ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹಣ ಸಂಪಾದನೆ ಮಾಡೋಕೆ ಹೆಚ್ಚಿನ ಓದಿರಲೇ ಬೇಕು ಎಂದು ರೂಲ್ಸ್, ಅನಕ್ಷರಸ್ಥರೂ ಕೂಡ ಹೀಗೆ ಮಾಡಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

53

Get real time updates directly on you device, subscribe now.

ನಮಸ್ನಾರ ಸ್ನೇಹಿತರೇ, ಸಾಕಷ್ಟು ಜನರಿಗೆ ಎಷ್ಟೇ ವಿದ್ಯೆ ಕಲಿತಿದ್ದರೂ ಅವರ ವಿದ್ಯಾಭ್ಯಾಸಕ್ಕೆ ತಕ್ಕಂಥ ನೌಕರಿ ಸಿಗುವುದಿಲ್ಲ, ಇಂಥವರ ಮಧ್ಯೆ ವಿದ್ಯೆಯನ್ನೇ ಕಲಿಯದೇ ಇರುವವರ ಸ್ಥಿತಿಯನ್ನು ಊಹಿಸಿದರೆ ಬೇಸರ ಎನಿಸುತ್ತದೆ. ಯಾಕೆಂದರೆ ಒಂದು ಸರ್ಕಾರಿ ನೌಕರಿ ಪಡೆಯಬೇಕೆಂದರೂ ಕನಿಷ್ಠ ಹತ್ತನೇ ತರಗತಿಯನ್ನಾದರೂ ಪಾಸಾಗಿರಲೇಬೇಕು. ಹಾಗಾಗಿ ಅನಕ್ಷರಸ್ಥರು ಸಿಕ್ಕ ಕೆಲಸವನ್ನೇ ಮಾಡಲು ಮುಂದಾಗುತ್ತಾರೆ. ಹಾಗಾದರೆ ಅನಕ್ಷರಸ್ಥರಿಗೆ ಉತ್ತಮ ಕೆಲಸವೇ ಸಿಗುವುದಿಲ್ಲವೇ? ಖಂಡಿತ ಸಿಗತ್ತೆ. ಇಲ್ಲಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ.

ಗಂಡುಮಕ್ಕಳಾಗಲಿ, ಹೆಣ್ಣುಮಕ್ಕಳಾಗಲಿ, ಓದಿಲ್ಲದೇ ಇದ್ದರೂ ಕೂಡ ಮನೆಯಲ್ಲಿಯೇ ಕುಳಿತು ಅನೇಕ ರೀತಿಯ ಕೆಲಸಗಳನ್ನು ಮಾಡಿ ಹಣ ಗಳಿಸಬಹುದು. ತಮ್ಮ ಕಾಲಮೇಲೆ ತಾವು ನಿಂತಾಘ ಮಾತ್ರವಲ್ಲವೇ ನಮಗೂ ಬೆಲೆ! ಮನೆಯಲ್ಲಿಯೇ ಕುಳಿತು ಮಾಡಬಹುದಾದ ಕೆಲಸ ಅಂದ್ರೆ ಮೊದಲನೆಯದಾಗಿ ಅಡುಗೆ ಮಾಡಿ ಮಾರಾಟ ಮಾಡುವುದು, ಅಡುಗೆ ಮಾಡುವುದಕ್ಕೆ ಯಾವ ವಿಶ್ವವಿದ್ಯಾಲಯದ ಸರ್ಟಿಫಿಕೇಟು ಬೇಕಿಲ್ಲ. ನಿಮ್ಮ ಕೈರುಚಿ ಚೆನ್ನಾಗಿದ್ದರೆ ಜನ ಕೇಳಿ ನಿಮ್ಮ ಬಳಿ ಆಹಾರ ಕೊಂಡುಕೊಳ್ಳುತ್ತಾರೆ. ಇದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡರೆ ಸಾಕಷ್ಟು ಹಣವನ್ನು ಗಳಿಸಬಹುದು.

