ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡದ ನಾಯಕನಾಗಿ ಮಿಂಚಿದ್ದ ಕೊಹ್ಲಿ ರವರ ಸ್ಥಾನವನ್ನು ತುಂಬಬಲ್ಲ ಟಾಪ್ 4 ಆಟಗಾರು ಯಾರ್ಯಾರು ಗೊತ್ತೇ??

27

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಐಪಿಎಲ್ – 2022ರಲ್ಲಿ ಹೊಸ ತಂಡ ಕಟ್ಟಲು ಮುಂದಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್ ರನ್ನು ರಿಟೇನ್ ಮಾಡಿಕೊಂಡಿದೆ. ಇದರ ಜೊತೆ ಆರ್ಸಿಬಿ ಈ ಭಾರಿ ಹೊಸ ನಾಯಕನನ್ನು ಸಹ ಹುಡುಕುತ್ತಿದೆ. ವಿರಾಟ್ ನಾಯಕರಾಗಿ ಮುಂದುವರೆಯುತ್ತಿಲ್ಲವಾದ ಕಾರಣ, ಹೊಸ ನಾಯಕನನ್ನ ತರಲು ಆರ್ಸಿಬಿ ಮುಂದಾಗಿದೆ. ಮೂಲಗಳ ಪ್ರಕಾರ ಸದ್ಯ ಆರ್ಸಿಬಿಯ ಕ್ಯಾಪ್ಟನ್ ರೇಸ್ ನಲ್ಲಿ ಈ ಕೆಳಗಿನ ನಾಲ್ವರು ಆಟಗಾರರು ಇದ್ದು, ಇವರಲ್ಲಿ ಯಾರಾದರೂ ಒಬ್ಬರು ಆರ್ಸಿಬಿಯ ನೂತನ ನಾಯಕರಾಗುವುದು ಪಕ್ಕಾ ಎನ್ನಲಾಗುತ್ತಿದೆ. ಬನ್ನಿ ಆ ನಾಲ್ವರು ಯಾರು ಎಂದು ತಿಳಿಯೋಣ.

1.ಡೇವಿಡ್ ವಾರ್ನರ್ : ಸದ್ಯ ಟಿಕ್ ಟಾಕ್ ನಲ್ಲಿ ಕನ್ನಡದ ಹಾಡಿಗೆ ಡ್ಯಾನ್ಸ್ ಮಾಡಿ, ಕನ್ನಡಿಗರನ್ನ ರಂಜಿಸಿರುವ ಡೇವಿಡ್ ವಾರ್ನರ್ ರವರನ್ನ ಹರಾಜಿನಲ್ಲಿ ಖರೀದಿಸಿ, ನಾಯಕತ್ವ ಪಟ್ಟ ಕಟ್ಟಲು ನಿರ್ಧರಿಸಿದೆ. ವಿರಾಟ್ ಹಾಗೂ ವಾರ್ನರ್ ಸಂಭಂದ ಸಹ ಉತ್ತಮವಾಗಿರುವ ಕಾರಣ ಈ ಆಯ್ಕೆಗೆ ಆರ್ಸಿಬಿ ಮುಂದಾಗಿದೆ.

2.ಗ್ಲೆನ್ ಮ್ಯಾಕ್ಸವೆಲ್ : ಎಬಿಡಿ ಬದಲು ರಿಟೇನ್ ಆಗಿರುವ ಮ್ಯಾಕ್ಸವೆಲ್ ಗೆ ಸಹ ನಾಯಕತ್ವ ವಹಿಸಲು ಚಿಂತಿಸುತ್ತಿದೆ. ಮ್ಯಾಕ್ಸವೆಲ್ ಈ ಹಿಂದೆ ಪಂಜಾಬ್ ತಂಡದ ನಾಯಕರಾಗಿರುವ ಅನುಭವ ಇದೆ. ಹರಾಜಿನಲ್ಲಿ ಉತ್ತಮ ಆಟಗಾರನನ್ನು ಖರೀದಿಸಲು ಆಗದ ಸಂದರ್ಭದಲ್ಲಿ ಮ್ಯಾಕ್ಸವೆಲ್ ನಾಯಕರಾಗುವ ಸಾಧ್ಯತೆ ಇದೆ.

3.ಶ್ರೇಯಸ್ ಅಯ್ಯರ್ : ನಾಯಕನಾಗಬೇಕು ಎಂಬ ಕಾರಣಕ್ಕೆ ಹರಾಜಿನಲ್ಲಿ ಭಾಗವಹಿಸುತ್ತಿರುವ ಶ್ರೇಯಸ್ ಅಯ್ಯರ್ ರವರನ್ನು ಖರೀದಿಸಿದರೇ, ಆರ್ಸಿಬಿ ನಾಯಕತ್ವ ಪಟ್ಟ ಅಯ್ಯರ್ ಗೆ ಒಲಿಯಲಿದೆ. ಆದರೇ ಅವರು ಹರಾಜಿನಲ್ಲಿ ಆರ್ಸಿಬಿ ಪಾಲಾಗಬೇಕು ಅಷ್ಟೇ.

4.ಮನೀಶ್ ಪಾಂಡೆ : ಆರ್ಸಿಬಿ ಪಾಲಿಗೆ ಮೊದಲ ಶತಕ ಭಾರಿಸಿದ ಬ್ಯಾಟ್ಸಮನ್ ಹಾಗೂ ಕನ್ನಡಿಗ ಪಾಂಡೆ ಈ ಭಾರಿ ಹರಾಜಿಗೆ ಲಭ್ಯರಿದ್ದಾರೆ. ಹರಾಜಿನಲ್ಲಿ ಪಾಂಡೆ ಆರ್ಸಿಬಿಗೆ ಬಂದರೇ, ಖಂಡಿತ ಅವರನ್ನು ನಾಯಕನ ಪಟ್ಟಕ್ಕೆ ಕೂರಿಸಲು ಮ್ಯಾನೇಜ್ ಮೆಂಟ್ ಚಿಂತಿಸಿದೆ. ಪಾಂಡೆ ತಂಡಕ್ಕೆ ಹೊಸತನ್ನು ತರುವ ಶಕ್ತಿ ಹೊಂದಿದ್ದಾರೆ. ಮೇಲಾಗಿ ಕನ್ನಡಿಗ ಎಂಬ ಬ್ರಾಂಡ್ ಸಹ ಅಭಿಮಾನಿಗಳ ಹುಮ್ಮಸ್ಸಿಗೆ ಕಾರಣವಾಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.