ಮುಂದಿನ ವಿಶ್ವಕಪ್ ಗೆಲ್ಲಬೇಕು ಎಂದರೇ, ಈ ಐದು ಬೌಲರ್ ಗಳು ವಿಶ್ವಕಪ್ ನಲ್ಲಿ ಆಡಲೇಬೇಕು ಎಂದ ನೆಹ್ರಾ, ಆಯ್ಕೆ ಮಾಡಿದ ಟಾಪ್ 5 ಬೌಲರ್ ಗಳು ಯಾರ್ಯಾರು ಗೊತ್ತೇ??

ಮುಂದಿನ ವಿಶ್ವಕಪ್ ಗೆಲ್ಲಬೇಕು ಎಂದರೇ, ಈ ಐದು ಬೌಲರ್ ಗಳು ವಿಶ್ವಕಪ್ ನಲ್ಲಿ ಆಡಲೇಬೇಕು ಎಂದ ನೆಹ್ರಾ, ಆಯ್ಕೆ ಮಾಡಿದ ಟಾಪ್ 5 ಬೌಲರ್ ಗಳು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಎಲ್ಲೆಡೆ ಮಿಷನ್ ಮೆಲ್ಬೋರ್ನ್ ಮಾತು ಕೇಳಿ ಬರುತ್ತಿದೆ. ಕಳೆದ ವಿಶ್ವಕಪ್ ನಲ್ಲಿ ಆದ ನಿರಾಸೆಯನ್ನು ಈ ಭಾರಿ ದೂರ ಮಾಡಲು ಭಾರತ ತಂಡ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಈಗಿನಿಂದಲೇ ಹಲವು ಪ್ರಯೋಗಗಳನ್ನು ನಡೆಸಿ ತಂಡದ ಅಂತಿಮ ಹನ್ನೊಂದರ ಬಳಗ ಹಾಗೂ ಬೆಂಚ್ ಸ್ಟ್ರೆಂತ್ ಎರಡನ್ನೂ ಗಟ್ಟಿಗೊಳಿಸುತ್ತದೆ.

ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ ೨೦ ವಿಶ್ವಕಪ್ ಗೆ ತಂಡ ಹೇಗಿರಬೇಕೆಂಬುದನ್ನು ಹೇಳುತ್ತಿದ್ದಾರೆ. ಅದೇ ರೀತಿ ಈಗ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಹಾಗೂ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿರುವ ಆಶೀಶ್ ನೆಹ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ‌.

ಆಶೀಶ್ ನೆಹ್ರಾ ಪ್ರಕಾರ ಈ ಐವರು ವೇಗದ ಬೌಲರ್ ಗಳನ್ನು ಟಿ ೨೦ ಕ್ರಿಕೆಟ್ ತಂಡದಲ್ಲಿ ಆಡಿಸಬೇಕಂತೆ. ಅವರುಗಳು ಯಾರೆಂದರೇ, ಜಸಪ್ರಿತ್ ಬುಮ್ರಾ, ಮಹಮದ್ ಶಮಿ, ಮಹಮದ್ ಸಿರಾಜ್, ಪ್ರಸಿದ್ದ್ ಕೃಷ್ಣ ಹಾಗೂ ದೀಪಕ್ ಚಾಹರ್. ಈ ಐವರಲ್ಲಿ ಮೂವರು ವೇಗದ ಬೌಲಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದರೇ ಖಂಡಿತವಾಗಿಯೂ ಆಸೀಸ್ ನೆಲದಲ್ಲಿ ಭಾರತ ತಂಡ ತನ್ನ ವಿಜಯ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಲಿದೆ ಎಂದು ನೆಹ್ರಾ ಹೇಳಿದ್ದಾರೆ.

ಇನ್ನು ಟಿ೨೦ ಗೆಂದು ಹೇಳಿ ಮಾಡಿಸಿರುವ ಹರ್ಷಲ್ ಪಟೇಲ್ , ಭುವನೇಶ್ವರ್ ಕುಮಾರ್ ಹಾಗೂ ಟಿ.ನಟರಾಜನ್ ರವರನ್ನು ಕೈ ಬಿಟ್ಟಿರುವ ಬಗ್ಗೆ ಸಹ ಮಾತನಾಡಿರುವ ನೆಹ್ರಾ, ಭುವಿ ಹಾಗೂ ದೀಪಕ್ ಚಾಹರ್ ಒಂದೇ ರೀತಿಯ ಬೌಲರ್ ಗಳು. ಭುವಿಗಿಂತ ದೀಪಕ್ ಬ್ಯಾಟಿಂಗ್ ನಲ್ಲಿಯೂ ಸಹ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು. ಹಾಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಇನ್ನು ನಟರಾಜನ್ ಸದ್ಯ ಫಾರ್ಮ್ ನಲ್ಲಿ ಇಲ್ಲ ಹಾಗೂ ಹರ್ಷಲ್ ಪಟೇಲ್ ಕಳೆದ ಐಪಿಎಲ್ ನಲ್ಲಿ ಬೆಳಕಿಗೆ ಬಂದವರು. ಈ ಐಪಿಎಲ್ ನಲ್ಲಿ ಅವರು ಅದೇ ಪ್ರದರ್ಶನ ಮುಂದುವರೆಸಿದರೇ ನೋಡೋಣ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