ತಿಂಗಳಿಗೆ ಬರೋಬ್ಬರಿ 65 ಸಾವಿರ ಸಂಬಳ, ವಿದ್ಯುತ್ ಪ್ರಸರಣ ನಿಗಮದಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ತಿಂಗಳಿಗೆ ಬರೋಬ್ಬರಿ 65 ಸಾವಿರ ಸಂಬಳ, ವಿದ್ಯುತ್ ಪ್ರಸರಣ ನಿಗಮದಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಇನ್ನೊಂದು ಸುವರ್ಣಾವಕಾಶವಿದೆ. ಹೌದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ 500 ಕ್ಕೂ ಹೆಚ್ಚು ಜ್ಯೂನಿಯರ್ ಇಂಜನಿಯರ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಕರ್ನಾಟಕ ವಿದ್ಯುತ್ ಪ್ರಸರನ ನಿಗಮದಲ್ಲಿ ಒಟ್ಟು 599 ಜೂನಿಯರ್ ಎಂಜಿನಿಯರ್(ಜೆಇ) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅಂದರೆ ಫೆಬ್ರವರಿ 7 ರಿಂದ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಮಾರ್ಚ್ 7ರ ವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಶುಲ್ಕ ಸಲ್ಲಿಸಲು ಮತ್ತೆ 2 ದಿನಗಳ ಕಾಲ ಅಂದರೆ ಮಾರ್ಚ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕ್) ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಹಾಗೂ ಜೂನಿಯರ್ ಎಂಜಿನಿಯರ್(ಸಿವಿಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಮುಗಿಸಿರುವವರು ಅರ್ಜಿ ಸಲ್ಲಿಸಬಹುದು. ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕ್) ಹುದ್ದೆಗೆ ಆಯ್ಕೆಯಾದರೆ ತಿಂಗಳಿಗೆ 26,270-65,020 ರೂ. ಹಾಗೂ ಜೂನಿಯರ್ ಎಂಜಿನಿಯರ್(ಸಿವಿಲ್)- ತಿಂಗಳಿಗೆ 26,270-65,020ರೂ. ವೇತನವನ್ನು ಪಡೆಯಬಹುದು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್(ಜೆಇ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರುವುದು ಕಡ್ದಾಯ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಎಸ್ ಸಿ/ ಎಸ್ ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಹಾಗೂ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಹೀಗಿದೆ: ಸಾಮಾನ್ಯ, ಪ್ರವರ್ಗ-1, ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 350 ರೂ. ಅರ್ಜಿ ಶುಲ್ಕವಿರುತ್ತದೆ. ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಇನ್ನು ಅಭ್ಯರ್ಥಿಗಳ ಆಯ್ಕೆಯನ್ನು ಮೆರಿಟ್ ಲಿಸ್ಟ್, ಕನ್ನಡ ಭಾಷಾ ಪರೀಕ್ಷೆ ಮತ್ತು ಆಪ್ಟಿಟ್ಯೂಡ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು kptcl.karnataka.gov.in ಗೆ ವೆಬ್ ಸೈಟ್ ಗೆ ಭೇಟಿ ನೀಡಿ.