2022 ರಲ್ಲಿ ಟಿವಿ ಯಲ್ಲಿ ಪ್ರಸಾರವಾದಾಗ ಅತ್ಯಂತ ಹೆಚ್ಚು ಟಿ ಆರ್ ಪಿ ರೇಟಿಂಗ್ ಪಡೆದಂತಹ ಸಿನಿಮಾ ಯಾವುದು ಗೊತ್ತಾ?? ಟಿವಿ ಯಲ್ಲಿ ಅಸಲಿ ಬಾಸ್ ಯಾರು ಗೊತ್ತೇ??

2022 ರಲ್ಲಿ ಟಿವಿ ಯಲ್ಲಿ ಪ್ರಸಾರವಾದಾಗ ಅತ್ಯಂತ ಹೆಚ್ಚು ಟಿ ಆರ್ ಪಿ ರೇಟಿಂಗ್ ಪಡೆದಂತಹ ಸಿನಿಮಾ ಯಾವುದು ಗೊತ್ತಾ?? ಟಿವಿ ಯಲ್ಲಿ ಅಸಲಿ ಬಾಸ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ವರ್ಷದ ಎರಡನೇ ತಿಂಗಳನ್ನು ಮುಗಿಸುವತ್ತ ನಾವು ಹೊರಟಿದ್ದೇವೆ. ಈಗಾಗಲೇ ಹಲವಾರು ಸಿನಿಮಾಗಳು ಇತ್ತೀಚಿಗೆ ಕಿರುತೆರೆಯಲ್ಲಿ ಪ್ರೀಮಿಯರ್ ಪ್ರಸಾರ ಕಂಡಿವೆ. ಇದುವರೆಗೂ ಪ್ರಸಾರ ಕಂಡಿರುವ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಟಿಆರ್ ಪಿ ರೇಟಿಂಗ್ ಅನ್ನು ಪಡೆದಿರುವ ಸಿನಿಮಾ ಯಾವುದೆಂಬುದನ್ನು ತಿಳಿಯೋಣ ಬನ್ನಿ. ಇದಕ್ಕಾಗಿ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ.

ಜಗಮಲ್ಲ; 5ನೇ ಸ್ಥಾನದಲ್ಲಿ ತಮಿಳಿನ ತಲಾ ಅಜಿತ್ ಕುಮಾರ್ ನಟನೆಯ ವಿಶ್ವಾಸಂ ಚಿತ್ರದ ಕನ್ನಡದ ಡಬ್ಬಿಂಗ್ ವರ್ಷನ್ ಆಗಿರುವ ಜಗಮಲ್ಲ ಚಿತ್ರ ಕಂಡುಬಂದಿದೆ. ಜಗಮಲ್ಲ ಚಿತ್ರ ಪಕ್ಕ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು 5.8 ರೇಟಿಂಗ್ ಅನ್ನು ಪಡೆದುಕೊಂಡು ಐದನೇ ಸ್ಥಾನದಲ್ಲಿ ಮಿಂಚುತ್ತಿದೆ. ಪರಭಾಷೆಯ ಕನ್ನಡ ವರ್ಷನ್ ಚಿತ್ರ ಈ ಪಟ್ಟಿಯಲ್ಲಿ ಕಂಡು ಬಂದಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ ಸಂಗತಿಯಾಗಿದೆ.

ಕೋಟಿಗೊಬ್ಬ 3; ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ಕೋಟಿಗೊಬ್ಬ3 ನಾಲ್ಕನೇ ಸ್ಥಾನದಲ್ಲಿ ಕಂಡುಬರುತ್ತಿದೆ. ದ್ವಿಪಾತ್ರದಲ್ಲಿ ಕಿಚ್ಚ ಸುದೀಪ್ ರವರು ನಟಿಸಿರುವ ಈ ಚಿತ್ರ ಈಗಾಗಲೇ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಕೋಟಿಗೊಬ್ಬ 3 ಚಿತ್ರ 7.8 ರೇಟಿಂಗ್ ಅನ್ನು ಪಡೆದುಕೊಂಡಿದೆ. ಚಿತ್ರದ ನೆಕ್ಸ್ಟ್ ಲೆವೆಲ್ ಮೇಕಿಂಗ್ ನಿಜವಾಗಿ ಪ್ರೇಕ್ಷಕರ ಕಣ್ಣಿಗೆ ಆನಂದವನ್ನು ನೀಡುತ್ತದೆ.

ಭಜರಂಗಿ 2; ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬ್ಲಾಕ್ ಬಸ್ಟರ್ ಚಿತ್ರ ಭಜರಂಗಿ 2 ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅದಕ್ಕೆ ಕಾರಣವಾಗಿರುವುದು ಚಿತ್ರದ ಮೇಕಿಂಗ್ ಹಾಗೂ ಮ್ಯೂಸಿಕ್ ಮತ್ತು ಕಥೆ ಎಂದರೆ ತಪ್ಪಾಗಲಾರದು. ಭಜರಂಗಿ 2 ಚಿತ್ರ ಕೊಂಚಮಟ್ಟಿಗೆ ಫ್ಯಾಂಟಸಿ ಥ್ರಿಲ್ಲರ್ ಮಾದರಿಯ ಚಿತ್ರವಾಗಿದ್ದು ಎಲ್ಲಾ ಬಗೆಯ ವೀಕ್ಷಕರನ್ನು ಕೂಡ ಮನಮೆಚ್ಚಿ ಸುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಭಜರಂಗಿ-2 ಚಿತ್ರ 8.8 ರೇಟಿಂಗ್ ಅನ್ನು ಪಡೆದುಕೊಂಡಿದೆ.

ರಾಬರ್ಟ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 2021 ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವೆಂದರೆ ಅದು ರಾಬರ್ಟ್. ಈ ಬಾರಿ ಕೂಡ ರಾಬರ್ಟ್ ಕಿರುತೆರೆಯಲ್ಲಿ ಪ್ರಸಾರವಾಗಿದ್ದು ಬರೋಬ್ಬರಿ 9.9 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಕೂಡ ಡಿ ಬಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗೆ ವಿನೋದ್ ಪ್ರಭಾಕರ್ ಅವರು ಕೂಡ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷತೆಗೆ ಕಾರಣವಾಗಿದೆ.

ಯುವರತ್ನ; ಮೊದಲನೇ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಕಂಡುಬರುತ್ತದೆ. ಲಾಕ್ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಾಣದಿದ್ದರೂ ಕೂಡ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ದೊಡ್ಡಮಟ್ಟದ ಗೆಲುವು ಸಾಧಿಸಿತ್ತು. ಇನ್ನು ರೇಟಿಂಗ್ ನಲ್ಲಿ ಕೂಡ ಎಲ್ಲರನ್ನು ದೊಡ್ಡ ಮಾರ್ಚಿನಲ್ಲಿ ಹಿಂದಿಕ್ಕಿದೆ. ಹೌದು ಗೆಳೆಯರೇ ಯುವರತ್ನ 13 ರೇಟಿಂಗ್ ಪಾಯಿಂಟ್ ಗಳನ್ನು ಹೊಂದಿದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.