ಆರ್ಸಿಬಿ ತಂಡವು ಕಡಿಮೆ ಹಣಕ್ಕೂ ಕೂಡ ಡೇವಿಡ್ ವಾರ್ನರ್ ರವರಿಗೆ ಬಿಡ್ ಮಾಡಲಿಲ್ಲ ಯಾಕೆ ಗೊತ್ತೇ?? ಕಾರಣವೇನು ಗೊತ್ತೇ??

ಆರ್ಸಿಬಿ ತಂಡವು ಕಡಿಮೆ ಹಣಕ್ಕೂ ಕೂಡ ಡೇವಿಡ್ ವಾರ್ನರ್ ರವರಿಗೆ ಬಿಡ್ ಮಾಡಲಿಲ್ಲ ಯಾಕೆ ಗೊತ್ತೇ?? ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೆಗಾ ಹರಾಜು ಮುಗಿದಿದೆ. ಆರ್ಸಿಬಿ ತಂಡ ಎಂದಿನಂತೆ ಈ ಭಾರಿ ಸಹ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿಲ್ಲ ಎಂಬ ಆರೋಪ ಇದೆ. ಇದರ ಜೊತೆ ಆರ್ಸಿಬಿ ಸ್ಥಳೀಯ ಪ್ರತಿಭೆಗಳನ್ನು ಮತ್ತೊಮ್ಮೆ ಕಡೆಗಣಿಸಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗ ಆಟಗಾರರನ್ನು ಕೇವಲ ನೆಪಮಾತ್ರಕ್ಕೆ ಖರೀದಿಸಿದೆ. ಆದರೇ ಅವರಿಗೆ ಆಡುವ ಹನ್ನೊಂದು ಆಟಗಾರರಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವೇಳೆ ಆರ್ಸಿಬಿ ತಂಡ ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಫ್ಲಾಪ್ ಡು ಪ್ಲೇಸಿಸ್ ರವರನ್ನು ಬರೋಬ್ಬರಿ 7 ಕೋಟಿ ರೂಪಾಯಿಗೆ ಖರೀದಿಸಿತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ಡೇವಿಡ್ ವಾರ್ನರ್ ರನ್ನು ಸಹ ಖರೀದಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೇ ಖರೀದಿಸಲಿಲ್ಲ. ವಾರ್ನರ್ ಕೇವಲ ಆರು ಕೋಟಿಗೆ ಡೆಲ್ಲಿ ತಂಡದ ಪಾಲಾದರು. ಈಗ ಡೇವಿಡ್ ವಾರ್ನರ್ ರವರನ್ನ ಏಕೆ ಖರೀದಿಸಿಲ್ಲ ಎಂಬುದನ್ನು ಆರ್ಸಿಬಿ ತಂಡ ಬಹಿರಂಗಗೊಳಿಸಿದೆ.

ಆರ್ಸಿಬಿ ಫ್ರಾಂಚೈಸಿ ಡೇವಿಡ್ ಗಿಂತ ಮೊದಲು ಡುಪ್ಲೇಸಿಸ್ ರವರನ್ನ ಏಳು ಕೋಟಿ ನೀಡಿ ಖರೀದಿಸಿತ್ತು. ಆ ಸುತ್ತಿನಲ್ಲಿ ಕೇವಲ ಒಬ್ಬ ಆಟಗಾರನನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆ ನಿಟ್ಟಿನಲ್ಲಿ ಡುಪ್ಲೇಸಿಸ್ ರನ್ನು ಖರೀದಿಸಿದ್ದೇವು. ಹರಾಜಿನಲ್ಲಿ ಡುಪ್ಲೇಸಿಸ್ ನಂತರ ವಾರ್ನರ್ ಬಂದರು. ಆ ಕಾರಣಕ್ಕಾಗಿ ಖರೀದಿಸಲಿಲ್ಲ ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.