ಆರ್ಸಿಬಿ ಪುನಃ ಖರೀದಿಸಲಿರುವ ಹಾಗೂ ಹೊಸದಾಗಿ ಖರೀದಿಸಲು ಟಾರ್ಗೆಟ್ ಮಾಡಿರುವ ಟಾಪ್ 6 ಆಟಗಾರರು, ಯಾರ್ಯಾರು ಗೊತ್ತೇ??

ಆರ್ಸಿಬಿ ಪುನಃ ಖರೀದಿಸಲಿರುವ ಹಾಗೂ ಹೊಸದಾಗಿ ಖರೀದಿಸಲು ಟಾರ್ಗೆಟ್ ಮಾಡಿರುವ ಟಾಪ್ 6 ಆಟಗಾರರು, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022ರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಫೆಬ್ರವರಿ 12 ಮತ್ತು 13 ರಂದು ಹರಾಜು ನಡೆಯಲಿದೆ. ಈಗಾಗಲೇ ಆರ್ಸಿಬಿ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್ ರನ್ನ ರಿಟೇನ್ ಮಾಡಿಕೊಂಡಿದೆ. ಈಗ ಸದ್ಯ ಆರ್ಸಿಬಿ ಪರ್ಸ್ ನಲ್ಲಿ ಆಟಗಾರರನ್ನು ಖರೀದಿಸಲು 57 ಕೋಟಿ ರೂ ಉಳಿದಿದೆ. ಆ ದುಡ್ಡಿನಲ್ಲಿ ಒಟ್ಟು ಉಳಿದ 22 ಆಟಗಾರರನ್ನು ಖರೀದಿಸಬೇಕಿದೆ. ಸದ್ಯ ಆರ್ಸಿಬಿ ಖರೀದಿಸಲಿರುವ ಮೂವರು ತನ್ನ ಹಳೆಯ ಆಟಗಾರರು ಹಾಗೂ ಹೊಸ ಮೂವರು ಆಟಗಾರರ ಸಂಭವನೀಯ ಪಟ್ಟಿ ದೊರೆತಿದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

ಆರ್ಸಿಬಿಗೆ ಆಡಿದ್ದ ಮೂವರು ಆಟಗಾರರ ಪೈಕಿ ಆರ್ಸಿಬಿ ಹರಾಜಿನಲ್ಲಿ ಯುಜವೆಂದ್ರ ಚಾಹಲ್, ದೇವದತ್ ಪಡಿಕ್ಕಲ್ ಹಾಗೂ ಹರ್ಷಲ್ ಪಟೇಲ್ ರನ್ನ ಪುನಃ ಖರೀದಿಸಲು ನಿರ್ಧರಿಸಿದೆ. ಮೂವರು ಆಟಗಾರರಿಗೆ ಆರ್ಸಿಬಿ ಮರುಹುಟ್ಟು ನೀಡಿದ್ದು, ಅವರನ್ನ ಪುನಃ ಖರೀದಿಸಿ ತಂಡವನ್ನು ಬಲಪಡಿಸಲು ಯೋಚಿಸಿದೆ. ಅದರಲ್ಲಿ ಚಾಹಲ್ ಹಾಗೂ ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ಮಿಂಚಿದ್ದರೇ, ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನಲ್ಲಿ ಮಿಂಚಿ ಶತಕಗಳಿಸಿದ್ದರು.

ಇನ್ನು ಆರ್ಸಿಬಿ ಹೊಸದಾಗಿ ಖರೀದಿಸಲು ಕಣ್ಣಿಟ್ಟಿರುವ ಆಟಗಾರರೆಂದರೇ ಅದು ನ್ಯೂಜಿಲೆಂಡ್ ನ ಲೂಕಿ ಫರ್ಗುಸನ್, ಮತ್ತು ಭಾರತದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ರನ್ನು. ಫರ್ಗುಸನ್ ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದ ಬೌಲರ್ ಆದರೇ, ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕ ಹಾಗೂ ನಾಯಕತ್ವದ ಹೊಣೆ ಹೊರುವ ಸಾಮರ್ಥ್ಯವಿದೆ. ಇನ್ನು ಇಶಾನ್ ಕಿಶನ್ ವಿಕೇಟ್ ಕೀಪಿಂಗ್ ಹಾಗೂ ಆರಂಭಿಕ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯವಿದೆ. ಹೀಗಾಗಿ ಈ ಮೂವರ ಮೇಲೆ ಆರ್ಸಿಬಿ ಫ್ರಾಂಚೈಸಿ ಕಣ್ಣಿಟ್ಟಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.