ಖಾಲಿ ಇರುವ 700 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೂರ್ವ ಕರಾವಳಿ ರೈಲ್ವೆ, SSLC ಅಥವಾ ITI ಮಾಡಿದ್ದರೇ ಅರ್ಜಿ ಸಲ್ಲಿಸಿ.

ಖಾಲಿ ಇರುವ 700 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೂರ್ವ ಕರಾವಳಿ ರೈಲ್ವೆ, SSLC ಅಥವಾ ITI ಮಾಡಿದ್ದರೇ ಅರ್ಜಿ ಸಲ್ಲಿಸಿ.

ನಮಸ್ನಾರ ಸ್ನೇಹಿತರೇ, ನೀವು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ್ದರೆ, ಐಐಟಿ ಮುಗಿಸಿದ್ದರೆ ನಿಮಗಾಗಿ ವಿವಿಧ ಹುದ್ದೆಗಳು ರೈಲ್ಪೆಯಲ್ಲಿ ಖಾಲಿ ಇವೆ. ಪೂರ್ವ ಕರಾವಳಿ ರೈಲ್ವೆ ಮಂಡಳಿಯು ತನ್ನಲ್ಲಿರುವ ಅಪ್ರೆಂಟಿಸ್ ಪೋಸ್ಟ್‌ಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಆಲ್ ನೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ.

ಪೂರ್ವ ಕರಾವಳಿ ರೈಲ್ವೆ ಘಟಕವಾರು 756 ಹುದ್ದೆಗಳು ಖಾಲಿ ಇದ್ದು, ಇದರ ವಿವರ ಹೀಗಿದೆ. ಕ್ಯಾರಿಯೇಜ್ ರಿಪೇರ್ ವರ್ಕ್‌ಶಾಪ್ ಮಚೇಶ್ವರ್, ಭುಬನೇಶ್ವರ್: 190 ಹುದ್ದೆಗಳು, ಖುರ್ದ ರೋಡ್ ಡಿವಿಷನ್ : 237 ಹುದ್ದೆಗಳು, ವಾಲ್‌ಟೈರ್ ಡಿವಿಷನ್ : 263 ಹುದ್ದೆಗಳು, ಸಂಬಲ್‌ಪುರ್ ಡಿವಿಷನ್ : 66 ಹುದ್ದೆಗಳು. ಆನ್ ಲೈನ್ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದ್ದು ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.100 ಶುಲ್ಕವಿರುತ್ತದೆ. ಎಸ್‌ಸಿ / ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಇನ್ನು ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು. ಫೆಬ್ರವರಿ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಜ್ 07, 2022. ಇನ್ನು 18 ವರ್ಷ ಮೇಲ್ಪಟ್ಟ ಹಾಗೂ ಗರಿಷ್ಠ 24 ವರ್ಷ ವಯಸ್ಸು ದಾಟದವರು ಅರ್ಜಿ ಸಲ್ಲಿಸಬಹುದು. ವರ್ಗಾವಾರು ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ / ಐಟಿಐ ತೇರ್ಗಡೆ ಹೊದಿರುವುದು ಕಡ್ಡಾಯ. ಮಾರ್ಚ್ 7ರ ಒಳಗೆ ಅರ್ಜಿ ಸಲ್ಲಿಸಿ.