ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಲಕ್ನೋ ತಂಡದ ನಂತರ ತನ್ನ ಹೆಸರನ್ನು ಫೈನಲ್ ಮಾಡಿದ ಅಹಮದಾಬಾದ್ ಐಪಿಎಲ್ ತಂಡ. ಏನಂತೆ ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಕ್ಕೆ ಹೊಸದಾಗಿ ಎರಡು ಫ್ರಾಂಚೈಸಿಗಳು ಸೇರಿರುವುದು ನಿಮಗೆ ತಿಳಿದ ವಿಷಯವಾಗಿದೆ. ಒಂದು ತಂಡ ಅಹಮದಾಬಾದ್ ಆದರೇ ಮತ್ತೊಂದು ತಂಡ ಲಕ್ನೋ. ಈಗಾಗಲೇ ಲಕ್ನೋ ತಂಡ, ತಮ್ಮ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಎಂದು ಹೆಸರಿಟ್ಟುಕೊಂಡು ಅದನ್ನು ಅಧಿಕೃತವಾಗಿ ಹೇಳಿತ್ತು. ಈಗಾಗಲೇ ಲಕ್ನೋ ತಂಡ ಕೆ.ಎಲ್.ರಾಹುಲ್, ಮಾರ್ಕಸ್ ಸ್ಟೋಯಿನಿಸ್, ಮತ್ತು ಬಿಷ್ಣೋಯಿ ಯವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇನ್ನು ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಮತ್ತು ಶುಭಮಾನ್ ಗಿಲ್ ರನ್ನು ಹರಾಜಿಗೆ ಮುನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೇ ಅಹಮದಾಬಾದ್ ಫ್ರಾಂಚೈಸಿ ತನ್ನ ಹೆಸರನ್ನು ಇನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ತನ್ನ ಹೆಸರನ್ನು ಬಿಡುಗಡೆಗೊಳಿಸಿದೆ. ಹೌದು ಅಹಮದಾಬಾದ್ ತಂಡದ ಹೆಸರು ಅಹಮದಾಬಾದ್ ಟೈಟಾನ್ಸ್ ಎಂದು ಇಟ್ಟುಕೊಂಡಿದೆ. ಆ ಹೆಸರನ್ನು ಫ್ರಾಂಚೈಸಿ ಅಧೀಕೃತವಾಗಿ ಬಿಡುಗಡೆಗೊಳಿಸಲಿದೆ. ಮೂಲಗಳ ಪ್ರಕಾರ ಈ ತಂಡಕ್ಕೆ ಹಾರ್ದಿಕ್ ಪಾಂಡ್ಯರವರೇ ನಾಯಕರಾಗಬಹುದು. ಹರಾಜಿನಲ್ಲಿ ಯಾವ ಘಟಾನುಘಟಿ ಆಟಗಾರರನ್ನು ಸೆಳೆಯುತ್ತದೆ ಎಂಬುದನ್ನ ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.