ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೀವನವನ್ನು ಮತ್ತೆ ಯಶಸ್ಸಿನ ಹಾದಿಯಲ್ಲಿ ತೆಗೆದುಕೊಂಡು ಹೋಗುವಾಗ ಕೇಳಬಾರದ ಪ್ರಶ್ನೆ ಕೇಳಿದ ಅಭಿಮಾನಿಗೆ, ಸಮಂತಾ ನೀಡಿದ ಉತ್ತರವೇನು ಗೊತ್ತೇ??

37

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ರವರು ವೃತ್ತಿಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಏಳುಬೀಳುಗಳನ್ನು ಕಂಡು ಬದುಕಿನಲ್ಲಿ ಮುನ್ನುಗ್ಗಿ ಬಂದವರು. ನಟಿ ಸಮಂತಾ ರವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಾಕಷ್ಟು ಡಿಪ್ರೆಷನ್ ಗೆ ಒಳಗಾಗಿದ್ದರು. ಆದರೆ ಎಲ್ಲಾ ಸಮಸ್ಯೆಗಳನ್ನು ಕೂಡ ಸಮಂತಾ ರವರು ಒಂಟಿಯಾಗಿಯೇ ನಿಂತು ಎದುರಿಸಿ ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಬಹುಬೇಡಿಕೆಯ ನಟಿಯಾಗಿದ್ದಾರೆ.

ನಿಜಕ್ಕೂ ಕೂಡ ಅವರು ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಯುವಜನತೆಗೆ ಸ್ಫೂರ್ತಿ ಎಂದು ಹೇಳಬಹುದಾಗಿದೆ. ಇನ್ನು ಸದ್ಯಕ್ಕೆ ಸಮಂತ ರವರ ಶಾಕುಂತಲಂ ಚಿತ್ರ ಬಹಳಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ಫಸ್ಟ್ ಲುಕ್ ಅನ್ನು ಕೂಡ ಸಮಂತಾ ರವರು ಬಿಡುಗಡೆ ಮಾಡಿದ್ದು ವಿಭಿನ್ನ ಗೆಟಪ್ ನಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚಿಗಷ್ಟೇ ಸಮಂತಾ ರವರು ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆಗೆ ಏನನ್ನಾದರೂ ಕೇಳಿ ನಾನು ಉತ್ತರಿಸುತ್ತೇನೆ ಎಂಬುದಾಗಿ ಪ್ರಶ್ನೋತ್ತರ ಸೆಷನ್ ಅನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಆಯ್ದ ಕೆಲವು ಪ್ರಶ್ನೆಗಳಿಗೆ ನಟಿ ಸಮಂತಾ ರವರು ಉತ್ತರ ನೀಡಿದ್ದಾರೆ.

ಅದರಲ್ಲಿ ಒಬ್ಬ ಅಭಿಮಾನಿ ನಿಮಗೆ ಜೀವನದಲ್ಲಿ ಇಷ್ಟೊಂದು ಧೈರ್ಯ ಹೇಗೆ ಬಂತು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಸಂಬಂಧ ಅವರು ಉತ್ತರಿಸುತ್ತಾ ಕಷ್ಟಕಾಲದಲ್ಲಿ ನಮ್ಮ ಧೈರ್ಯ ಎನ್ನುವುದು ತನ್ನಿಂತಾನಾಗಿ ಹೊರಬರುತ್ತದೆ ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಕೀಳುಮಟ್ಟದ ಅಭಿಮಾನಿ ನೀವು ರೀ ಪ್ರೊಡ್ಯೂಸ್ ಮಾಡಿದ್ದೀರಾ ಯಾಕೆಂದರೆ ನಾನು ನಿಮ್ಮನ್ನು ರಿ ಪ್ರೊಡ್ಯೂಸ್ ಮಾಡಬೇಕು ಎಂಬುದಾಗಿ ಪ್ರಶ್ನೆ ಕೇಳಿದ್ದಾನೆ. ಇಂತಹ ಕೆಳಗಿನ ಮಟ್ಟದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸುತ್ತ ಸಮಂತಾ ರವರು ರಿ ಪ್ರೊಡ್ಯೂಸ್ ಪದವನ್ನು ಒಂದು ವಾಕ್ಯದಲ್ಲಿ ಹೇಗೆ ಬಳಸಬೇಕು ಅದನ್ನು ಗೂಗಲ್ ಮಾಡಬೇಕಾ ಎಂಬುದಾಗಿ ಕೇಳಿದ್ದಾರೆ. ಇಂತಹ ಕೀಳು ಪ್ರವೃತ್ತಿಯ ಜನರನ್ನು ಅವರದೇ ರೀತಿಯಲ್ಲಿ ವ್ಯವಹರಿಸುವ ರೀತಿಯಲ್ಲಿ ಸಮಂತಾ ರವರು ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.