ನೀವು ನಿಮ್ಮ ಉದ್ಯೋಗ ಮಾಡಿಕೊಂಡೆ ಕಡಿಮೆ ಬಂಡವಾಳದಲ್ಲಿ ಈ ಉದ್ಯಮ ಆರಂಭಿಸಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ನೀವು ನಿಮ್ಮ ಉದ್ಯೋಗ ಮಾಡಿಕೊಂಡೆ ಕಡಿಮೆ ಬಂಡವಾಳದಲ್ಲಿ ಈ ಉದ್ಯಮ ಆರಂಭಿಸಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕೆಲವೊಮ್ಮೆ ನಾವು ನಮ್ಮ ಸ್ವಂತ ಉದ್ದಿಮೆಯನ್ನು ಆರಂಭಿಸಬೇಕಾದರೆ ಅದಕ್ಕೆ ತಕ್ಕ ಬಂಡವಾಳ ಬೇಕು. ಹಾಗೂ ಬಂಡವಾಳ ಹೂಡಿ ಉದ್ದಿಮೆ ಆರಂಭಿಸಿದರೆ ಅದು ಕೂಡಲೇ ಲಾಭ ತಂದುಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಈಗಾಗಲೇ ಉದ್ಯೋಗವನ್ನು ಮಾಡುತ್ತಿರುವವರು ಉದ್ಯೋಗದ ಜೊತೆ ಜೊತೆಯಲಿ ಉದ್ದಿಮೆಯನ್ನೂ ಮಾಡಿದರೆ ಉತ್ತಮ ಆದಾಯವನ್ನು ಖಂಡಿತ ಗಳಿಸಬಹುದು. ಅಂಥ ಒಂದು ವ್ಯಾಪಾರದ ಬಗ್ಗೆ ನಾವು ನಿಮಗೆ ಇಂದು ಮಾಹಿತಿ ಕೊಡ್ತೀವಿ.

ಹೌದು, ಸ್ವ ಉದ್ಯೋಗ ಶುರುಮಾಡುವ ಇರಾದೆ ನಿಮಗಿದ್ದರೆ,ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಬಾಳೆಕಾಯಿಯ ಚಿಪ್ಸ್ ಉದ್ದಿಮೆಯನ್ನು ಶುರು ಮಾಡಬಹುದು. ಕಡಿಮೆ ಬಂಡವಾಳ ಹೂಡಿ ಈ ಉದ್ದಿಮೆಯನ್ನು ಆರಂಭಿಸಬಹುದು. ಬಾಳೆಕಾಯಿಯ ಚಿಪ್ಸ್ ತಯಾರಿಸಲು ಮುಖ್ಯವಾಗಿ ವಿವಿಧ ರೀತಿಯ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಇದರ ಜೊತೆಗೆ ಮುಖ್ಯವಾಗಿ ಕಚ್ಚಾ ಬಾಳೆಕಾಯಿಗಳು, ಉಪ್ಪು, ಅಡುಗೆ ಎಣ್ಣೆ ಮತ್ತು ಇತರ ಮಸಾಲೆಗಳನ್ನು ಉಪಯೋಗಿಸಲಾಗುತ್ತದೆ. ಇನ್ನು ಬಾಳೆಕಾಯಿ ಚಿಪ್ಸ್ ತಯಾರಿಸಲು ಬೇಕಾಗುವ ಯಂತ್ರೋಪಕರಣಗಳೆಂದರೆ, ಬಾಳೆಕಾಯಿ ತೊಳೆಯುವ ಟ್ಯಾಂಕ್ ಮತ್ತು ಬಾಳೆಕಾಯಿ ಸಿಪ್ಪೆ ಸುಲಿಯುವ ಯಂತ್ರ, ಬಾಳೆಕಾಯಿ ಕತ್ತರಿಸುವ ಯಂತ್ರ, ಕ್ರಂಬ್ ಫ್ರೈಯಿಂಗ್ ಮೆಷಿನ್, ಮಸಾಲೆ ಮಿಲ್ಲಿಂಗ್ ಯಂತ್ರ, ಚೀಲ ಮುದ್ರಣ ಯಂತ್ರ, ಪ್ರಯೋಗಾಲಯ ಸಲಕರಣೆ ಇವಿಷ್ಟು ಮುಖ್ಯವಾಗಿ ಬೇಕು.