ಇನ್ನು ಹೊಲಿಗೆ. ನಿಮಗೆ ಬಟ್ಟೆ ಹೊಲಿಯುವ ವಿದ್ಯೆ ಕರಗತವಾಗಿದ್ದರೆ, ಈಗ ಒಬ್ಬ ಇಂಜನಿಯರ್ ಗಳಿಸುವುದಕ್ಕಿಂತಲೂ ಹೆಚ್ಚಿನ ಹಣವನ್ನು ನೀವು ಸಂಪಾದನೆ ಮಾಡಬಹುದು. ಸುಂದರವಾದ ಬಟ್ಟೆ ಹೊಲಿದರೆ ಅದಕ್ಕಿರುವ ಬೇಡಿಕೆ ಅಷ್ಟಿಷ್ಟಲ್ಲ, ಮನೆಯಲ್ಲಿಯೇ ಒಂದು ಹೊಲಿಗೆಯಂತ್ರ ಇಟ್ಟುಕೊಂಡು ಈ ಉದ್ಯೋಗ ಮಾಡಬಹುದು.

ಮನೆಯಲ್ಲಿ ಕುಳಿತು ಪ್ಯಾಕಿಂಗ್ ಕೆಲಸ ಮಾಡುವುದರ ಮೂಲಕವೂ ಸಾಕಷ್ಟು ಹಣ ಗಳಿಸಬಹುದು. ಅನೇಕ ಕಂಪನಿಗಳು ಪ್ಯಾಕಿಂಗ್ ಕೆಲಸವನ್ನು ಒಪ್ಪಿಕೊಂಡು ಅವರು ಮನೆಗೆ ಕಳುಹಿಸುವ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಪ್ಯಾಕ್ ಮಾಡಿಕೊಟ್ಟರಾಯಿತು. ಅದರಿಂದಲೂ ಉತ್ತಮ ಸಂಪಾದನೆಯಾಗುತ್ತದೆ. ಅಥವಾ ಕಾರ್ಖಾನೆಗಳಿಂದ ಟೀ ಕಾಫಿ ಗುತ್ತಿಗೆ ಪಡೆದು ಉದ್ಯೋಗಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಟೀ ತಯಾರಿಸಿ ನೀಡುವ ಮೂಲಕ ಹಣ ಸಂಪಾದಿಸಬಹುದು.

ಇವು ಸ್ವ ಉದ್ದಿಮೆಯ ಬಗ್ಗೆ ಮಾಹಿತಿಯಾದರೆ, ನಿಮಗೆ ಇದನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಖಾಸಗಿ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಬಹುದು. ಅಥವಾ ವಾಹನ ಚಲಿಸಲು ಬರುವುದಾದರೆ ಚಾಲಕ ಕೆಲಸವನ್ನೂ ಮಾಡಬಹುದು. ಓಲಾ, ಉಬರ್ ಮೊದಲಾದ ಸಂಸ್ಥೆಗಳಲ್ಲಿ ಚಾಲಕರಾಗಿ ತಿಂಗಳಿಗೆ ರೂ. 15000-30000ವರೆಗೆ ಹಣ ಗಳಿಸಬಹುದು. ಇಂಥ ಹಲವಾರು ಉದ್ಯೋಗಗಳು ಲಭ್ಯವಿವೆ. ಹಾಗಾಗಿ ತನಗೆ ಓದಲು ಬರೆಯಲು ಸರಿಯಾಗಿ ಬರುವುದಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲಿಯೇ ಕಾಲ ಕಳೆಯುವ ಬದಲು ಹಣ ಗಳಿಸುವ ಇಂಥ ಹಲವು ನ್ಯಾಯಯುತ ಕೆಲಸಗಳನ್ನು ಮಾಡಬಹುದು.

Get real time updates directly on you device, subscribe now.