ಗ್ರಾಹಕರ ಮನಗೆಲ್ಲಲು 200 ರೂಪಾಯಿಗೂ ಕಡಿಮೆ ಬೆಲೆಯ ಪ್ಲಾನ್ ಪರಿಚಯಿಸಿದ ಜಿಯೋ. ಎಷ್ಟೆಲ್ಲಾ ಲಾಭ ಸಿಗಲಿದೆ ಗೊತ್ತೇ??

ಗ್ರಾಹಕರ ಮನಗೆಲ್ಲಲು 200 ರೂಪಾಯಿಗೂ ಕಡಿಮೆ ಬೆಲೆಯ ಪ್ಲಾನ್ ಪರಿಚಯಿಸಿದ ಜಿಯೋ. ಎಷ್ಟೆಲ್ಲಾ ಲಾಭ ಸಿಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಹಲವಾರು ಟೆಲಿಕಾಂ ಸಂಸ್ಥೆಗಳು ಇವೆ. ಅದರಲ್ಲೂ ಇತ್ತೀಚಿಗೆ ತಮ್ಮ ಗ್ರಾಹಕರನ್ನು ಕಳೆದುಕೊಳ್ಳಲು ಸಾಕಷ್ಟು ಜನಪ್ರಿಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಿವೆ. ಉದಾಹರಣೆಗೆ ಇತ್ತೀಚಿಗೆ ನೀವು ಏರ್ಟೆಲ್ ವೊಡಾಫೋನ್ ಐಡಿಯಾ ಹಾಗೂ ಜಿಯೋ ಸಂಸ್ಥೆಗಳು ಇನ್ನಿತರ ಸಂಸ್ಥೆಗಳು ಒಟ್ಟಿಗೆ ಹೊಸ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಗ್ರಾಹಕರಿಗೆ ಪರಿಚಯಿಸಿದ್ದನ್ನು ನೋಡಿರುತ್ತೀರಿ.

ನಾವು ಇಂದು ಮಾತನಾಡಲು ಹೊರಟಿರುವುದು ನಮ್ಮ ಭಾರತ ದೇಶದ ಅತ್ಯಂತ ಜನಪ್ರಿಯ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನವನ್ನು ಕಂಡಿರುವ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಕುರಿತಂತೆ. ಹೌದು ಇತ್ತೀಚಿನ ದಿನಗಳಲ್ಲಿ ಜಿಯೋ ಸಂಸ್ಥೆ ಹಲವಾರು ಜನಪ್ರಿಯ ಯೋಜನೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ ಗ್ರಾಹಕರು ಕೂಡ ಈ ಯೋಜನೆಗಳನ್ನು ಮೆಚ್ಚಿದ್ದಾರೆ. ಹೌದು ಗೆಳೆಯರೆ ಜಿಯೋ ಸಂಸ್ಥೆ ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯವನ್ನು ನೀಡುವಂತಹ ಯೋಜನೆಯೊಂದನ್ನು ಈಗ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಒಂದು ವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ ತಪ್ಪದೇ ಈ ಪ್ಲಾನ್ ಅನ್ನು ಬಳಸಿಕೊಂಡು ಇದರ ಫಲಾನುಭವಿಗಳಾಗಿ. ಅಷ್ಟಕ್ಕೂ ಈ ರಿಚಾರ್ಜ್ ಪ್ಲಾನ್ ಏನು ಎಂಬುದರ ಕುರಿತಂತೆ ನಿಮಗೆ ತಿಳಿಸುತ್ತೇವೆ ಬನ್ನಿ.

200 ರೂಪಾಯಿಗಿಂತಲೂ ಕೂಡ ಕಡಿಮೆ ಹಣದಲ್ಲಿ ಯೋಜನೆಯನ್ನು ನೀವು ಪಡೆಯಬಹುದಾಗಿದೆ. ಇದಕ್ಕಾಗಿ ನೀವು 186 ರೂಪಾಯಿ ರೀಚಾರ್ಜ್ ಮಾಡಬೇಕಾಗುತ್ತದೆ. 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ದೈನಂದಿನ 1gb ಡೇಟಾ ಕೂಡ ಸಿಗುತ್ತದೆ. ಯಾವುದೇ ನೆಟ್ವರ್ಕ್ನಲ್ಲಿ ಅನ್ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದಾಗಿದೆ. ನನ್ನಿಂದ ನೂರು ಮೆಸೇಜ್ ಗಳು ಕೂಡ ಉಚಿತವಾಗಿ ಸಿಗುತ್ತದೆ. ಜಿಯೋ ಸೆಕ್ಯೂರಿಟಿ ಜಿಯೋ ಕ್ಲೌಡ್ ಜಿಯೋ ಮೂವಿ ಹೀಗೆ ಜೀವದ ಬಹುತೇಕ ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಉಚಿತವಾದ ಚಂದಾದಾರಿಕೆ ಸಿಗಲಿದೆ. 28 ದಿನಗಳ ವ್ಯಾಲಿಡಿಟಿ ಗೆ ಹೋಲಿಸಿದರೆ ಬೇರೆಯಲ್ಲಾ ಟೆಲಿಕಾಂ ಸಂಸ್ಥೆಗಳಿಗಿಂತ ಜಿಯೋ ಸಂಸ್ಥೆಯ ರಿಚಾರ್ಜ್ ಯೋಜನೆ ನಿಜಕ್ಕೂ ಲಾಭದಾಯಕವಾಗಿದೆ.