ಇದಪ್ಪ ಮಸ್ತ್ ಕೆಲಸ ಅಂದ್ರೆ, ಧಾರವಾಹಿ ವಿರುದ್ಧ ಸ್ಟೇಷನ್ ಮೆಟ್ಟಿಲೇರಿದ ವೀಕ್ಷಕರು ಯಾಕೆ ಗೊತ್ತೇ?? ಕಾರಣ ಕೇಳಿದರೆ ಭೇಷ್ ಅಂತೀರಾ.

ಇದಪ್ಪ ಮಸ್ತ್ ಕೆಲಸ ಅಂದ್ರೆ, ಧಾರವಾಹಿ ವಿರುದ್ಧ ಸ್ಟೇಷನ್ ಮೆಟ್ಟಿಲೇರಿದ ವೀಕ್ಷಕರು ಯಾಕೆ ಗೊತ್ತೇ?? ಕಾರಣ ಕೇಳಿದರೆ ಭೇಷ್ ಅಂತೀರಾ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಾಕಷ್ಟು ಬಲವಾಗಿ ಬೆಳೆದಿದೆ. ಇಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ವಿಚಾರಗಳು ಅದಕ್ಕೆ ತಕ್ಕಂತೆ ಕ್ಷಿಪ್ರವಾಗಿ ಜನರಿಗೆ ತಲುಪಿ ಅದರ ಅರ್ಹತೆಗೆ ತಕ್ಕಂತೆ ವಿವಾದಗಳು ಅಥವಾ ಪ್ರಶಂಸೆಗಳು ಮೂಡಿಬರುತ್ತವೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರ ಟಿವಿ ಚಾನಲ್ ಗಳಲ್ಲಿ ಧಾರವಾಹಿಗಳು ದೊಡ್ಡಮಟ್ಟದಲ್ಲಿ ಜನರನ್ನು ತಲುಪುತ್ತಿವೆ. ಟಿವಿ ವಾಹಿನಿಗಳು ಕೂಡ ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸ್ಪರ್ಧೆಗೆ ಬಿದ್ದವರಂತೆ ಇದ್ದಾರೆ.

ಸಿನಿಮಾಗಳಿಗಿಂತ ಹೆಚ್ಚಾಗಿ ಧಾರವಾಹಿಗಳು ರಾಜ್ಯದ ಪ್ರತಿಯೊಂದು ಮೂಲೆಮೂಲೆಗಳಲ್ಲೂ ಕೂಡ ತಲುಪಿ ಪ್ರೇಕ್ಷಕರಿಗೆ ಸಂಜೆಯಾದರೆ ಸಾಕು ಮನರಂಜನೆಯ ಮಹಾಪೂರವನ್ನು ನೀಡುತ್ತದೆ. ಹೀಗಾಗಿ ಪ್ರತಿಯೊಬ್ಬ ವೀಕ್ಷಕರ ನೆಚ್ಚಿನ ಮನರಂಜನೆ ಮೂಲ ಧಾರವಾಹಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಆದರೆ ಇಂದು ನಾವು ಹೇಳಲು ಹೊರಟಿರುವುದು ನಮ್ಮ ಕನ್ನಡದ ಕಿರುತೆರೆಯ ಧಾರವಾಹಿಗಳ ಕುರಿತಂತೆ ಅಲ್ಲ ಬದಲಾಗಿ ತಮಿಳಿನ ಧಾರವಾಹಿ ಕುರಿತಂತೆ. ಅಷ್ಟಕ್ಕೂ ಈ ಧಾರವಾಹಿ ಕುರಿತಂತೆ ಏನಪ್ಪಾ ವಿಶೇಷ ಎಂದು ಕೇಳಬಹುದು. ವಿಶೇಷ ಇದೆ ಸ್ನೇಹಿತರೆ ಅದೇನೆಂದರೆ ಈ ದಾರವಾಹಿಯ ವಿರುದ್ಧ ಅಲ್ಲಿನ ಪ್ರೇಕ್ಷಕರು ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

ಹಾಗಿದ್ದರೆ ಅಷ್ಟಕ್ಕೂ ಈ ಧಾರಾವಾಹಿ ಮಾಡಿರುವ ತಪ್ಪೇನು ಧಾರವಾಹಿ ಯಾವುದು ಎನ್ನುವುದನ್ನು ತಿಳಿಯೋಣ ಬನ್ನಿ. ಹೌದು ತಮಿಳು ಕಿರುತೆರೆಯ ಕ್ಷೇತ್ರದಲ್ಲಿ ಭಾಗ್ಯಲಕ್ಷ್ಮಿ ಎಂಬ ಧಾರವಾಹಿ ದೊಡ್ಡಮಟ್ಟದ ಜನಪ್ರಿಯತೆ ಹೊಂದಿದ್ದು ಈ ಧಾರವಾಹಿಗೆ ದೊಡ್ಡಮಟ್ಟದ ವೀಕ್ಷಕ ವರ್ಗವೂ ಕೂಡ ಇದೆ. ಆದರೆ ಈ ದಾರವಾಹಿಯಲ್ಲಿ ಪ್ರಸಾರವಾಗಿರುವಂತಹ ಒಂದು ದೃಶ್ಯದ ವಿರುದ್ಧ ಈಗ ವೀಕ್ಷಕರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ದೃಶ್ಯದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಗೆ ದೌ’ರ್ಜನ್ಯವನ್ನು ಹೆಸರಿಟ್ಟಿದ್ದು ಆಕೆ ಆತ್ಮಹ’ತ್ಯೆ ಮಾಡಿಕೊಳ್ಳುತ್ತಾಳೆ. ಇದನ್ನು ಈಗಲೇ ಡಿಲೀಟ್ ಮಾಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಧಾರಾವಾಹಿಗಳು ಜನರಿಗೆ ಒಳ್ಳೆಯ ಸಂದೇಶಗಳನ್ನು ಸಾರಬೇಕು ಇಂತಹ ವಿಕೃತಿಗಳನ್ನು ಅಲ್ಲ ಎಂಬುದಾಗಿ ಹೇಳಿದ್ದಾರೆ. ಈ ಧಾರಾವಾಹಿಯನ್ನು ಎಷ್ಟೋ ಸಂಸಾರಗಳು ಜೊತೆಯಲ್ಲಿ ಕೂತು ನೋಡುತ್ತಾರೆ ಇಂತಹ ದೃಶ್ಯಗಳು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂಬುದಾಗಿ ಕೂಡ ಇಲ್ಲಿ ಹೇಳಲಾಗಿದೆ