ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಕದಿನ, ಟಿ 20 ಅಷ್ಟೇ ಅಲ್ಲದೇ, ಟೆಸ್ಟ್ ತಂಡಕ್ಕೂ ಕೂಡ ರೋಹಿತ್ ರವರನ್ನು ನಾಯಕನ್ನಾಗಿ ಆಯ್ಕೆ ಮಾಡಿದ್ದು ಯಾಕೆ ಗೊತ್ತೇ?? ಬಿಸಿಸಿಐ ಬಿಗ್ ಪ್ಲಾನ್ ಏನು ಗೊತ್ತೇ??

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ರೋಹಿತ್ ಶರ್ಮಾರವರ ಹೆಸರನ್ನು ಬಿಸಿಸಿಐ ಘೋಷಿಸಿದೆ.ಆದರೇ ರೋಹಿತ್ ಶರ್ಮಾ ಗೆ ಕೇವಲ ನಾಯಕತ್ವದ ಹೊಣೆ ಮಾತ್ರವಲ್ಲದೇ, ಮತ್ತೊಂದು ಮಹತ್ತರ ಹೊಣೆಯನ್ನು ಬಿಸಿಸಿಐ ವಹಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೇವಲ ತಂಡವನ್ನು ಮಾತ್ರ ಮುನ್ನಡೆಸುವ ಜವಾಬ್ದಾರಿ ಹಿಟ್ ಮ್ಯಾನ್ ಬೆನ್ನಿಗಿಲ್ಲ, ಬದಲಿಗೆ ಬಿಸಿಸಿಐ ವಹಿಸಿದ ಮತ್ತೊಂದು ಟಾಸ್ಕ್ ನ್ನು ಯಶಸ್ವಿಯಾಗಿ ನಿಭಾಯಿಸುವ ಜವಾಬ್ದಾರಿ ಈಗ ರೋಹಿತ್ ಶರ್ಮಾ ಮೇಲಿದೆ. ಬನ್ನಿ ಆ ವಿಶೇಷ ಜವಾಬ್ದಾರಿ ಯಾವುದು ಎಂದು ತಿಳಿಯೋಣ.

ರೋಹಿತ್ ಗೆ ಪ್ರಸ್ತುತ ಟೆಸ್ಟ್ ತಂಡದ ನಾಯಕ ಸ್ಥಾನದ ಜೊತೆಗೆ, ಭವಿಷ್ಯದ ನಾಯಕರನ್ನು ಸಹ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೆಗಲಿಗೇರಿಸಿದೆ. ಸದ್ಯ ಎಮರ್ಜಿಂಗ್ ಹಾಗೂ ಭರವಸೆ ಇಡಬಹುದಾದ ಪ್ರತಿಭೆಗಳಾದ ರಿಷಭ್ ಪಂತ್, ಕೆ.ಎಲ್.ರಾಹುಲ್, ಜಸಪ್ರಿತ್ ಬುಮ್ರಾರನ್ನು ಭವಿಷ್ಯದ ನಾಯಕನ ಪಟ್ಟಕ್ಕೆ ಸೂಕ್ತ ರೀತಿಯಲ್ಲಿ ಅವರನ್ನು ತಯಾರಿ ಮಾಡಬೇಕು ಎಂಬ ಕಟ್ಟಪ್ಪಣೆಯನ್ನು ಹೊರಡಿಸಲಾಗಿದೆ.

ಈ ಮೂವರಲ್ಲಿ ಕೂಲ್ ಆಗಿರುವ ಕೆ.ಎಲ್.ರಾಹುಲ್ ಮೊದಲ ಆಯ್ಕೆಯಾಗಿದ್ದಾರೆ. ನಂತರದ ಆಯ್ಕೆ ರಿಷಭ್ ಪಂತ್ ಆಗಿದ್ದಾರೆ. ಆದರೇ ರಿಷಭ್ ಪಂತ್ ಗೆ ಫಾರ್ಮ್ ಸಮಸ್ಯೆ ಇದೆ. ಜೊತೆಗೆ ಅವರ ವರ್ತನೆಯಲ್ಲಿಯೂ ಬಹುಪಾಲು ಸುಧಾರಿಸಬೇಕಿದೆ. ಜವಾಬ್ದಾರಿಯುತ ಇನ್ನಿಂಗ್ಸ್ ಗಳು ಹೆಚ್ಚೆಚ್ಚು ಬರಬೇಕಾಗಿದೆ. ಇನ್ನು ಬೌಲರ್ ವಿಭಾಗದಲ್ಲಿ ಜಸಪ್ರಿತ್ ಬುಮ್ರಾ ಮೊದಲ ಆಯ್ಕೆಯಾಗಿದ್ದಾರೆ. ಇನ್ನು ಹಲವು ವರ್ಷಗಳ ಕಾಲ ನಿರಂತರ ಕ್ರಿಕೇಟ್ ಆಡುವ ಸಾಮರ್ಥ್ಯ ಬುಮ್ರಾ ಬಳಿ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.