ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡಿಗರನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿರುವ ರಾಜಸ್ಥಾನ ತಂಡದ ಸಂಭಾವ್ಯ ಹನ್ನೊಂದರ ಬಳಗ ಹೇಗಿದೆ ಗೊತ್ತೇ?? ಗೆಲ್ಲಲು ಸಾಧ್ಯವೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಕನ್ನಡಿಗರ ತಂಡ ಎಂದು ಕರೆಯಲಾಗುತ್ತಿತ್ತು. ಆದರೇ ಈ ಭಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಕನ್ನಡಿಗರ ತಂಡ ಎಂದು ಕರೆಯುವ ಸಾಧ್ಯತೆ ಇದೆ.ಹೌದು ಗರಿಷ್ಠ ಕನ್ನಡಿಗರನ್ನು ಖರೀದಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಬಾರಿಯ ಆಟಗಾರರಾದ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್,ಹಾಗೂ ಯಶಸ್ವಿ ಜೈಸ್ವಾಲ್ ರವರನ್ನು ರಿಟೇನ್ ಮಾಡಿತ್ತು. ಈ ಭಾರಿ ಸಹ ಉತ್ತಮ ಆಟಗಾರರನ್ನು ಖರೀದಿಸಿದ್ದು, ಅದರ ಆಡುವ ಹನ್ನೊಂದರ ಬಳಗ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ತಂಡದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಮತ್ತು ವಿಕೇಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಆಡಲಿದ್ದಾರೆ.ಐದನೇ ಕ್ರಮಾಂಕದಲ್ಲಿ ವಿಂಡೀಸ್ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮೆಯರ್, ಆರನೇ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಬ್ಯಾಟ್ ಬೀಸಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ನ್ಯೂಜಿಲೆಂಡ್ ನ ಜಿಮ್ಮಿ ನೀಶಮ್ ಹಾಗೂ ಎಂಟನೇ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ ಆಡಲಿದ್ದಾರೆ.

ಒಂಬತ್ತನೆ ಕ್ರಮಾಂಕದಲ್ಲಿ ವೇಗಿ ಟ್ರೆಂಟ್ ಬೌಲ್ಡ್ ಆಡಲಿದ್ದಾರೆ. ಹತ್ತನೇ ಕ್ರಮಾಂಕದಲ್ಲಿ ಸ್ಪಿನ್ನರ್ ಯುಜವೇಂದ್ರ ಚಾಹಲ್ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಸಮತೂಕ ಹೊಂದಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜಿಮ್ಮಿ ನೀಶಮ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ.

Get real time updates directly on you device, subscribe now.