳ ವ್ಯಾಲಿಡಿಟಿ ನೀಡುತ್ತದೆ.