ಜೀವನದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿರುವ ಲತಾ ಮಂಗೇಶ್ಕರ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?? ಇಷ್ಟೇನಾ ಎಂದ ನೆಟ್ಟಿಗರು.

ಜೀವನದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿರುವ ಲತಾ ಮಂಗೇಶ್ಕರ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?? ಇಷ್ಟೇನಾ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಫೆಬ್ರುವರಿ ಎಂದಾಕ್ಷಣ ನಮಗೆ ಮೊದಲಿಗೆ ನೆನಪಿಗೆ ಬರುತ್ತಿದ್ದದ್ದು ಪ್ರೇಮಿಗಳ ದಿನಾಚರಣೆಯ ತಿಂಗಳು ಎನ್ನುವುದಾಗಿ. ಆದರೆ ಇನ್ನು ಮುಂದೆ ಈ ತಿಂಗಳು ಖಂಡಿತವಾಗಿಯೂ ದುಖಃ ಕರವಾಗಿ ಮೂಡಿಬರಲಿದೆ. ಯಾಕೆಂದರೆ ಫೆಬ್ರವರಿ ತಿಂಗಳಲ್ಲಿ ಅಂದರೆ ಎಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಲತಾ ಮಂಗೇಶ್ಕರ್ ಅವರು ತಮ್ಮ 92ನೇ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದರು.

ಬರೋಬ್ಬರಿ 70 ವರ್ಷಗಳ ಜರ್ನಿಯಲ್ಲಿ 36 ಭಾಷೆಗಳಲ್ಲಿ 50ಸಾವಿರಕ್ಕೂ ಅಧಿಕ ಹಾಡುಗಳನ್ನು ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರನ್ನು ಭಾರತದ ಕೋಗಿಲೆ ಎನ್ನುವುದಾಗಿ ಸನ್ಮಾನಿಸಲಾಗಿದೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಲತಾಮಂಗೇಶ್ಕರ್ ಅವರು ನೀಡಿರುವಂತಹ ಕೊಡುಗೆ ಖಂಡಿತವಾಗಿಯೂ ಅಸಾಮಾನ್ಯವಾದದ್ದು. ಮಹಾಮಾರಿ ಹಾಗೂ ನ್ಯುಮೋನಿಯಾ ಸಮಸ್ಯೆಯಿಂದಾಗಿ ಇಂದು ಲತಾ ಮಂಗೇಶ್ಕರ್ ಅವರು 92ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ. ಲತಾ ಮಂಗೇಶ್ಕರ್ ರವರನ್ನು ಈಗಾಗಲೇ ಭಾರತೀಯ ಸರ್ಕಾರ ಅತ್ಯುನ್ನತ ಗೌರವ ವಾಗಿರುವ ಭಾರತ ರತ್ನ ಹಾಗೂ ಚಿತ್ರರಂಗದ ಅತ್ಯುನ್ನತ ಗೌರವ ವಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

70 ವರ್ಷಗಳ ಕಾಲ ಚಿತ್ರರಂಗದಲ್ಲಿ ಬೇಡಿಕೆಯಲ್ಲಿದ್ದ ಗಾಯಕಿಯಾಗಿದ್ದರು. ಖಂಡಿತವಾಗಿಯೂ ಲತಾಮಂಗೇಶ್ಕರ್ ರವರನ್ನು ಕಳೆದುಕೊಂಡಿರುವುದು ಸಂಗೀತ ಕ್ಷೇತ್ರಕ್ಕೆ ಭರಿಸಲಾರದ ನಷ್ಟ ವಾಗಿರುತ್ತದೆ. ಇನ್ನು ಲತಾ ದೀದಿ ಎಷ್ಟು ಆಸ್ತಿಯನ್ನು ಸಂಪಾದಿಸಿದ್ದಾರೆ ಅನ್ನುವುದನ್ನು ತಿಳಿಯೋಣ ಬನ್ನಿ. ಈಗಾಗಲೇ ಸಿಕ್ಕಿರುವ ಮಾಹಿತಿಗಳ ಪ್ರಕಾರ ಲತಾಮಂಗೇಶ್ಕರ್ ರವರು ಜೀವಿತಾವಧಿಯ ಒಟ್ಟು 368 ಕೋಟಿಗೂ ಅಧಿಕ ಆಸ್ತಿಯನ್ನು ಸಂಪಾದಿಸಿದ್ದಾರೆ, ಆದರೆ ಇದನ್ನು ಕಂಡ ನೆಟ್ಟಿಗರು ಇವರ ಸಾಧನೆಗೆ ಇನ್ನು ಹೆಚ್ಚು ಹಣ ಗಳಿಸಬಹುದಾಗಿತ್ತು ಎಂದಿದ್ದಾರೆ. ಇದು ಅವರ ಹಾಡಿನ ಸಂಭಾವನೆ ರಾಯಲ್ಟಿ ಹಾಗೂ ಹೂಡಿಕೆಗಳ ಹಣದಿಂದ ಬಂದಿರುವಂತಹ ಲಾಭವೂ ಕೂಡ ಸೇರಿದೆ. ಪ್ರಭು ಕುಂಜ ಭವನ್ ಎನ್ನುವ ಮನೆಯನ್ನು ಕೂಡ ಮುಂಬೈನಲ್ಲಿ ಹೊಂದಿದ್ದಾರೆ. ಈ ಆಸ್ತಿ ಗಳಿಗಿಂತ ಹೆಚ್ಚಾಗಿ ಲತಾಮಂಗೇಶ್ಕರ್ ರವರು ಇಂದು ದೇಶದಾದ್ಯಂತ ಹಾಗೂ ವಿಶ್ವಾದ್ಯಂತ ಹೊಂದಿರುವ ಅಭಿಮಾನಿಗಳು ಅವರ ನಿಜವಾದ ಆಸ್ತಿಯಾಗಿದ್ದಾರೆ.