ಆರ್ಸಿಬಿ ಇಂದ ನಿವೃತ್ತಿ ಪಡೆದುಕೊಂಡ ಮೇಲೆ ಮೊದಲ ಬಾರಿಗೆ ಆರ್ಸಿಬಿ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ ಎಬಿಡಿ, ಹೇಳಿದ್ದೇನು ಗೊತ್ತೇ??

ಆರ್ಸಿಬಿ ಇಂದ ನಿವೃತ್ತಿ ಪಡೆದುಕೊಂಡ ಮೇಲೆ ಮೊದಲ ಬಾರಿಗೆ ಆರ್ಸಿಬಿ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ ಎಬಿಡಿ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೇ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್ಸಿಬಿ ತಂಡ ಒಂದೇ ಒಂದು ಭಾರಿಯೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯದಿದ್ದರೂ, ಅಭಿಮಾನಿಗಳ ಅಭಿಮಾನ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಈ ನಡುವೆ ಆರ್ಸಿಬಿ ತಂಡದಲ್ಲಿ ಅಭಿಮಾನಿಗಳಿಗೆ ಅತಿ ಹೆಚ್ಚು ಇಷ್ಟವಾಗಿದ್ದು ಎಂದರೇ, ಒಂದು ಕ್ರಿಸ್ ಗೇಲ್ ಮತ್ತೊಂದು ಎಬಿ ಡಿ ವಿಲಿಯರ್ಸ್.

ಅದರಲ್ಲೂ ಎಬಿಡಿಗೆ ಆಪತ್ಭಾಂದವ ಎಬಿಡಿ ಎಂದು ಹೆಸರಿಟ್ಟವರೇ ಆರ್ಸಿಬಿಯ ಅಭಿಮಾನಿಗಳು. ಆದರೇ ಬೇಸರದ ಸಂಗತಿಯೆಂದರೇ, ಆರ್ಸಿಬಿಯ ಅಭಿಮಾನಿಗಳು ಈ ಭಾರಿ ಎಬಿ ಡಿ ವಿಲಿಯರ್ಸ್ ರವರ ಬ್ಯಾಟಿಂಗ್ ನ್ನು ನೋಡುವ ಸೌಭಾಗ್ಯವಿಲ್ಲ.ಏಕೆಂದರೇ ಎಬಿಡಿ ಕ್ರಿಕೇಟ್ ನ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ. ಆದರೇ ಎಬಿಡಿ ಆರ್ಸಿಬಿಯ ಬ್ಯಾಟಿಂಗ್ ಮೆಂಟರ್ ಆಗಿ ಕಾರ್ಯ ನಿರ್ವಹಿಸಬಹುದು ಎಂಬ ಗುಸುಗುಸು ಕೇಳಿ ಬರುತ್ತಿದೆ. ಈ ನಡುವೆ ನಿರೂಪಕ ದ್ಯಾನಿಶ್ ಸೇಠ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಎಬಿಡಿ ಬೆಂಗಳೂರನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಬೆಂಗಳೂರು ನಗರ, ಅಲ್ಲಿಯ ಜನ, ವಾತಾವರಣ ಎಲ್ಲವೂ ನನಗೆ ಬಹಳ ಇಷ್ಟ ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ‌. ಈ ಮಧ್ಯೆ ನಿರೂಪಕ ದ್ಯಾನಿಶ್ ಸೇಠ್ ಒಂದು ಪ್ರಶ್ನೆ ಕೇಳಿದರು. ಒಂದು ವೇಳೆ ಅಭಿಮಾನಿಗಳು ನಿಮಗೆ ಅಪಾರ್ಟ್ ಮೆಂಟ್ ಕೊಡುತ್ತವೆ, ಇಲ್ಲಿಯೇ ಉಳಿದುಕೊಂಡು ಬಿಡಿ ಎಂದು ಹೇಳಿದರೇ ಏನು ಮಾಡುತ್ತಿರಿ ಎಂದು ಎಬಿಡಿಗೆ ಕೇಳಿದರು. ಇದಕ್ಕೆ ಹಾಸ್ಯಾಸ್ಪದ ಉತ್ತರ ನೀಡಿದ ಎಬಿಡಿ, ನನಗೆ ಮೂರು ಮಕ್ಕಳಿದ್ದಾರೆ, ನನಗೆ ದೊಡ್ಡ ಅಪಾರ್ಟ್ ಮೆಂಟ್ ಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅದರ ಜೊತೆಗೆ ಬೆಂಗಳೂರು ಹಾಗೂ ಆರ್ಸಿಬಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.