ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಚಾಹಲ್ ರನ್ನು ಆಯ್ಕೆ ಮಾಡದೆ ವನಿಂದು ರವರನ್ನು ಕೋಟಿ ಕೋಟಿ ಖರ್ಚು ಮಾಡಿ ಖರೀದಿಸಿದ್ದು ಯಾಕೆ ಗೊತ್ತೇ?? ಆರ್ಸಿಬಿ ಕೋಚ್ ಹೇಳಿದ್ದೇನು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡದ ಕುರಿತು ಹಲವಾರು ಜನ ಅಸಮಾಧಾನ ವ್ಯಕ್ತ ಪಡಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಮತ್ತಷ್ಟು ಜನ ಆರ್ಸಿಬಿ ತಂಡದಲ್ಲಿ ಯಾರು ಇದ್ದಾರೆ ಅಥವಾ ಆರ್ಸಿಬಿ ತಂಡದಲ್ಲಿ ಯಾರು ಇಲ್ಲ ಎಂದು ನಾವು ಆರ್ ಸಿ ಬಿ ತಂಡವನ್ನು ಬೆಂಬಲಿಸುತ್ತಿಲ್ಲ ಬದಲಾಗಿ ಆರ್ಸಿಬಿ ಎಂಬುದು ನಮ್ಮ ತಂಡ ಅದೇ ಕಾರಣಕ್ಕಾಗಿ ನಾವು ಯಾರೇ ಇರಲಿ ಯಾರೇ ಬರಲಿ ಬೆಂಬಲ ನೀಡುತ್ತೇವೆ, ಆಯ್ಕೆ ಸರಿ ಇಲ್ಲ ಎಂಬುದು ಒಂದು ಲೆಕ್ಕಾಚಾರ ವಾದರೆ, ಹೌದು ಅದು ಸತ್ಯ. ಆದರೆ ಖಂಡಿತ ಆರ್ಸಿಬಿ ತಂಡ ಇರುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಿದರೇ ಕಪ್ ಗೆಲ್ಲಬಹುದು ಎಂಬ ವಾದವನ್ನು ಮಂಡಿಸುತ್ತಿದ್ದಾರೆ.

ಇನ್ನು ಈ ಸಮಯದಲ್ಲಿ ಆರ್ಸಿಬಿ ತಂಡ ಚಹಲ್ ರವರನ್ನು ಯಾಕೆ ಆಯ್ಕೆ ಮಾಡಿಲ್ಲ ಚಹಲ್ ಬದಲು ವನಿಂದು ಹಸರಂಗ ರವರನ್ನು ಯಾಕೆ ಆಯ್ಕೆ ಮಾಡಬೇಕಾಗಿತ್ತು ಎಂದು ಕೂಡ ಹಲವಾರು ಜನ ಪ್ರಶ್ನೆ ಕೇಳುತ್ತಿದ್ದಾರೆ, ಈ ಕುರಿತು ಮಾತನಾಡಿರುವ ಆರ್ಸಿಬಿ ತಂಡದ ಪ್ರಮುಖ ಕೋಚ್ ಸಂಜಯ್ ಬಂಗಾರ್ ರವರು ಖಂಡಿತ ಚಾಹಲ್ ರವರನ್ನು ಆಯ್ಕೆ ಮಾಡಬೇಕು ಎಂಬ ಆಸೆ ನಮಗೂ ಕೂಡ ಇತ್ತು. ಆದರೆ ಹಲವಾರು ಕಾರಣಗಳಿಂದ ನಾವು ಚಾಹಲ್ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ,

ಮೊದಲನೆಯದಾಗಿ ನಾವು ಚಹಲ್ ರವರಿಗೆ ಕಾಯಲು ಸಾಧ್ಯವಾಗುತ್ತಿರಲಿಲ್ಲ, ಚಹಲ್ ಹಾಗೂ ವನಿಂದು ಹಸರಂಗ ಇಬ್ಬರು ಕೂಡ ಖಂಡಿತ ಆರ್ಸಿಬಿ ತಂಡದ ಪ್ಲೇಯರ್ ಗಳು, ಹರಾಜಿನ ನಿಯಮದ ಪ್ರಕಾರ ವನಿಂದು ಹಸರಂಗ ರವರ ಹೆಸರು ಹರಾಜಿನಲ್ಲಿ ಮೊದಲು ಬಂದಿದೆ, ಅವರನ್ನು ಖರೀದಿ ಮಾಡಿದರೇ ನಮಗೆ ಕಾಂಪಿಟೇಷನ್ ಕಡಿಮೆ ಇರುತ್ತಿತ್ತು. ಒಂದು ವೇಳೆ ನಾವು ಅವರನ್ನು ಖರೀದಿ ಮಾಡದೆ ಇದ್ದರೆ ಮುಂದೆ ಚಾಹಲ್ ರವರ ಹೆಸರು ತೆಗೆದುಕೊಂಡಾಗ ಇತರ ತಂಡಗಳು ಕೂಡ ಹೆಚ್ಚಿನ ರೀತಿಯಲ್ಲಿ ಬಿಟ್ ಮಾಡುತ್ತಿದ್ದವು, ಇತರ ತಂಡಗಳಿಗೆ ಹೋಲಿಸಿದರೇ ಆರ್ಸಿಬಿ ತಂಡದ ಬಳಿ ಕಡಿಮೆ ಹಣ ಇತ್ತು. ಆದ ಕಾರಣ ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಅದೇ ಕಾರಣಕ್ಕಾಗಿ ವನಿಂದು ಹಸರಂಗ ರವರನ್ನು ಮೊದಲು ಆಯ್ಕೆ ಮಾಡಲು ನಿರ್ಧಾರ ಮಾಡಿದೆವು ಎಂದು ಹೇಳಿದ್ದಾರೆ. ಈ ಕಾರಣಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Get real time updates directly on you device, subscribe now.