ಮತ್ತೊಮ್ಮೆ ಹಿಜಾಬ್ ಪ್ರಕರಣದ ಕುರಿತಂತೆ ಆದೇಶ ಹೊರಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಏನಂತೆ ಗೊತ್ತೇ??

ಮತ್ತೊಮ್ಮೆ ಹಿಜಾಬ್ ಪ್ರಕರಣದ ಕುರಿತಂತೆ ಆದೇಶ ಹೊರಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಶಾಲೆಗಳು ಧರ್ಮ, ಜಾತಿ ನೋಡದೇ ಎಲ್ಲರಿಗೂ ಸಹ ಜ್ಞಾನವನ್ನು ನೀಡುತ್ತವೆ. ಆದರೇ ಈಗ ಶಾಲೆ,ಕಾಲೇಜುಗಳಲ್ಲಿಯೂ ಸಹ ಜಾತಿ,ಧರ್ಮಗಳ ಮೇಲಾಟ ನಡೆಯುತ್ತಿದೆ. ಇದಕ್ಕೆ ಸಂಭಂದಿಸಿದಂತೆ, ಈಗ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ. ಒಂದು ಕೋಮಿನ ಹೆಣ್ಣು ಮಕ್ಕಳು ನಾವು ಕಾಲೇಜುಗಳಿಗೆ ಹಿಜಾಬ್ ಧರಿಸಿಯೇ ಬರುತ್ತೇವೆ, ಅದಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದರು.

ಆದರೇ ಇದಕ್ಕೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ. ಆಗ ಇನ್ನೊಂದು ಕೋಮಿನ ವಿದ್ಯಾರ್ಥಿಗಳು ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಅದಕ್ಕೂ ಸಹ ಅನುಮತಿ ನೀಡಿ ಎಂದು ಕೋರಿದರು. ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಅರಿತು ಯಾವುದಕ್ಕೂ ಅನುಮತಿ ನೀಡದೆ, ಕಾಲೇಜಿನ ಯೂನಿಫಾರಂ ಮಾತ್ರ ಧರಿಸಬೇಕು ಎಂದು ಹೇಳಿತ್ತು.

ಸರ್ಕಾರದ ಮಟ್ಟದಲ್ಲಿ ಈ ವಿವಾದ ತಾರಕಕ್ಕೇರಿದ ಕಾರಣ, ಇಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕಾಲೇಜುಗಳು ಹಾಗೂ ಶಾಲೆಗಳು ಧರ್ಮ ಪ್ರಸಾರ ಮಾಡುವದಕ್ಕಲ್ಲ ಇರುವುದು, ಬದಲಿಗೆ ಜ್ಞಾನಾರ್ಜನೆಗೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಅದಲ್ಲದೇ ಕಾಲೇಜು ಆಡಳಿತ ಮಂಡಳಿ ನಿಗದಿ ಪಡಿಸಿದ ವಸ್ತ್ರ ಸಂಹಿತೆಯನ್ನು ಮಾತ್ರ ಧರಿಸಬೇಕು ಎಂದು ಸಹ ಹೇಳಿದ್ದಾರೆ, ಇದನ್ನು ಪ್ರತಿಯೊಬ್ಬರೂ ಅನುಸರಿಸಲೇಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇಷ್ಟು ದಿನ ಸದ್ದು ಮಾಡಿದ್ದ ಹಿಜಬ್ ವಿವಾದ ತಣ್ಮಗಾಗುವ ಲಕ್ಶಣ ಕಾಣುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.