ಬಿಗ್ ನ್ಯೂಸ್: ಪ್ರಚಾರಕ್ಕಾಗಿ ತಪ್ಪು ದಾರಿ ಹಿಡಿಯಿತೇ ಪುಷ್ಪ ತಂಡ, ಹೇಗೆಲ್ಲ ಪ್ಲಾನ್ ಮಾಡಿದ್ದರಂತೆ ಗೊತ್ತೇ??

ಬಿಗ್ ನ್ಯೂಸ್: ಪ್ರಚಾರಕ್ಕಾಗಿ ತಪ್ಪು ದಾರಿ ಹಿಡಿಯಿತೇ ಪುಷ್ಪ ತಂಡ, ಹೇಗೆಲ್ಲ ಪ್ಲಾನ್ ಮಾಡಿದ್ದರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಸೂಪರ್ ಹಿಟ್ ಆಗಿದೆ. ಥಿಯೇಟರ್ ಗಳಲ್ಲಿ ಮಾತ್ರವಲ್ಲದೇ, ಈಗ ಅಮೇಜಾನ್ ಪ್ರೈಮ್ ನಂತಹ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ , ಅಲ್ಲಿಯೂ ಸಹ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಆದರೇ ಈಗ ಪುಷ್ಪ ಚಿತ್ರತಂಡದ ಮೇಲೆ ಸಾರ್ವಜನಿಕರು ಒಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಗಾಸಿಪ್ ಬಹಳ ವೇಗವಾಗಿ ಹಬ್ಬುತ್ತಿದ್ದು, ಒಂದು ವೇಳೆ ನಿಜ ಆದರೆ ನಿಜಕ್ಕೂ ಬಾರಿ ಮುಜುಗರಕ್ಕೆ ಒಳಗಾಗಲಿದೆ ಚಿತ್ರತಂಡ.

ಸನ್ನಿವೇಶಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದಾಗ ಸಾರ್ವಜನಿಕರು ವ್ಯಕ್ತಪಡಿಸಿರುವ ಅನುಮಾನ ನಿಜ ಎಂದು ಭಾಸವಾಗುತ್ತದೆ. ಅಷ್ಟಕ್ಕೂ ಪುಷ್ಪ ಚಿತ್ರತಂಡ ಮಾಡಿದೆ ಎಂದು ಕೇಳಿಬರುತ್ತಿವ ಕೆಲಸ ಏನು ಎಂಬುದನ್ನು ತಿಳಿಯೋಣ ಬನ್ನಿ. ನೀವು ನಿಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಂ ಎಲ್ಲಿ ನೋಡಿದರೂ, ಪುಷ್ಪ ಸಿನಿಮಾದ ಶ್ರೀ ವಲ್ಲಿ ರೀಲ್ಸ್ ಗಳು ಕಾಣಸಿಗುತ್ತವೆ.

ಅದರಲ್ಲಿಯೂ ಸೆಲೆಬ್ರಿಟಿ ಕ್ರಿಕೇಟಿಗರು ಒಬ್ಬರಾದ ನಂತರ ಒಬ್ಬರು ಪುಷ್ಪ ಸಿನಿಮಾದ ಸಾಂಗ್ ಗೆ ರೀಲ್ಸ್ ಮಾಡುತ್ತಿದ್ದಾರೆ. ಇದು ಪ್ರಚಾರಕ್ಕಾಗಿ ಪುಷ್ಪ ಚಿತ್ರತಂಡವೇ, ಕ್ರಿಕೇಟಿಗರಿಗೆ ದುಡ್ಡು ಕೊಟ್ಟು ರೀಲ್ಸ್ ಮಾಡಿಸಿ, ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೇ ಪುಷ್ಪ ಸಿನಿಮಾ ಬಿಡುಗಡೆಯಾದಾಗ ಆ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಇದರ ಜೊತೆ ಪುಷ್ಪ ಸಿನಿಮಾ, ಕೆ.ಜಿ.ಎಫ್ ಗಿಂತ ಹತ್ತು ಪಟ್ಟು ಚೆನ್ನಾಗಿದೆ ಎಂಬ ಸುದ್ದಿ ಹರಿಬಿಡಲಾಗಿತ್ತು. ಹಾಗಾಗಿ ಈಗ ಒಟಿಟಿಯಲ್ಲಿಯೂ ಸಹ ಉತ್ತಮ ಹಿಟ್ಸ್ ಪಡೆಯಲು, ಪುಷ್ಪ ಚಿತ್ರತಂಡ, ಕ್ರಿಕೇಟಿಗರಿಂದ ರೀಲ್ಸ್ ಮಾಡಿಸುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.