ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತದಂತಹ ಮಹಾನ್ ಶಕ್ತಿಯನ್ನು ಎದುರು ಹಾಕಿಕೊಂಡು ಪಾಕ್ ಪರ ನಿಂತ ಹುಂಡೈಸಂಸ್ಥೆಗೆ ಮರ್ಮಾಘಾತ. ನಡೆಯುತ್ತಿರುವುದಾದರೂ ಏನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಒಂದಲ್ಲ ಒಂದು ಸುದ್ದಿ ಆಗುತ್ತಲೇ ಇರುತ್ತದೆ. ಈಗ ಇದೇ ವಿಚಾರಕ್ಕೆ ಒಂದು ಅನಗತ್ಯವಾಗಿ ವಿವಾದ ನಿರ್ಮಾಣವಾಗುವಂತಹ ಕೆಲಸವನ್ನು ಸಂಸ್ಥೆಯೊಂದು ಮಾಡಿದೆ. ಹೌದು ಗೆಳೆಯರೆ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತ ದೇಶದಲ್ಲಿ ಹಲವಾರು ಕಾರ್ ಸಂಸ್ಥೆಗಳಿವೆ. ಇಂದು ನಾವು ಮಾತನಾಡಲು ಹೊರಟಿರುವುದು ಹುಂಡೈ ಸಂಸ್ಥೆಯ ಕುರಿತಂತೆ. ಈ ಸಂಸ್ಥೆ ಈಗಾಗಲೇ ಕಾರು ಮಾರಾಟದ ವಿಚಾರದಲ್ಲಿ ಸಾಕಷ್ಟು ಮುಂದಿದೆ ಎಂದರೆ ತಪ್ಪಾಗಲಾರದು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಚಾರಗಳ ಕುರಿತಂತೆ ಅನಗತ್ಯವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಅನಗತ್ಯ ವಿವಾ’ದವನ್ನು ತನ್ನ ಮೇಲೆ ಎಳೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇದಕ್ಕಾಗಿ ಭಾರತೀಯರೆಲ್ಲರೂ ಸೇರಿಕೊಂಡು ಈಗಾಗಲೇ ಟ್ವಿಟರ್ನಲ್ಲಿ ಹುಂಡೈ ಸಂಸ್ಥೆಯ ವಿರುದ್ಧ ಬಾಯ್ಕಾಟ್ ಟ್ರೆಂಡನ್ನು ಪ್ರಾರಂಭಿಸಿದ್ದಾರೆ. ಇಷ್ಟಕ್ಕೂ ಹುಂಡೈ ಸಂಸ್ಥೆ ಮಾಡಿರುವ ಅವಾಂತರ ವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೆಟ್ಟಿಗರು ಹುಂಡೈ ಸಂಸ್ಥೆಯನ್ನು ಟ್ವಿಟರ್ನಲ್ಲಿ ಬಾಯ್ಕಾಟ್ ಮಾಡುವಷ್ಟರ ಮಟ್ಟಿಗೆ ಹುಂಡೈ ಸಂಸ್ಥೆ ನಿಜವಾಗಿಯೂ ಏನು ನಡೆದುಕೊಂಡಿದೆ ಎಂದು ತಿಳಿಯೋದು ಪ್ರಮುಖವಾಗಿರುತ್ತದೆ. ಹಾಗಿದ್ದರೆ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಹುಂಡೈ ಸಂಸ್ಥೆ ಕಾರನ್ನು ಮಾರಾಟ ಮಾಡಿಕೊಂಡು ಸುಮ್ಮನೆ ತಪ್ಪಾಗಿದ್ದರೆ ಸರಿಯಾಗುತ್ತಿತ್ತು. ಆದರೆ ಎರಡು ದೇಶಗಳ ನಡುವಿನ ವ್ಯಾಜ್ಯವನ್ನು ವಿವಾದಾತ್ಮಕ ದೃಷ್ಟಿಯಲ್ಲಿ ತೋರಿಸುತ್ತಿರುವುದು ನಿಜಕ್ಕೂ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಫೆಬ್ರವರಿ ಐದರಂದು ಟ್ವಿಟರ್ನಲ್ಲಿ ಪಾಕಿಸ್ತಾನ ಹುಂಡೈ ಕಾಶ್ಮೀರಿ ಸಹೋದರರ ತ್ಯಾಗವನ್ನು ನೆನೆಯೋಣ ಹಾಗೂ ಅವರ ಹೋರಾಟಕ್ಕೆ ಬೆಂಬಲ ವಾಗೋಣ ಎಂಬುದಾಗಿ ಪೋಸ್ಟ್ ಮಾಡಿದೆ. ಇದರಲ್ಲಿ ಕಾಶ್ಮೀರವನ್ನು ಮುಳ್ಳು ತಂತಿಯಿಂದ ಜೋಡಿಸಿದೆ ಎನ್ನುವುದಾಗಿ ಭಾರತ ವನ್ನು ಶತ್ರುವಿನಂತೆ ಬಿಂಬಿಸಿದೆ. ಇದರ ಕುರಿತಂತೆ ಭಾರತೀಯರು ಹುಂಡೈ ಇಂಡಿಯಾವನ್ನು ಪ್ರಶ್ನಿಸಿದಾಗ ಎಲ್ಲರನ್ನೂ ಬ್ಲಾಕ್ ಮಾಡಿದೆ. ಇದಕ್ಕೆ ಈಗ ಟ್ವಿಟರ್ನಲ್ಲಿ ಹುಂಡೈ ಸಂಸ್ಥೆಯನ್ನು ಬಾಯ್ಕಾಟ್ ಮಾಡುತ್ತಿದ್ದಾರೆ. ಒಂದು ಕಾರಿನ ಸಂಸ್ಥೆಯು ಮಾರಾಟದ ದೃಷ್ಟಿಯಲ್ಲಿ ತನ್ನ ನಿಲುವುಗಳನ್ನು ನಿರ್ಧರಿಸುವುದು ಅಥವಾ ಘೋಷಿಸುವುದು ಸರಿ ಆದರೆ ಇದು ಎಲ್ಲೆಯನ್ನು ಮೀರಿದಂತಹ ಉದ್ಧಟತನ ಎಂದು ಹೇಳಬಹುದು.

Get real time updates directly on you device, subscribe now.