ಇನ್ನು ಈ ಯಂತ್ರಗಳನ್ನು indiamart ಅಥವಾ ಇತರೆ ಸೈಟ್ ಗಳಲ್ಲಿ ಖರೀದಿಸಬಹುದು. ಇನ್ನು ಸಣ್ಣ ಪ್ರಮಾಣದಲ್ಲಿ ಶುರು ಮಾಡುವುದಕ್ಕೂ ಕನಿಷ್ಠ 4,000 ದಿಂದ 5000 ಚದರ ಮೀಟರ್ ಜಾಗದ ಅಗತ್ಯವಿದೆ. ಈ ಯಂತ್ರಗಳ ಬೆಲೆ 28 ಸಾವಿರದಿಂದ 50 ಸಾವಿರರೂಗಳು. ಇನ್ನು ಚಿಪ್ಸ್ ತಯಾರಿಕೆಯ ಖರ್ಚು ವೆಚ್ಚವನ್ನು ನೋಡೋಣ. 50 ಕೆಜಿ ಚಿಪ್ಸ್ ಮಾಡಲು, ಕನಿಷ್ಠ 120 ಕೆಜಿ ಹಸಿ ಬಾಳೆಕಾಯಿಗಳು ಬೇಕು. ಇದಕ್ಕೆ ತಗಲುವ ವೆಚ್ಚ ಸುಮಾರು 1,000 ರೂಪಾಯಿಗಳು. ಕರಿಯಲು 12 ರಿಂದ 15 ಲೀಟರ್ ಎಣ್ಣೆ ಬೇಕಾಗುತ್ತದೆ. ಒಂದು ಲೀಟರ್ ಎಣ್ಣೆಗೆ 70 ರೂ. ಅಂದರೂ 1050 ರೂ. ಆಗುತ್ತದೆ. ಚಿಪ್ಸ್ ಫ್ರೈಯರ್ ಯಂತ್ರಕ್ಕ್ಕೆ 1 ಗಂಟೆಗೆ 10 ರಿಂದ 11 ಲೀಟರ್ ಡೀಸೆಲ್ ಬೇಕಾಗುತ್ತದೆ.

ಅಂದರೆ ಡೀಸೆಲ್ ಗೆ ನೀವು 900 ರಿಂದ 1 ಸಾವಿರ ರೂ. ವೆಚ್ಚ ಮಾಡಬೇಕು. ಇನ್ನು ಉಪ್ಪು ಮತ್ತು ಮಸಾಲೆಗೆ ಗರಿಷ್ಠ 150 ರೂ.ಗಳು ಒಟ್ಟೂ ಒಂದು ಅಂದಾಜಿನ ಪ್ರಕಾರ 50 ಕೆಜಿ ಚಿಪ್ಸ್ ನ್ನು 3,200 ರೂ.ಗೆ ಸಿದ್ಧಪಡಿಸಬಹುದು. ಅಂದರೆ ಒಂದು ಪ್ಯಾಕ್ ಚಿಪ್ಸ್ ಗೆ ಪ್ಯಾಕಿಂಗ್ ವೆಚ್ಚ ಸೇರಿದಂತೆ 70 ರೂ. ತಗುಲುತ್ತದೆ. ಇನ್ನು ಆನ್‌ಲೈನ್ ಅಥವಾ ಕಿರಾಣಿ ಅಂಗಡಿಗಳಲ್ಲಿ ಕೆಜಿಗೆ 90 ರಿಂದ 100 ರೂ.ಗಳಂತೆ ಮಾರಾಟ ಮಾಡಬಹುದು. 1 ಕೆಜಿಗೆ 10 ರೂಪಾಯಿ ಲಾಭ ಹಿಡಿದರೂ, ದಿನಕ್ಕೆ 4,000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಅಂದರೆ, ನೀವು ಈ ಉದ್ಯಮದಲ್ಲಿ ತಿಂಗಳಿಗೆ 25 ದಿನ ಕೆಲಸ ಮಾಡಿದರೆ, ತಿಂಗಳಿಗೆ 1 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಲಾಭದಾಯಕವಲ್ಲವೇ ಈ ವ್ಯಾಪಾರ! ಪ್ರಯತ್ನಿಸಿ ನೋಡಿ.