ಸಿದ್ದು-ಡಿಕೆಶಿ ಬಣಗಳ ಜಗಳದ ನಡುವೆ, ಚಳಿ ಕಾಯಿಸಲು ಮುಂದಾದ ಹಿರಿಯ ಕಾಂಗ್ರೇಸ್ ನಾಯಕರು, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್. ಏನು ಗೊತ್ತೇ??

ಸಿದ್ದು-ಡಿಕೆಶಿ ಬಣಗಳ ಜಗಳದ ನಡುವೆ, ಚಳಿ ಕಾಯಿಸಲು ಮುಂದಾದ ಹಿರಿಯ ಕಾಂಗ್ರೇಸ್ ನಾಯಕರು, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಧಿಕಾರಕ್ಕೆ ಬರುತ್ತಿರುವ ಕನಸು ಕಾಣುತ್ತಿರುವ ರಾಜ್ಯ ಕಾಂಗ್ರೇಸ್ ಪಕ್ಷದಲ್ಲಿ ಈಗ ಬಣಜಗಳ ತಾರಕಕ್ಕೇರಿದೆ. ಕೆಲವು ದಿನಗಳ ಹಿಂದೆ ಮಾಜಿ ಶಾಸಕ ಅಶೋಕ ಪಟ್ಟಣ ಹಾಗೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ವೈರಲ್ ಆಗಿತ್ತು.

ಈ ನಡುವೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಬಹಿರಂಗವಾಗಿ ಟೀಕಿಸಿರುವ ಕಾರಣ, ಮಾಜಿ ಶಾಸಕ ಅಶೋಕ್ ಪಟ್ಟಣರವರಿಗೆ ಕೆ.ಪಿ.ಸಿ.ಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಹೀಗೆ ಕಾಂಗ್ರೇಸ್ ಪಕ್ಷದಲ್ಲಿ ಸಿದ್ದು ಹಾಗೂ ಡಿಕೆಶಿ ಬಣ ಜಗಳ ತಾರಕಕ್ಕೇರಿದೆ. ಈ ಮಧ್ಯೆ ಈ ಬಣ ಜಗಳಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದ ಹಿರಿಯ ಕಾಂಗ್ರೇಸ್ ನಾಯಕರು ಈಗ ಸಿದ್ದು ಮತ್ತು ಡಿಕೆಶಿ ಬಣಕ್ಕೆ ಸೆಡ್ಡು ಹೊಡೆಯಲು ಒಂದು ಸಮನ್ವಯ ಸಮಿತಿ ರಚಿಸಿ ಎಂದು ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.

ಬಣ ಜಗಳಗಳಿಂದ ಬೀದಿಯಲ್ಲಿ ಕಾಂಗ್ರೇಸ್ ಪಕ್ಷದ ಮಾನ ಹರಾಜಾಗುತ್ತಿದ್ದು, ಜನರಲ್ಲಿ ತಪ್ಪು ತಿಳುವಳಿಕೆ ಹೋಗುತ್ತಿದೆ‌. ಹಾಗಾಗಿ ಮುಂದೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು, ಈಗಿನಿಂದಲೇ ಶಿಸ್ತು ಕ್ರಮಕ್ಕೆ ಮುಂದಾಗಬೇಕು. ಹಾಗಾಗಿ ಹಿರಿಯ ಕಾಂಗ್ರೇಸ್ ನಾಯಕರನ್ನು ಒಳಗೊಂಡ ಒಂದು ಸಮನ್ವಯ ರಚಿಸಿ, ಆ ಮೂಲಕ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತನ್ನು ಕಾಪಾಡಿ ಎಂದು ಹೈಕಮಾಂಡ್ ಗೆ ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೇಸ್ ಬಣಜಗಳಕ್ಕೆ ಈಗ ಹಿರಿಯ ಕಾಂಗ್ರೇಸ್ ನಾಯಕರು ಸಹ ಭಾಗಿಯಾಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.