ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತಕ್ಕೆ ಸಿಕ್ಕಿದ್ದಾನೆ ಹೊಸ ಸೆಹ್ವಾಗ್, ಈತನೇ ಭಾರತದ ಭವಿಷ್ಯ ಆಟಗಾರ ಎಂದ ಆಸ್ಟ್ರೇಲಿಯಾ ದಿಗ್ಗಜ ಮೈಕಲ್ ಕ್ಲಾರ್ಕ್, ಆ ಯುವ ಆಟಗಾರ ಯಾರಂತೆ ಗೊತ್ತೆ??

41

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಜಾಫಘಡ್ ದ ನವಾಬ್, ಭಾರತದ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಅಂದರೇ ಯಾರಿಗೆ ಗೊತ್ತಿಲ್ಲ. ಭಾರತದ ಅತ್ಯಂತ ಯಶಸ್ವಿ ಆರಂಭಿಕ. ದೇಶ ಯಾವುದೇ ಆಗಿರಲಿ, ಪಿಚ್ ಹೇಗೆ ಇರಲಿ, ಬೌಲರ್ ಯಾರೇ ಇರಲಿ, ಸೆಹ್ವಾಗ್ ಮಾತ್ರ ತಮ್ಮ ಎಂದಿನ ಆಕ್ರಮಣ ಶೈಲಿ ಆಟ ಆಡುತ್ತಿದ್ದರು. ಅವರ ವಿಕೇಟ್ ಪತನವಾಗದಿದ್ದಲ್ಲಿ ಎದುರಾಳಿ ತಂಡದ ಆಟಗಾರರು ಸದಾ ಭಯದಲ್ಲಿಯೇ ಇರುತ್ತಿದ್ದರು. ಅಂತಹ ಚರಿಷ್ಮಾ ಸೃಷ್ಠಿಸಿದ ಖ್ಯಾತಿ ಸೆಹ್ವಾಗ್ ರದ್ದು.

ಇನ್ನು ಮಾಧ್ಯಮದವರ ಜೊತೆ ಮಾತನಾಡಿದ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾಕ್ , ಈತ ಭಾರತದ ಜ್ಯೂನಿಯರ್ ಸೆಹ್ವಾಗ್, ಈತನಿಗೆ ಹೆಚ್ಚು ಅವಕಾಶ ನೀಡಿದರೇ, ಆತ ಭವಿಷ್ಯದಲ್ಲಿ ಶ್ರೇಷ್ಠ ಆಟಗಾರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಕ್ಲಾರ್ಕ್ ಭವಿಷ್ಯ ನುಡಿದ ಆಟಗಾರ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾಕ್ಕೆ ಮರಳಲು ಹರಸಾಹಸ ಪಡುತ್ತಿರುವ ಆರಂಭಿಕ ಬ್ಯಾಟ್ಸಮನ್ ಪೃಥ್ವಿ ಷಾ. ಹೌದು ಅಂಡರ್ 19 ತಂಡದ ನಾಯಕರಾಗಿದ್ದ ಪೃಥ್ವಿ ಷಾ ಆರಂಭದಲ್ಲಿ ರನ್ನುಗಳ ಮಳೆ ಸುರಿಸಿದರು.

ಆದರೇ ನಂತರ ಅವರ ಬ್ಯಾಟ್ ನಿಂದ ರನ್ನುಗಳು ಭಾರದ ಕಾರಣ, ಟೀಮ್ ಇಂಡಿಯಾದಿಂದ ಹೊರಬಿದ್ದರು. ಸದ್ಯ ಭಾರತದ ಆರಂಭಿಕ ಸ್ಥಾನಕ್ಕೆ ಹರವಾರು ಜನ ಆಕಾಂಕ್ಷಿಗಳು ಇರುವ ಕಾರಣ ಪೃಥ್ವಿ ಷಾ ಗೆ ಬಾಗಿಲು ಮುಚ್ಚಿದೆ. ಆದರೇ ಕ್ಲಾರ್ಕ್ ಪ್ರಕಾರ ಅವರಿಗೆ ಅವಕಾಶ ನೀಡಬೇಕು. ಖಂಡಿತ ಅವರು ತಪ್ಪುಗಳನ್ನು ತಿದ್ದಿಕೊಂಡು, ಭವಿಷ್ಯದಲ್ಲಿ ಭಾರತ ತಂಡದಲ್ಲಿ ವಿರೇಂದ್ರ ಸೆಹ್ವಾಗ್ ನಿಭಾಯಿಸಿದ್ದ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ. ಆಯ್ಕೆಗಾರರ ಗಮನ ಸೆಳೆಯಲು ಪೃಥ್ವಿ ಷಾ ಗೆ ಐಪಿಎಲ್ ಅತ್ಯುತ್ತಮ ವೇದಿಕೆಯಾಗಿದ್ದು, ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಟೇನ್ ಆಗಿರುವ ಪೃಥ್ವಿ ಈ ಅವಕಾಶವನ್ನು ಹೇಗೆ ಬಳಸುತ್ತಾರೆಂಬುದನ್ನು ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.