ಕನ್ನಡಿಗ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬದ್ದತೆಯನ್ನೇ ಪ್ರಶ್ನಿಸಿದ ಇರ್ಫಾನ್ ಪಠಾಣ್, ಯಾಕೆ ಗೊತ್ತೇ??

ಕನ್ನಡಿಗ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬದ್ದತೆಯನ್ನೇ ಪ್ರಶ್ನಿಸಿದ ಇರ್ಫಾನ್ ಪಠಾಣ್, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರಸ್ತುತ ಭಾರತ ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್. ಇವರು ಕೋಚ್ ಆದ ನಂತರ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತಿದೆ. ಬಯೋ ಬಬಲ್ ದೃಷ್ಟಿಯಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡುತ್ತಿದ್ದಾರೆ. ಅದಲ್ಲದೇ ಫಾರ್ಮ್ ಕಳೆದುಕೊಂಡ ಆಟಗಾರರಿಗೆ ಮುಲಾಜಿಲ್ಲದೆ ತಂಡದಿಂದ ಗೇಟ್ ಪಾಸ್ ನೀಡಿ, ರಣಜಿ ಅಡಿ ಎಂದು ಕಳಿಸುತ್ತಿದ್ದರು. ಆದರೇ ಈಗ ಭಾರತ ತಂಡದ ವಿಕೇಟ್ ಕೀಪರ್ ವೃದ್ಧಿಮಾನ್ ಸಹಾ ಸಿಡಿಸಿದ ಬಾಂಬ್ ಎಲ್ಲೆಡೆ ವ್ಯಾಪಕ ಟೀಕೆಗಳಿಗೆ ವ್ಯಕ್ತವಾಗುತ್ತಿದೆ.

ಹೌದು ಸೌತ್ ಆಫ್ರಿಕಾ ಪ್ರವಾಸಕ್ಕಿಂತ ಮುಂಚೆ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ಸರಣಿ ನಂತರ ವಿಕೇಟ್ ಕೀಪರ್ ೩೭ ವರ್ಷದ ವೃದ್ಧಿಮಾನ್ ಸಹಾ ಗೆ ಇನ್ಮುಂದೆ ನಿಮಗೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ. ಹಾಗಾಗಿ ನಿವೃತ್ತಿಯ ಬಗ್ಗೆ ಯೋಚಿಸು ಎಂದು ಪರೋಕ್ಷವಾಗಿ ಹೇಳಿದ್ದರಂತೆ. ಇದನ್ನು ಬಹಿರಂಗಗೊಳಿಸಿದ ನಂತರ ಭಾರತ ತಂಡದ ಮಾಜಿ ಆಟಗಾರರು ದ್ರಾವಿಡ್ ವಿರುದ್ದ ತಿರುಗಿಬಿದ್ದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತ ತಂಡದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ , ರಾಹುಲ್ ದ್ರಾವಿಡ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ತಂಡದ ಕೋಚ್ ಆಗಿ , ತಂಡದ ಆಟಗಾರರು ವಿಶ್ವಾಸ ಕಳೆದುಕೊಂಡಾಗ ಅವರಿಗೆ ಆತ್ಮವಿಶ್ವಾಸ ತುಂಬಬೇಕು. ಅದನ್ನು ಬಿಟ್ಟು ಅವರಿಗೆ ಕೀಳರಿಮೆ ಬರಿಸುತ್ತಿರಿಂದರೇ, ನಿಮ್ಮ ಪ್ರಾಮಾಣಿಕತೆಯನ್ನು ನೋಡಬೇಕಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆ ಭಾರತ ತಂಡದ ಆಯ್ಕೆಯ ಸಂದರ್ಭದಲ್ಲಿ ಕೋಚ್ ಪ್ರಾಮಾಣಿಕವಾಗಿಬೇಕು. ಹಾಗಾದಾಗ ಮಾತ್ರ ಉತ್ತಮ ಕ್ರಿಕೆಟ್ ನೀರಿಕ್ಷಿಸಲು ಸಾಧ್ಯ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧದ ಕಾಮೆಂಟ್ ಗಳು ಬರುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.