ಸದ್ದಿಲ್ಲದೇ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ ಸ್ಮಾರ್ಟ್ ಫೋ, ಕಡಿಮೆ ಬೆಲೆಗೆ ಎಷ್ಟೆಲ್ಲ ಫೀಚರ್ ಇದೇ ಗೊತ್ತೇ?? ಮೂರು ದಿನ ಒಮ್ಮೆ ಚಾರ್ಜ್ ಮಾಡಿದರೂ ಸಾಕು.

ಸದ್ದಿಲ್ಲದೇ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ ಸ್ಮಾರ್ಟ್ ಫೋ, ಕಡಿಮೆ ಬೆಲೆಗೆ ಎಷ್ಟೆಲ್ಲ ಫೀಚರ್ ಇದೇ ಗೊತ್ತೇ?? ಮೂರು ದಿನ ಒಮ್ಮೆ ಚಾರ್ಜ್ ಮಾಡಿದರೂ ಸಾಕು.

ನಮಸ್ಕಾರ ಸ್ನೇಹಿತರೇ, ನೋಕಿಯಾ ತನ್ನ ಹೊಸ ಆವೃತ್ತಿಯನ್ನು ಯುರೋಪ್ ನಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ನೋಕಿಯಾ ಜಿ 21 ಹಾಗೂ ನೋಕಿಯಾ ಜಿ11 ಎರಡೂ ಫೋನ್ ಗಳು ಹಲವು ವೈಶಿಷ್ಯತೆಗಳನ್ನು ಹೊಂದಿದ್ದು ಸದ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ. ಜಿ 11ಹೆಚ್ಚಿನ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಹೆಚ್ ಡಿ ಪ್ರದರ್ಶನವನ್ನು ಹೊಂದಿದೆ. ಇದರ ವಿಶೇಷತೆಗಳಲ್ಲಿ ಒಂದು ಅದರ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ. ಒಮ್ಮೆ ರೀಚಾರ್ಜ್ ಮಾಡಿದರೆ 3 ದಿನಗಳ ಕಾಲ ಬಳಸಬಹುದು ಎಂದು ಕಂಪನಿ ತಿಳಿಸಿದೆ. ಬನ್ನಿ ಈ ಫೋನ್ ನ ಇನ್ನಷ್ಟು ವೈಶಿಷ್ಟ್ಯತೆಗಳನ್ನು ನೋಡೋಣ.

ನೊಕಿಯಾ ಜಿ11 3ಜಿಬಿ ರಾಮ್, ಮತ್ತು 32ಜಿಬಿ ಸ್ಟೋರೇಜ್ ಹೊಂದಿದ್ದು ಇಅದ್ರ ಬೆಲೆ $161 (ಯುಕೆ ಬೆಲೆ). ಚಾರ್ಕೋಲ್ ಮತ್ತು ಐಸ್ ಬಣ್ಣಗಳಲ್ಲಿ ಲಭ್ಯವಿವೆ. ನೋಕಿಯಾ ಜಿ11, ಫೋನ್ 6.5-ಇಂಚಿನ ಎಲ್ ಸಿಡಿ ಪರದೆಯನ್ನು ಹೊಂದಿದೆ. 720 x 1600 ಪಿಕ್ಸೆಲ್‌ಗಳ ಹೆಚ್ ಡಿ+ ರೆಸಲ್ಯೂಶನ್, 20: 9 ಆಕಾರ ಅನುಪಾತ, 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ ಮತ್ತು ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ (ಮುಖ್ಯ) + 2-ಮೆಗಾಪಿಕ್ಸೆಲ್ (ಆಳ) + 2-ಮೆಗಾಪಿಕ್ಸೆಲ್ (ಮ್ಯಾಕ್ರೋ) ಟ್ರಿಪಲ್ ಕ್ಯಾಮೆರಾ ಸೌಲಭ್ಯವನ್ನು ಹೊಂದಿದೆ.

ಇನ್ನು 32 ಜಿಬಿ ಇಂಟರನಲ್ ಸ್ಟೋನ್ರೇಜ್ ಮತ್ತು ಮೈಕ್ರೊ ಎಸ್ ಡಿ ಕಾರ್ಡ್ ನ ಸ್ಲಾಟ್ ಅನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 11 ಅನ್ನು ಬೂಟ್ ಮಾಡುತ್ತದೆ. ಇದು 2 ವರ್ಷಗಳ ಒಎಸ್ ಅಪ್‌ಗ್ರೇಡ್‌ಗಳನ್ನು ಮತ್ತು 3 ವರ್ಷಗಳ ಮಾಸಿಕ ಭದ್ರತಾ ನವೀಕರಣಗಳನ್ನು ಇದರಲ್ಲಿ ಪಡೆಯಬಹುದು. ಇನ್ನು ನೋಕಿಯಾ ಜಿ11 ನ ಬ್ಯಾಟರಿ ಬಗ್ಗೆ ಹೇಳಲೇಬೇಕು. 18ವಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,050ಎಂಎಹೆಚ್ ಬ್ಯಾಟರಿಯನ್ನು ನೀಡುತ್ತದೆ, ಆದರೆ 10ವಾಟ್ ಇನ್-ಬಾಕ್ಸ್ ಚಾರ್ಜರ್‌ನೊಂದಿಗೆ ಬರುತ್ತದೆ. ಅಂದರೆ ಸುಮಾರು 2-3 ದಿನ ಚಾರ್ಜ್ ಮಾಡದೇ ಫೋನ್ ಬಳಸಬಹುದು ಎನ್ನುತ್ತೆ ಕಂಪನಿ. ನೋಯಿಕಾ ಮೊದಲಿನಿಂದಲೂ ಉತ್ತಮ ಫೋನ್ ಎನಿಸಿಕೊಂಡಿದ್ದು ಇದೀಗ ಈ ಸ್ಮಾರ್ಟ್ ಫೋನ್ ಹೇಗೆ ಗೆಲ್ಲುತ್ತದೆ ನೋಡಬೇಕು.