ಬಿಗ್ ನ್ಯೂಸ್: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಪರ ಮಹತ್ವದ ಹೆಜ್ಜೆ ಇಟ್ಟ ಮೋದಿ ಅಂಡ್ ಟೀಮ್, ಏನು ಗೊತ್ತೇ??

ಬಿಗ್ ನ್ಯೂಸ್: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಪರ ಮಹತ್ವದ ಹೆಜ್ಜೆ ಇಟ್ಟ ಮೋದಿ ಅಂಡ್ ಟೀಮ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಸಾಧಕ ಬಾಧಕಗಳ ಕುರಿತಂತೆ ಪರಿಶೀಲನೆ ನಡೆಸಲು 22ನೇ ಕಾನೂನು ಆಯೋಗಕ್ಕೆ ಜವಾಬ್ದಾರಿ ವಹಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಕಳೆದ ವರ್ಷ ಅಂದರೆ 2021ರ ಅಂತ್ಯದಲ್ಲಿ (ಡಿ. 1) ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂಸದ ನಿಶಿಕಾಂತ್‌ ದುಬೆ ಅವರು ಲೋಕಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಹೀಗಾಗಿ ಈ ಕುರಿತು ಕೇಂದ್ರ ಕಾನೂನು ಸಚಿವರಾದ ರಿಜುಜು ಪ್ರತಿಕ್ರಿಯಿಸಿದ್ದು, ವಿವಿಧ ಸಮುದಾಯಗಳನ್ನು ನಿಯಂತ್ರಿಸುವ ವಿವಿಧ ವೈಯಕ್ತಿಕ ಕಾನೂನುಗಳ ನಿಬಂಧನೆಗಳ ಆಳವಾದ ಅಧ್ಯಯನದ ಮಾಡುವ ಅಗತ್ಯವಿದೆ. ಆದ್ದರಿಂದ ಈ ವಿಷಯದ ಸೂಕ್ಷ್ಮ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಹೊಸ ಕಾನೂನು ಆಯೋಗದ ಸುಪರ್ದಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

21ನೇ ಕಾನೂನು ಆಯೋಗದಲ್ಲಿ ವಿ ವಿಷಯವನ್ನು ಪ್ರಸ್ತಾಪಿಸಿದ್ದರು, 2018ರ ಆ.31ಕ್ಕೆ ಆಯೋಗ ಕೊನೆಗೊಂಡಿತ್ತು. ಹೀಗಾಗಿ ಅಪೂರ್ಣವಾಗಿ ಉಳಿದ ಈ ವಿಷಯದ ಬಗ್ಗೆ 22ನೇ ಹೊಸ ಕಾನೂನು ಆಯೋಗದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ರಿಜುಜು ಹೇಳಿದ್ದಾರೆ. ಗೋವಾದಲ್ಲಿ ಈಗಾಗಲೇ ಇರುವ ಸಾಮಾನ್ಯ ನಾಗರಿಕ ಸಂಹಿತೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ದಾರೆ. ಗೋವಾ ವಿಮೋಚನೆಯ 60ನೇ ವಾರ್ಷಿಕೋತ್ಸವದಲ್ಲಿ ಅವರು ಭಾಗವಹಿಸಿದ್ದರು. ಬಿಜೆಪಿ ಸರ್ಕಾರವು 2019ರ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ವಿಷಯ ಪ್ರಸ್ತಾಪಿಸಿತ್ತು. ವಿವಿಧ ಧಾರ್ಮಿಕ ಸಮುದಾಯಗಳನ್ನು ನಿಯಂತ್ರಿಸುವ, ವಿವಿಧ ವೈಯಕ್ತಿಕ ಕಾನೂನುಗಳನ್ನು ಬದಲಿಸಲು ಏಕರೂಪ ನಾಗರಿಕ ಸಂಹಿತೆ ಜಾರಿ ವಿಷಯವು ಬಿಜೆಪಿಯ ಪ್ರಮುಖ ರಾಜಕೀಯ ಉದ್ದೇಶಗಳಲ್ಲಿ ಒಂದಾಗಿದೆ.