ಉತ್ತರ ಪದೇಶ ರಾಜಕೀಯ ಭವಿಷ್ಯ ಏನಾಗಲಿದೆ?? ಯೋಗಿ ಮುಂದೆ ರಾಷ್ಟ್ರನಾಯಕ ಆಗುತ್ತಾರಾ?? ರಾಶಿಫಲ ಏನು ಹೇಳುತ್ತದೆ ಗೊತ್ತೇ??

ಉತ್ತರ ಪದೇಶ ರಾಜಕೀಯ ಭವಿಷ್ಯ ಏನಾಗಲಿದೆ?? ಯೋಗಿ ಮುಂದೆ ರಾಷ್ಟ್ರನಾಯಕ ಆಗುತ್ತಾರಾ?? ರಾಶಿಫಲ ಏನು ಹೇಳುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರಧಾನಿ ಮೋದಿ ರವರ ನಂತರ ಭಾರತೀಯ ಜನತಾ ಪಾರ್ಟಿಯ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಅಭ್ಯರ್ಥಿ ಎಂದರೆ ಅದು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು. ಇವರನ್ನು ಗೋರಖಪುರದಲ್ಲಿ ಮಹಾರಾಜಾ ಜೀ ಎಂದು ಕರೆಯುತ್ತಾರೆ. 1972 ರಂದು ಇವರು ಜನಿಸಿದ್ದು ಇವರ ನಿಜವಾದ ಹೆಸರು ಆನಂದ್ ಸಿಂಗ್ ಬಿಷ್ತ್. ಮಹಾಯೋಗಿಗಳಾಗಿರುವ ದಿ. ಮಹಂತ್ ಅವೈದ್ಯನಾಥ್ ರವರ ಮಾರ್ಗದರ್ಶನದಲ್ಲಿಯೇ ಇವರಿಗೆ ಯೋಗಿ ಆದಿತ್ಯನಾಥ್ ಎನ್ನುವ ಮರು ನಾಮಕರಣ ವಾಗುತ್ತದೆ.

ಇವರು ಗೋರಖ್ ಪುರ ಕ್ಷೇತ್ರದಿಂದ ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ದೇಶದ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. 1998 ರಿಂದ ಇವರು ಸಂಸತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಇಲ್ಲಿಯವರೆಗೂ ಕೂಡ ಸೋಲದೆ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಇದರಲ್ಲಿ ಖಂಡಿತವಾಗಿ ಅವರ ಪರಿಶ್ರಮ ಹಾಗೂ ಸೇವಾಮನೋಭಾವದ ದೃಢತೆ ಶಾಮೀಲಾಗಿದೆ. ಆದರೆ ಇಷ್ಟೊಂದು ಯಶಸ್ಸಿಗೆ ಕಂಡಿತವಾಗಿ ಅವರ ಜನ್ಮ ಜಾತಕ ಹಾಗು ರಾಶಿಫಲ ಕೂಡ ಕಾರಣವಾಗಿರುತ್ತದೆ. ಅವರ ಜನ್ಮ ರಾಶಿ ಮಿಥುನ.

ಜನ್ಮ ಜಾತಕದ ಪ್ರಕಾರ ಇವರನ್ನು ತಪಸ್ವಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವಾಗಿರುವುದು ಚಂದ್ರನ ಶನಿಗ್ರಹ ದೊಂದಿಗೆ ಸಂಯೋಜನೆಯನ್ನು ಮಾಡಿದ್ದಾನೆ. ಚಂದ್ರನು ಮಂಗಳಗ್ರಹ ದೊಂದಿಗೆ ಸಂಯೋಜನೆ ಮಾಡುವ ನವಾಂಶದಲ್ಲಿ ಜನಿಸಿದ್ದಾರೆ. ಶನಿ ಸೂರ್ಯ ಹಾಗೂ ಬುಧ ಇವರ ಜಾತಕದ 12ನೇ ಮನೆಯಲ್ಲಿ ಕುಳಿತು ಕೊಂಡಿದ್ದಾರೆ. ಮಿಥುನ ರಾಶಿಯವರಿಗೆ ಶುಕ್ರಗ್ರಹ ಶುಭಕರವಾಗಿದ್ದಾನೆ. ಇವರ ಜಾತಕದಲ್ಲಿ 5ನೇ ಹಾಗೂ ಹತ್ತನೆ ಮನೆ ಹಂಚಿಕೆ ಅಂಶವನ್ನು ಒಳಗೊಂಡಿರುವುದರಿಂದಾಗಿ ಇವರಿಗೆ ರಾಜಯೋಗ ಉತ್ಪತ್ತಿಯಾಗುತ್ತದೆ. ಗುರುಗ್ರಹ 7ನೇ ಮನೆಯಲ್ಲಿ ನೆಲೆಸಿರುವುದರಿಂದ ಇವರಿಗೆ ಹಂಸಯೋಗ ಉತ್ಪತ್ತಿಯಾಗುತ್ತದೆ.

