ಭಾರತದಲ್ಲಿ ಈ ಬಾರಿ ವಿಶೇಷವಾಗಿರುತ್ತದೆ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್, ಬಿಸಿಸಿಐ ನಿಂದ ಮತ್ತೊಂದು ಸಿಹಿ ಸುದ್ದಿ.

ಭಾರತದಲ್ಲಿ ಈ ಬಾರಿ ವಿಶೇಷವಾಗಿರುತ್ತದೆ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್, ಬಿಸಿಸಿಐ ನಿಂದ ಮತ್ತೊಂದು ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಇನ್ನೇನು ವಿಶ್ವದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಆಗಿರುವ ಭಾರತದ ಶ್ರೀಮಂತ ಕ್ರಿಕೆಟ್ ಹಬ್ಬ ಐಪಿಎಲ್ 2022 ರ ಮೆಗಾ ಹರಾಜು ಇದೇ ಫೆಬ್ರವರಿ 12 ಹಾಗೂ 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದೆ. ಹೌದು ಗೆಳೆಯರೇ ಇನ್ನೇನು ಐಪಿಎಲ್ನ ಎಲ್ಲಾ ತಯಾರಿಗಳು ಕೂಡ ತೆರೆಮರೆಯಲ್ಲಿ ನಡೆದು ಟೂರ್ನಮೆಂಟಿಗೆ ಅಡಿ ಇಡೋಕೆ ಸಂಸ್ಥೆ ಸಿದ್ಧವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಮಹಾಮಾರಿ ಇರುವ ಕಾರಣದಿಂದಾಗಿ ಐಪಿಎಲ್ ಟೂರ್ನಮೆಂಟನ್ನು ಭಾರತದಲ್ಲಿಯೇ ನಡೆಸುವುದು ಅನುಮಾನ ಎಂದು ಭಾವಿಸಲಾಗಿತ್ತು.

ಇಷ್ಟು ಮಾತ್ರವಲ್ಲದೆ ಕಳೆದ ಬಾರಿಯೂ ಕೂಡ ಐಪಿಎಲ್ನಲ್ಲಿ ಮೊದಲ ಚಾರಣವನ್ನು ಭಾರತದಲ್ಲಿ ನಡೆಸಲಾಗಿತ್ತು. ಆದರೂ ಕೂಡ ಕೆಲ ಆಟಗಾರರಿಗೆ ಪಾಸಿಟಿವ್ ಬಂದ ಕಾರಣ ಉಳಿದ ಅರ್ಧ ಐಪಿಎಲ್ ಅನ್ನು ದುಬೈನಲ್ಲಿ ಮಾಡಲಾಗಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ಅನ್ನು ದುಬೈ ಅಥವಾ ಸೌತ್ ಆಫ್ರಿಕಾದಲ್ಲಿ ಮಾಡುವ ಕುರಿತಂತೆ ಚರ್ಚೆಗಳು ನಡೆದಿದ್ದವು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಕುರಿತಂತೆ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದನ್ನು ಸಂಸ್ಥೆ ನೀಡಿದೆ ಎಂದು ಹೇಳಲಾಗುತ್ತಿದೆ.

ಅದೇನೆಂದರೆ ಸೌರವ್ ಗಂಗುಲಿ ಸೇರಿದಂತೆ ಬಿಸಿಸಿಐನ ಪ್ರಮುಖರು ಈ ಬಾರಿಯ ಐಪಿಎಲ್ ಅನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಅಥವಾ ಅಹಮದಾಬಾದ್ನಲ್ಲಿ ನಡೆಸುವ ಕುರಿತಂತೆ ಯೋಜನೆಯನ್ನು ಮಾಡಿದ್ದಾರಂತೆ. ಮಹಾರಾಷ್ಟ್ರದ ಮುಂಬೈನಲ್ಲೇ ಮೂರು ಕ್ರೀಡಾಂಗಣಗಳಿವೆ ಹಾಗೂ ಪುಣೆಯಲ್ಲಿರುವ ಕ್ರೀಡಾಂಗಣವನ್ನು ಕೂಡ ಬಳಸಿಕೊಳ್ಳಬಹುದಾಗಿದೆ. ಮುಂಬೈನ ಕ್ರೀಡಾಂಗಣಗಳಲ್ಲಿ ಲೀಗ್ ಪಂದ್ಯಗಳನ್ನು ನಡೆಸಿದರೆ ಅಹಮದಾಬಾದ್ ನಲ್ಲಿ ಪ್ಲೇ ಆಫ್ ಹಾಗೂ ಅದರ ಮುಂದಿನ ಹಂತದ ಎಲ್ಲಾ ಪಂದ್ಯಗಳನ್ನು ಆಯೋಜಿಸುವ ಕುರಿತಂತೆ ಬಿಸಿಸಿಐ ಯೋಚನೆ ಮಾಡುತ್ತಿದೆ ಎಂದು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಸದ್ಯಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖುಷಿಪಡುವ ವಿಚಾರವೇನೆಂದರೆ ಮುಂಬೈನಲ್ಲಿ ಪಂದ್ಯಗಳು ನಡೆದಾಗ 25% ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಕ್ರಿಕೆಟನ್ನು ನೋಡುವ ಅವಕಾಶವನ್ನು ನೀಡಲಾಗುತ್ತದೆಯಂತೆ. ಇದಕ್ಕೆಲ್ಲಾ ಸರಿಯಾದ ಉತ್ತರ ಎನ್ನುವುದನ್ನು ಮೆಗಾ ಹರಾಜು ಮುಗಿದ ನಂತರವಷ್ಟೇ ಬಿಸಿಸಿಐ ಅಧಿಕೃತವಾಗಿ ನೀಡಲಿದೆ.