ಮ್ಯಾಕ್ಸ್ವೆಲ್ ಕೊಹ್ಲಿ ಅಲ್ಲ, ಆರ್ಸಿಬಿಗೆ ವಾಪಸ್ಸು ಬಂದ ಕೂಡಲೇ ಹೊಸ ನಾಯಕನ ಕುರಿತು ಮಾತನಾಡಿದ ಹರ್ಷಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ??

ಮ್ಯಾಕ್ಸ್ವೆಲ್ ಕೊಹ್ಲಿ ಅಲ್ಲ, ಆರ್ಸಿಬಿಗೆ ವಾಪಸ್ಸು ಬಂದ ಕೂಡಲೇ ಹೊಸ ನಾಯಕನ ಕುರಿತು ಮಾತನಾಡಿದ ಹರ್ಷಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡವು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೆಲವೊಮ್ಮೆ ಹಾದಿ ತಪ್ಪಿದರೂ ಕೂಡ ಕೆಲವೊಂದು ಆಟಗಾರರನ್ನು ಅದ್ಭುತವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಮೊದಲನೇ ದಿನ ಸಂಪೂರ್ಣವಾಗಿ ಹಣ ಚೆಲ್ಲಿದ ಆರ್ಸಿಬಿ ತಂಡವು ಕೆಲವು ಆಟಗಾರರನ್ನು ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡಿ ಖರೀದಿ ಮಾಡಿದೆ ಎಂಬ ಅಭಿಪ್ರಾಯಗಳು ಗಣನೀಯ ಪ್ರಮಾಣದಲ್ಲಿ ಕೇಳಿಬರುತ್ತಿವೆ. ಕ್ರಿಕೆಟ್ ತಜ್ಞರು ಕೂಡ ಆರ್ಸಿಬಿ ತಂಡ ಆಲೋಚನೆ ಮಾಡದೆ ಕೆಲವೊಂದು ಆಟಗಾರರಿಗೆ ಕೋಟಿ ಕೋಟಿ ಹಣವನ್ನು ಸುರೀತಿದೆ ಎಂದು ಹೇಳಿದ್ದಾರೆ.

ಅದರಲ್ಲೂ ಹರ್ಷಲ್ ಪಟೇಲ್ ಹಾಗೂ ವನಿಂದು ಹಸಾರಂಗ ಅವರ ಆಯ್ಕೆಯನ್ನು ಹಲವಾರು ಜನ ಪ್ರಶ್ನೆ ಮಾಡುತ್ತಿದ್ದಾರೆ, ಇಬ್ಬರು ಕೂಡ ಬಹಳ ಉತ್ತಮ ಆಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಇವರಿಬ್ಬರೂ ಕಳೆದ ಬಾರಿ ಆರ್ಸಿಬಿ ತಂಡದಲ್ಲಿ ಆಟವಾಡಿದ ಕಾರಣ ಇವರಿಬ್ಬರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದಿದ್ದರೆ ಆರ್ಸಿಬಿ ತಂಡ ಸಿರಾಜ್ ಅವರನ್ನು ಕೈಬಿಟ್ಟು ಅಥವಾ ಸಿರಾಜ್ ರವರನ್ನು ಉಳಿಸಿಕೊಂಡು ಕೂಡ ಇವರಿಬ್ಬರಲ್ಲಿ ಒಬ್ಬರನ್ನು ಆರು ಕೋಟಿ ನೀಡಿ, ಹಣ ಉಳಿಸಬಹುದಾಗಿತ್ತು. ಒಂದು ವೇಳೆ ಆರು ಕೋಟಿಗೆ ಆಟಗಾರರು ಒಪ್ಪದೇ ಹೋದರೆ ಖಂಡಿತ ಸಿರಾಜ್ ರವರನ್ನು 6 ಕೋಟಿಗೆ ಖರೀದಿ ಮಾಡಿ ಉಳಿದ ಒಬ್ಬರನ್ನು ಕೋಟಿ ನೀಡಬಹುದಾಗಿತ್ತು.

ಆದರೆ ಆರ್ಸಿಬಿ ತಂಡ ಹಾಗೆ ಮಾಡದೇ ಇಬ್ಬರನ್ನು ಬಿಡುಗಡೆ ಮಾಡಿ ಇದೀಗ ಇಬ್ಬರಿಗೂ ಸೇರಿ ಬರೋಬ್ಬರಿ 21 ಕೋಟಿ ಹಣ ನೀಡಿ ಖರೀದಿ ಮಾಡಿದೆ. ಹೀಗೆ ಕೊಂಚ ಹಾದಿ ತಪ್ಪಿದೆ ಎನಿಸಿದರೂ ಕೂಡ ಹರ್ಷಲ್ ಪಟೇಲ್ ಆರ್ಸಿಬಿ ಯಲ್ಲಿ ಉಳಿದಿರುವುದು ಸಮಾಧಾನದ ಸಂಗತಿ. ಇನ್ನು ಈ ಸಮಯದಲ್ಲಿ ಮತ್ತೆ ಆರ್ಸಿಬಿ ತಂಡಕ್ಕೆ ವಾಪಸಾದ ಕುರಿತು ಮಾತನಾಡುವಾಗ ಹರ್ಷಲ್ ಪಟೇಲ್ ರವರು ಆರ್ಸಿಬಿ ತಂಡಕ್ಕೆ ಕಾಡುತ್ತಿರುವ ನಾಯಕನ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ. ಹೌದು ಸ್ನೇಹಿತರೆ ಇದೀಗ ಮಾತನಾಡಿರುವ ಹರ್ಷಲ್ ಪಟೇಲ್ ರವರು ನಾಯಕನಾಗಿ ಯಾರನ್ನೂ ನೋಡಲು ಬಯಸುತ್ತೀರಾ ಎಂದರೆ ನಾನು ಆರ್ಸಿಬಿ ಮ್ಯಾನೇಜ್ಮೆಂಟ್ ಬಳಿ ಈ ಕುರಿತು ಚರ್ಚೆ ಮಾಡಿಲ್ಲ ಆದರೆ ಡುಪ್ಲೆಸಿಸ್ ರವರು ನಾಯಕನಾಗುತ್ತಾರೆ ಎಂದು ನನಗೆ ಅನಿಸುತ್ತಿದೆ, ಈಗಾಗಲೇ ಸೌತ್ ಆಫ್ರಿಕಾ ತಂಡವನ್ನು ಬಹಳ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವವನ್ನು ಹೊಂದಿರುವ ಡುಪ್ಲೆಸಿಸ್ ರವರು ಖಂಡಿತ ಆರ್ಸಿಬಿ ತಂಡಕ್ಕೆ ಉತ್ತಮ ನಾಯಕನಾಗುತ್ತಾರೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.