ಮಿಥುನರಾಶಿಯಲ್ಲಿ ರಾಜಯೋಗವನ್ನು ಪುತ್ರಕಾರಕ ಶನಿ ಹಾಗೂ ಮಾತ್ರ ಕಾರಕ ಸೂರ್ಯ ಹಾಗೂ ಅಮಾತ್ಯಿಕ ಬುಧನಿಂದ ಸೂಚಿಸಲಾಗುತ್ತದೆ ಇದರಿಂದ ಇವರ ಸ್ಥಾನಮಾನ ಹಾಗೂ ಧಾರ್ಮಿಕ ಪ್ರಭಾವಗಳನ್ನು ಮಾತ್ರವಲ್ಲದೆ ಅನುಕೂಲಕರ ಫಲಿತಾಂಶಗಳನ್ನು ಕೂಡ ನೀಡುತ್ತದೆ. ಇವರಿಗೆ ಬುದ್ಧ ಹಾಗೂ ಗುರುಸ್ಥಾನ ಸಾಕಷ್ಟು ಲಾಭಕರ ವಾಗಿದೆ. ಹೀಗಾಗಿ ಅವರ ರಾಜಕೀಯ ಜೀವನ ಖಂಡಿತವಾಗಿ ಇನ್ನು ಉತ್ತುಂಗದ ಮಟ್ಟಕ್ಕೆ ಏರಲಿದೆ. ರಾಜಕೀಯ ಜೀವನ ವಾಗಿರಲಿ ಅಥವಾ ಸನ್ಯಾಸ ಜೀವನವೇ ಆಗಿರಲಿ ಯೋಗಿ ಆದಿತ್ಯನಾಥ್ ಅವರಿಗೆ ಮುಟ್ಟಿದ ಕಾರ್ಯದಲ್ಲಿ ಯಶಸ್ಸು ಸಿಗುವುದು ಖಂಡಿತ. ಇನ್ನು ಇವರ ಜಾತಕದ ಪ್ರಕಾರ ಮುಂದಿನ ದಿನಗಳು ಬಹತ ಉತ್ತಮವಾಗಿರಲಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಬಹಳ ಸುಲಭ ಎಂದೇ ಹೇಳಲಾಗುತ್ತಿದೆ. ಇವರ ಜಾತಕದಲ್ಲಿ ಇವರಿಗೆ ಮುಂದೆ ಯಾವುದೇ ಚುನಾವಣೆಯಲ್ಲೂ ಕೂಡ ಯಾರು ಸೋಲಿಸದಂತಹ ಯೋಗ ಇರಲಿದ್ದು ರಾಷ್ಟ್ರನಾಯಕರಾಗಿ ಕೂಡ ಮಿಂಚುವ ಯೋಗ್ಯತೆ ಇರಲಿದೆ.

ಆದರೆ ಇದಕ್ಕೆ ಅವರು ಸ್ವಲ್ಪ ವರ್ಷಗಳ ಕಾಲ ಕಾಯಬೇಕು. ಇದಕ್ಕೆ ಮಂಗಳ ಹಾಗೂ ರಾಹು ತಡೆ ಹಾಕದೆ ಇದ್ದರೆ ಸೂರ್ಯನ ಹಿಮ್ಮುಖ ಚಲನೆ ಪ್ರತಿಕೂಲವಾಗಿ ಇರದಿದ್ದರೆ. ಅಮಾತ್ಯರು ಕಲ್ಯಾಣ ಕಾರರಾಗಿ ಇರಬೇಕು. ಹೀಗಿದ್ದರೆ ಮಾತ್ರ ಇದು ಸಾಧ್ಯ. ಅವರ ರಾಶಿ ಫಲ ದಲ್ಲಿ ಕೆಲವು ಗ್ರಹಗಳು ಭವಿಷ್ಯದಲ್ಲಿ ಅವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರನ್ನು ಹಿಂದಕ್ಕೆ ಬರುವಂತೆ ಮಾಡಬಹುದು ಎಂಬುದಾಗಿ ಸೂಚಿಸುತ್ತಿವೆ. ಟೀಕಾಪ್ರಹಾರ ಹಾಗೂ ಆರೋಗ್ಯದಲ್ಲಿ ಕೆಲ ಸಮಸ್ಯೆಗಳು ಕೂಡ ಅವರನ್ನು ಕಾಣಬಹುದು. ಭದ್ರತೆಯ ಕಳವಳ ಅನ್ಯ ಶಕ್ತಿಗಳು ಕೂಡ ಅವರನ್ನು ಕಾಣಬಹುದು ಆದರೆ ಗುರುವಿನ ಪ್ರಭಾವ ಎನ್ನುವುದು ಅವರನ್ನು ಸದಾಕಾಲ ರಕ್ಷಿಸಲು ಸದಾ ಸನ್ನದ್ದ ವಾಗಿರುತ್ತದೆ. ಯೋಗಿ ಆದಿತ್ಯನಾಥ್ ಅವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.