ನಟನೆಯಲ್ಲಿ ಮತ್ತೊಂದು ರೂಲ್ಸ್ ವಿಧಿಸಿದ ಕೀರ್ತಿ ಸುರೇಶ್, ಇದು ನಮ್ಮ ಸಂಸ್ಕೃತಿ ಎಂದು ಹಾಡಿ ಹೊಗಳಿದ ನೆಟ್ಟಿಗರು, ಯಾಕೆ ಗೊತ್ತೇ??

ನಟನೆಯಲ್ಲಿ ಮತ್ತೊಂದು ರೂಲ್ಸ್ ವಿಧಿಸಿದ ಕೀರ್ತಿ ಸುರೇಶ್, ಇದು ನಮ್ಮ ಸಂಸ್ಕೃತಿ ಎಂದು ಹಾಡಿ ಹೊಗಳಿದ ನೆಟ್ಟಿಗರು, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟಿಯರಿದ್ದಾರೆ. ಕೆಲವರು ಕೇವಲ ಕೆಲವು ಪಾತ್ರಗಳಿಗೆ ಮಾತ್ರ ಸೀಮಿತ ರಾಗಿರುತ್ತಾರೆ. ಇನ್ನು ಕೆಲವು ನಟಿಯರು ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸುವಂತೆ ನಟನೆ ಮಾಡುತ್ತಾರೆ ಹಾಗೂ ಆ ಪಾತ್ರಕ್ಕೆ ಕೂಡ ಅವರನ್ನು ಬಿಟ್ಟು ಬೇರೆ ಯಾರು ಕೂಡ ನಟಿಸಲಾಗದು ಎಂಬಷ್ಟರಮಟ್ಟಿಗೆ ನ್ಯಾಯವನ್ನು ಸಲ್ಲಿಸುತ್ತಾರೆ.

ಅಂತಹ ನಟಿಯರಲ್ಲಿ ನಾವು ಇಂದು ಹೇಳ ಹೊರಟಿರುವುದು ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಬಹುಬೇಡಿಕೆಯ ಹಾಗೂ ಯಾವುದೇ ಪಾತ್ರವನ್ನು ಕೂಡ ನೀರು ಕುಡಿದಷ್ಟೇ ಸುಲಭವಾಗಿ ನಿರ್ವಹಿಸಬಲ್ಲ ನಟಿ ಕೀರ್ತಿ ಸುರೇಶ್ ಅವರ ಕುರಿತಂತೆ ಹೇಳುತ್ತಿದ್ದೇವೆ. ನಟಿ ಕೀರ್ತಿ ಸುರೇಶ್ ರವರು ಎಷ್ಟರಮಟ್ಟಿಗೆ ಒಳ್ಳೆ ನಟಿ ಎಂಬುದನ್ನು ಹೇಳಲು ನಿಮಗೆ ಮಹಾನಟಿ ಸಾವಿತ್ರಿ ಚಿತ್ರವನ್ನು ನೋಡಿದರೆ ಖಂಡಿತವಾಗಿಯೂ ಪರಿಪೂರ್ಣವಾಗಿ ಅರ್ಥವಾಗುತ್ತದೆ.

ಅಂತಹ ಮೇರು ಪಾತ್ರವನ್ನೇ ಪರಿಪಕ್ವವಾಗಿ ಹಾಗು ಪರಿಪೂರ್ಣವಾಗಿ ಪ್ರೇಕ್ಷಕರೆದುರು ನಟಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿ ದಂತಹ ಅದ್ಭುತ ಕಲಾವಿದ ಕೀರ್ತಿ ಸುರೇಶ್. ಸದ್ಯದಲ್ಲೇ ಅವರ ಹಾಗೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸರ್ಕಾರಿ ವಾರು ಪಾಠ ಅತಿಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಇಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ರಜನಿಕಾಂತ್ ನಟನೆಯ ಅಣ್ಣಾತೆ ಚಿತ್ರದಲ್ಲಿ ರಜನಿಕಾಂತ್ ಅವರ ತಂಗಿಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಇನ್ನು ತಮ್ಮ ನಟನೆಯಲ್ಲಿ ಕೀರ್ತಿ ಸುರೇಶ್ ರವರು ಒಂದು ನಿಯಮವನ್ನು ಹಾಕಿಕೊಂಡಿದ್ದು ಇದು ಈಗ ಎಲ್ಲಾ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.

ಹೌದು ಗೆಳೆಯರೇ ಅದೇನೆಂದರೆ ಕೀರ್ತಿ ಸುರೇಶ್ ರವರು ಎಷ್ಟೇ ಕೋಟಿ ಕೊಟ್ಟರು ಕೂಡ ಗ್ಲಾಮರಸ್ ಪಾತ್ರಗಳನ್ನು ತಾನು ಮಾಡುವುದಿಲ್ಲ ಎಂಬುದಾಗಿ ಹೇಳಿ ಕೊಂಡಿದ್ದಾರೆ. ತುಂಡುಡುಗೆಯ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂಬುದಾಗಿ ಕೀರ್ತಿ ಸುರೇಶ್ ಅವರು ಈಗಾಗಲೇ ಖಡಾ ಖಂಡಿತವಾಗಿ ಹೇಳಿ ಬಿಟ್ಟಿದ್ದಾರೆ. ಈ ಕಾರಣದಿಂದಾಗಿ ಹಲವಾರು ಸಿನಿಮಾಗಳನ್ನು ಕಳೆದುಕೊಂಡರು ಕೂಡ ಅವರು ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಇದೇ ರೀತಿ ಚಿತ್ರರಂಗದಲ್ಲಿ ಸಾಯಿಪಲ್ಲವಿ ರವರು ಮೇಕಪ್ ಹಾಗೂ ತಮನ್ನಾ ರವರು ಲಿಪ್ಲಾಕ್ ಮಾಡುವುದಿಲ್ಲ ಎಂಬುದಾಗಿ ಕೂಡ ಹೇಳಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಕೀರ್ತಿ ಸುರೇಶ್ ರವರು ಕೂಡ ಇಂತಹ ಸಂಸ್ಕಾರಯುತ ನಡೆವಳಿಕೆಯನ್ನು ಪಾಲಿಸುವುದನ್ನು ಕೇಳಿರುವ ಪ್ರೇಕ್ಷಕರು ಈಗಾಗಲೇ ಕೀರ್ತಿ ಸುರೇಶ್ ಅವರಿಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಪ್ರತಿಕ್ರಿಯೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.