ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ದುಃಖ್ಖದಲ್ಲಿಯೂ ಕೂಡ ಗಟ್ಟಿ ನಿರ್ಧಾರ ತೆಗೆದುಕೊಂಡ ರಚನಾ ಕುಟುಂಬ, ಭೇಷ್ ಎಂದ ಜನರು.

53

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲಾವಿದರ ಸಾಲು-ಸಾಲು ಮರಣದ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಕೇಳುತ್ತಿದ್ದೇವೆ. ಈಗಾಗಲೇ ಸಾಕಷ್ಟು ಜನರನ್ನು ಕಳೆದುಕೊಂಡು ನಾವು ನೊಂದಿದ್ದೇವೆ. ಈಗ ಈ ಸಾಲಿಗೆ ಮತ್ತೊಂದು ಮರಣದ ಸುದ್ದಿ ಬಂದಪ್ಪಳಿಸಿದ ಸ್ನೇಹಿತರೆ. ಹೌದು ನಾವು ಮಾತನಾಡುತ್ತಿರುವುದು ರೇಡಿಯೋ ಜಾಕಿ ಆಗಿರುವ ಆರ್ ಜೆ ರಚನಾ ರವರ ಕುರಿತಂತೆ. ರಚನಾ ರವರು ತೀವ್ರ ಹೃದಯಾಘಾ’ತದಿಂದಾಗಿ ಮರಣವನ್ನು ಹೊಂದಿದ್ದಾರೆ.

ತಮ್ಮ ಚಟಪಟ ಮಾತುಗಳಿಂದಾಗಿ ರೇಡಿಯೋ ಕೇಳುಗರೆಲ್ಲರನ್ನೂ ಕೂಡ ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದರು. ಇಷ್ಟೊಂದು ಆರೋಗ್ಯವಂತರಾಗಿದ್ದ ಆರ್ ಜೆ ರಚನಾ ರವರು 39ನೇ ವಯಸ್ಸಿಗೆ ಈ ಲೋಕವನ್ನು ಪೂರೈಸಿ ಬಾರದ ಲೋಕಕ್ಕೆ ಹೋಗಿರುವುದು ನಿಜಕ್ಕೂ ಕೂಡ ವಿಷಾದನೀಯ. ಹಲವಾರು ವರ್ಷಗಳಿಂದ ಮಾನಸಿಕವಾಗಿ ಕೂಡ ರಚನಾ ರವರು ಕುಗ್ಗಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಹೃದಯಾಘಾ’ತವಾದ ಸಂದರ್ಭದಲ್ಲಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣಹೊಂದಿದ್ದಾರೆ.

ರೇಡಿಯೋ ಮಿರ್ಚಿ ಹಾಗೂ ರೇಡಿಯೋ ಸಿಟಿ ಸೇರಿದಂತೆ ಹಲವಾರು ರೇಡಿಯೋ ಚಾನೆಲ್ಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಹಲವಾರು ಸ್ಯಾಂಡಲ್ವುಡ್ ನಟರು ಕೂಡ ರಚನಾ ರವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿರುತಿದ್ದರು. ಇನ್ನು ರಚನಾ ರವರ ಮರಣದ ಹಿನ್ನೆಲೆಯಲ್ಲಿ ಅವರ ಪೋಷಕರು ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತದ್ದಾಗಿದೆ. ಹೌದು ಕಂಚಿನ ಕಂಠದ ಆರ್ ಜೆ ರಚನಾ ರವರ ಮರಣದ ಹಿನ್ನೆಲೆಯಲ್ಲಿ ಅವರ ಪೋಷಕರು ರಚನಾ ಅವರ ದೇಹದ ಅಂಗಾಂಗಗಳನ್ನು ಅಗತ್ಯವಿರುವವರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ರಚನಾ ರವರು ತಮ್ಮ ಮರಣದಲ್ಲಿ ಕೂಡ ಸಾರ್ಥಕತೆಯನ್ನು ಪಡೆಯುವಂತೆ ಮಾಡಿದ್ದಾರೆ. ಈ ನಿರ್ಧಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.